ODI World Cup: ಈತ ಒಬ್ಬನೇ ಭಾರತ ತಂಡದ ದೌರ್ಬಲ್ಯ! ಮಿಸ್ಬಾ, ಅಕ್ರಮ್ ಹೇಳಿದ್ದೇನು?

ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತ ಆಡಿದ 6 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯ ಭಾರತ ತಂಡ ಆಡುತ್ತಿರುವ ರೀತಿಯನ್ನು ನೋಡಿದರೆ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತವೇ ಮೊದಲ ಸ್ಥಾನದಲ್ಲಿರುತ್ತದೆ.

ಮೊದಲ 5 ಪಂದ್ಯಗಳನ್ನು ಚೇಸಿಂಗ್ ಮಾಡಿ ಗೆದ್ದಿದ್ದ ಭಾರತ, ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 229 ರನ್ ಗಳಿಸಿದರೂ, ಆ ಮೊತ್ತವನ್ನು ರಕ್ಷಣೆ ಮಾಡಿದ್ದಲ್ಲದೆ 100 ರನ್‌ಗಳ ಭಾರಿ ಜಯ ಸಾಧಿಸಿತ್ತು, ಇದು ಭಾರತದ ಆತ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

 Misbah and Akram Identify Indias Weakest Link in 2023 World Cup

ಮೊದಲು ಬ್ಯಾಟಿಂಗ್ ಮಾಡಿದ ಭಾರತ 229 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು, ಆದರೆ, ಬುಮ್ರಾ, ಶಮಿ ಮತ್ತು ಕುಲದೀಪ್ ಯಾದವ್ ಅವರ ಮಾರಕ ಬೌಲಿಂಗ್‌ ಮುಂದೆ ಇಂಗ್ಲೆಂಡ್‌ನ ಬ್ಯಾಟಿಂಗ್ ಪಡೆಗೆ ಉತ್ತರ ಇರಲೇ ಇಲ್ಲ, 129 ರನ್‌ಗಳಿಸುಷ್ಟರಲ್ಲಿ ಆಲೌಟ್ ಆಗುವ ಮೂಲಕ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದೆ. ಭಾರತದ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತವಾಗಿದೆ, ಮುಂದಿನ 3 ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ಭಾರತ ಸೆಮಿಫೈನಲ್ ಸ್ಥಾನ ಖಚಿತವಾಗುತ್ತದೆ.

ಈತನೇ ಭಾರತ ತಂಡದ ದೌರ್ಬಲ್ಯ

ಸೆಮಿಫೈನಲ್‌ಗೆ ಮುನ್ನ ಭಾರತ ತಂಡ ಎಲ್ಲಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎಲ್ಲಾ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್ ಮಾತ್ರ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ.

ಶ್ರೇಯಸ್ ಅಯ್ಯರ್ ಈ ಬಾರಿ ವಿಶ್ವಕಪ್‌ನಲ್ಲಿ ಆಡಿದ ಪಂದ್ಯಗಳಲ್ಲಿ ಕ್ರಮವಾಗಿ 0, 25, 53, 19, 33 ಮತ್ತು 4 ರನ್ ಗಳಿಸಿದ್ದಾರೆ. ಒಟ್ಟು 134 ರನ್ ಮಾತ್ರ ಗಳಿಸಿದ್ದಾರೆ, ಪಾಕಿಸ್ತಾನದ ವಿರುದ್ಧ ಅರ್ಧಶತಕ ಗಳಿಸಿದ್ದು ಬಿಟ್ಟರೆ ನ್ಯೂಜಿಲೆಂಡ್ ವಿರುದ್ಧ 33 ರನ್ ಗಳಿಸಿದ್ದು ಅವರ ನಂತರದ ಉತ್ತಮ ಮೊತ್ತವಾಗಿದೆ. ಅಲ್ಲದೆ ಅವರು ಪ್ರತಿ ಬಾರಿ ಶಾರ್ಟ್ ಬಾಲ್‌ಗೆ ಔಟಾಗುತ್ತಿರುವುದು ತಲೆನೋವಾಗಿದೆ.

ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಈ ಬಗ್ಗೆ ಮಾತನಾಡಿದ್ದು, ಶ್ರೇಯಸ್ ಅಯ್ಯರ್ ಅವರು ವಿಫಲವಾಗುತ್ತಿರುವುದು ತಂಡದಲ್ಲಿ ಅವರ ಸ್ಥಾನವನ್ನು ಅಪಾಯಕ್ಕೆ ತಳ್ಳಿದೆ ಎಂದು ಹೇಳಿದ್ದಾರೆ. ನಿಮ್ಮ ದೌರ್ಬಲ್ಯವು ಮುನ್ನೆಲೆಗೆ ಬಂದಾಗ, ಎಲ್ಲಾ ತಂಡಗಳು ಅದನ್ನು ಬಳಸಿಕೊಳ್ಳುತ್ತವೆ ಎಂದಿರುವ ಅವರು, ಹಾರ್ದಿಕ್ ಪಾಂಡ್ಯ ಫಿಟ್ ಆದರೆ ಅಯ್ಯರ್ ಅವರ ಸ್ಥಾನದಲ್ಲಿ ವಾಪಸ್ ಬರುವ ಸಾಧ್ಯತೆ ಇದೆ, ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು ಎಂದು ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ 'ಭಾರತದ ದುರ್ಬಲ ಲಿಂಕ್' ಎಂದು ವಾಸಿಂ ಅಕ್ರಮ್ ಒಪ್ಪಿಕೊಂಡಿದ್ದಾರೆ, ಶ್ರೇಯಸ್ ಅಯ್ಯರ್ ಬದಲಾಗಿ ಇಶಾನ್ ಕಿಶನ್ ಅವರನ್ನು ಆಡಿಸುವ ಆಯ್ಕೆಯನ್ನು ಅವರು ಪ್ರಸ್ತಾಪಿಸಿದ್ದಾರೆ.

"ಹೌದು, ಇಶಾನ್ ಕಿಶನ್ ಹೊರಗೆ ಕುಳಿತಿರುವ ಕಾರಣ ಮತ್ತು ಅವರು ಎಡಗೈ ಆಟಗಾರನಾಗಿರುವುದರಿಂದ ಅವರು ಪ್ರದರ್ಶನ ನೀಡಬೇಕಾಗಿದೆ. ಇಶಾನ್ ಏಷ್ಯಾಕಪ್‌ನಲ್ಲಿ ಆಡಿದ ಮೊದಲ ಪಂದ್ಯವನ್ನು ನೆನಪಿಸಿಕೊಳ್ಳಿ, ಆದ್ದರಿಂದ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು," ಅಕ್ರಮ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+