Pakistan: ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ರೊಚ್ಚಿಗೆದ್ದ ಪಾಕ್ ತಂಡದ ನಾಯಕ!

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆಯೋಜನೆ ಮಾಡಿ ಕೈಸುಟ್ಟುಕೊಂಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಜುಗರ ಅನುಭವಿಸಿದ್ದರೆ. ಪಾಕಿಸ್ತಾನದಲ್ಲಿ ಕೇವಲ ಒಂದೇ ಒಂದು ಪಂದ್ಯ ಆಡಿದ ಪಾಕಿಸ್ತಾನ ಲೀಗ್ ಹಂತದಲ್ಲೇ ಹೊರಬಿದ್ದು ಅವಮಾನ ಅನುಭವಿಸಿತು.

ಪಾಕಿಸ್ತಾನ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿರುವ ಮೊಹಮ್ಮದ್ ರಿಜ್ವಾನ್ ಇದೀಗ ಪಾಕಿಸ್ತಾನ ಕ್ರಿಕಟ್ ಮಂಡಳಿಯ ವಿರುದ್ಧವೇ ಸಿಟ್ಟಾಗಿದ್ದಾರೆ. ಅಕ್ಟೋಬರ್‌ನಲ್ಲಿ ನಾಯಕನ ಪಾತ್ರವನ್ನು ವಹಿಸಿಕೊಂಡಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಜ್ವಾನ್, ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ಟಿ20ಐ ಸರಣಿಯಿಂದ ಕೈಬಿಟ್ಟಿದ್ದಕ್ಕೆ ಸಿಟ್ಟಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಭೇಟಿಯಾಗಲಿದ್ದು ರಾಜೀನಾಮೆ ನೀಡುವ ಸಾಧ್ಯತೆ ಇದೆ.

Mohammad rizwan meeting pcb chairman odi captain status

ಟಿ20 ಸರಣಿಯಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನ

ಮೊಹಮ್ಮದ್ ರಿಜ್ವಾನ್ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ವಿಶ್ರಾಂತಿ ಪಡೆದರು ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯಲ್ಲಿ ಆಡಿದರು. 2025 ರ ಚಾಂಪಿಯನ್ಸ್ ಟ್ರೋಫಿಯ ಬಳಿಕ ನಡೆದ ಕಿವೀಸ್ ವಿರುದ್ಧದ ಟಿ20ಐ ತಂಡದಿಂದ ಕೈಬಿಡಲಾಯಿತು. ಟಿ20ಐ ತಂಡದಿಂದ ತನ್ನನ್ನು ಕೈಬಿಟ್ಟಿರುವ ಬಗ್ಗೆ ಸ್ಪಷ್ಟನೆ ಪಡೆಯಲು ಅವಕಾಶ ಸಿಕ್ಕ ತಕ್ಷಣ ರಿಜ್ವಾನ್ ಪಿಸಿಬಿ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ ಎಂದು ಪಿಸಿಬಿ ಮೂಲವೊಂದು ಟೆಲಿಕಾಂ ಏಷ್ಯಾ ಸ್ಪೋರ್ಟ್‌ಗೆ ತಿಳಿಸಿದೆ.

ಪಾಕಿಸ್ತಾನ ಮುಖ್ಯ ಕೋಚ್ ಜೊತೆಗಿನ ಸಮಸ್ಯೆ

ಇದು ಟಿ20 ತಂಡದಿಂದ ಕೈಬಿಟ್ಟಿದ್ದಕ್ಕೆ ಮಾತ್ರ ಅಸಮಾಧಾನಗೊಂಡಿರುವುದಲ್ಲ ಎನ್ನಲಾಗಿದೆ. ಮೊಹಮ್ಮದ್ ರಿಜ್ವಾನ್‌ಗೆ ಪಾಕಿಸ್ತಾನದ ಪ್ರಸ್ತುತ ಮುಖ್ಯ ಕೋಚ್ ಮತ್ತು ರಾಷ್ಟ್ರೀಯ ಆಯ್ಕೆದಾರ ಆಕಿಬ್ ಜಾವೇದ್ ಜೊತೆಯೂ ನೇರ ಸಂಪರ್ಕವಿಲ್ಲ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಐದು ಬೌಲರ್‌ಗಳೊಂದಿಗೆ ಆಡಲು ರಿಜ್ವಾನ್ ಬಯಸಿದ್ದರು.

ಆದರೆ ಕೊನೆಯಲ್ಲಿ, ಪಾಕಿಸ್ತಾನ ನಾಲ್ಕು ಬೌಲರ್‌ಗಳು ಮತ್ತು ಇಬ್ಬರು ಆಲ್‌ರೌಂಡರ್ ಗಳನ್ನು ಕಣಕ್ಕಿಳಿಸಿತು. ರಿಜ್ವಾನ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು ಮತ್ತು ನಂತರ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಅವರಿಗೆ ಯಾವುದೇ ಸ್ವಾತಂತ್ರವನ್ನು ನೀಡಿಲ್ಲದ್ದಕ್ಕೆ ಅವರು ಸಿಟ್ಟಾಗಿದ್ದಾರೆ. ಇದೇನು ಪಾಕಿಸ್ತಾನ ತಂಡದಲ್ಲಿ ಹೊಸದಲ್ಲ. ಆಕಿಬ್ ಆಯ್ಕೆದಾರರಾಗಿ ಬಂದಾಗ, ಅವರು ಟೆಸ್ಟ್ ತಂಡಕ್ಕೆ ಪ್ಲೇಯಿಂಗ್ ಇಲೆವೆನ್‌ ನಿಯಂತ್ರಣವನ್ನು ವಹಿಸಿಕೊಂಡರು. ಅದಕ್ಕಾಗಿಯೇ ಗ್ಯಾರಿ ಕರ್ಸ್ಟನ್ ತಂಡವನ್ನು ಬಿಟ್ಟರು, ಬಳಿಕ ಜೇಸನ್ ಗಿಲ್ಲೆಸ್ಪಿ ಕೂಡ ತಂಡದಿಂದ ದೂರವಾದರು.

ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ರಿಜ್ವಾನ್‌ ತಮಗೆ ಹೆಚ್ಚಿನ ಅಧಿಕಾರ ಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಅಧಿಕಾರ ನೀಡದೇ ಇದ್ದರೆ ಏಕದಿನ ಮಾದರಿ ನಾಯಕತ್ವ ತೊರೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+