Mirabai Chanu: ಮಹತ್ವದ ಟೂರ್ನಿಯಲ್ಲಿ ಕಣಕ್ಕೆ ಇಳಿದು ಒಲಿಂಪಿಕ್ಸ್ ಅರ್ಹತೆ ಪಡೆದ ಮೀರಾಬಾಯಿ ಚಾನು

ಜಪಾನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದ ಸ್ಟಾರ್ ವೇಟ್‌ ಲಿಫ್ಟರ್‌ ಮೀರಾಬಾಯಿ ಚಾನು, ಪ್ಯಾರೀಸ್‌ ಓಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕದ ಪದಕದ ಬಣ್ಣವನ್ನು ಬದಲಿಸುವ ಆಸೆಯನ್ನು ಚಿಗುರಿಸಿದ್ದಾರೆ.

ಐಡಬ್ಲ್ಯುಎಫ್ ವಿಶ್ವಕಪ್‌ನಲ್ಲಿ ಮಹಿಳೆಯರ 49 ಕೆಜಿ ತೂಕ ವಿಭಾಗದ ಬಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು. ಮೀರಾ ಅವರು ಒಟ್ಟು 205 ಕೆಜಿ ಭಾರವನ್ನು ಎತ್ತಿರುವ ದಾಖಲೆಯನ್ನು ಹೊಂದಿದ್ದಾರೆ. ಆದರೆ ವಿಶ್ವಕಪ್‌ ಬಿ ಗುಂಪಿನ ಪಂದ್ಯದಲ್ಲಿ ಮೀರಾ ಸ್ನ್ಯಾಚ್‌ನಲ್ಲಿ 75, 79, 81 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್‌ನಲ್ಲಿ 98, 103 ಭಾರವನ್ನು ಸುಲಭವಾಗಿ ಎತ್ತಿದರು. ಕ್ಲೀನ್‌ & ಜರ್ಕ್‌ನಲ್ಲಿ ಮೀರಾ ಎತ್ತಿದ್ದ 106 ಕೆ.ಜಿ ಭಾರವನ್ನು ಅನರ್ಹಗೊಳಿಸಲಾಯಿತು.

Mirabai Chanu Mirabai Chanu qualified for the Olympics by competing in an important tournament

ಮೂರನೇ ಸ್ಥಾನ

ಗಾಯದಿಂದ ಬಳಲಿದ ಬಳಿಕ ಇದೆ ಮೊದಲ ಬಾರಿಗೆ ಅಂಗಳಕ್ಕೆ ಇಳಿದಿದ್ದ ಮೀರಾಬಾಯಿ ಚಾನು ಭರ್ಜರಿ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್‌ನ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಮೀರಾ ತಾನು ಹಾಕಿಕೊಂಡಿದ್ದ ಯೋಜನೆಯಂತೆ ಭಾರ ಎತ್ತಿದರು. ಈ ಬಾರಿ ಮೀರಾಬಾಯಿ ಚಾನು ಮೊದಲೇ ಹಾಕಿಕೊಂಡಿದ್ದ ಯೋಜನೆಯಂತೆ ಆರಂಭದಿಂದ ಅತ್ಯಂತ ಕಡಿಮೆ ತೂಕದಿಂದ ಶುರು ಮಾಡಿದ್ದ ಮೀರಾ ಒಟ್ಟು 184 ಕೆ.ಜಿ ಭಾರ ಎತ್ತಿ ಐದು ಲಿಫ್ಟ್ ಗಳಲ್ಲಿ ಪೂರ್ಣಗೊಳಿಸಿದರು. ಪ್ಯಾರಿಸ್‌ಗೆ ಹೋಗುವ ಟಿಕೆಟ್‌ಗಾಗಿ ಮೀರಾ ಈ ಟೂರ್ನಿಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿತ್ತು.

ಅಮೆರಿಕಾದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಮೀರಾ ಅನಿವಾರ್ಯ ಎಂಬ ಕಾರಣಕ್ಕೆ ಮೈದಾನಕ್ಕೆ ಇಳಿದರು. ಈ ವಿಶ್ವಕಪ್‌ನಲ್ಲಿ ಆಡುವುದು ಕಡ್ಡಾಯವಾಗಿದ್ದರಿಂದ ಅವರು ಅಂಗಳಕ್ಕೆ ಇಳಿದರು. ಅಲ್ಲದೆ ಕೋಚ್ ವಿಜಯ್ ಶರ್ಮಾ ಅವರ ತಂತ್ರದ ಪ್ರಕಾರ, ಭಾರೀ ತೂಕವನ್ನು ಏಕಾಏಕಿ ಎತ್ತಲು ಅವರಿಗೆ ನೀಡಲಾಗುವುದಿಲ್ಲ. ಎಲ್ಲವೂ ತಂತ್ರದ ಪ್ರಕಾರ ನಡೆಯಿತು.

ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಳಿಸುವುದು ಅವರ ಗುರಿಯಾಗಿತ್ತು. ಹೀಗಾಗಿ ಗಾಯದ ಮಧ್ಯೆ ಅವರು ಅಂಗಳಕ್ಕೆ ಇಳಿದರು. ಈಗ ಅವರ ಸಂಪೂರ್ಣ ಗಮನ ಒಲಿಂಪಿಕ್ ಸಿದ್ಧತೆಗಳ ಮೇಲೆ ನೆಟ್ಟಿದೆ. ಇಂಟರ್‌ನ್ಯಾಶನಲ್ ಅಸೋಸಿಯೇಷನ್‌ನ ಪ್ಯಾರಿಸ್ ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ ಮೀರಾ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾರೆ.

Mirabai Chanu Mirabai Chanu qualified for the Olympics by competing in an important tournament

ವಿಶ್ವ ಚಾಂಪಿಯನ್ ಮೀರಾಬಾಯಿ ಪ್ರಸ್ತುತ ಮಹಿಳೆಯರ 49 ಕೆಜಿ ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ ಚೀನಾದ ಜಿಯಾನ್ ಹುಯಿಹುವಾ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೇಯಾಂಕವನ್ನು ನವೀಕರಿಸಿದಾಗ ವಿಶ್ವಕಪ್ ಮುಕ್ತಾಯದ ನಂತರ ಅರ್ಹತಾ ಆಟಗಾರರ ಅಧಿಕೃತ ಘೋಷಣೆಯನ್ನು ಮಾಡಲಾಗುವುದು. ಪ್ರತಿ ವೇಟ್ ವಿಭಾಗದಲ್ಲಿ ಅಗ್ರ 10 ಲಿಫ್ಟರ್‌ಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ.

ಎರಡು ಕಡ್ಡಾಯ ಪಂದ್ಯಾವಳಿಗಳು ಮತ್ತು ಇತರ ಮೂರು ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸುವುದನ್ನು ಒಳಗೊಂಡಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ನಿಗದಿಪಡಿಸಿದ ಮಾನದಂಡಗಳನ್ನು ಮೀರಾಬಾಯಿ ಪೂರೈಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಭಾಯಿ ಚಾನು ಅವರು 202 ಕೆಜಿ ಭಾರ ಎತ್ತಿ ಬೆಳ್ಳಿ ಸಾಧನೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ಚೀನಾದ ಹ್ಯೂಹಿ 210 ಕೆಜಿ ಭಾರ ಎತ್ತುವ ಮೂಲಕ ಬಂಗಾರದ ಸಾಧನೆಯನ್ನು ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+