MI vs RR: ಮುಂಬೈನಲ್ಲಿ ಹಾರ್ದಿಕ್‌ ಪಡೆಯ ಸದ್ದಡಗಿಸಿದ ರಾಯಲ್ಸ್‌ಗೆ ಅಗ್ರ ಸ್ಥಾನ: ಇಂಡಿಯನ್ಸ್‌ಗೆ ಹ್ಯಾಟ್ರಿಕ್‌ ಸೋಲು

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ ಸೋಲುಗಳನ್ನು ಕಂಡಿದ್ದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ತವರಿನಲ್ಲೂ ನಿರಾಸೆ ಅಪ್ಪಿಕೊಂಡಿದೆ. ಪ್ರಸಕ್ತ ಐಪಿಎಲ್‌ ಆವೃತ್ತಿಯ 14ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ 6 ವಿಕೆಟ್‌ಗಳಿಗೆ ಆತಿಥೇಯ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿರುವು ರಾಯಲ್ಸ್‌ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಮಂಗಳವಾರ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 125 ರನ್‌ ಸೇರಿಸಿತು. ಸಾಧಾರಣ ಮೊತ್ತವನ್ನು ಹಿಂಬಾಲಿಸಿದ ರಾಜಸ್ಥಾನ ರಾಯಲ್ಸ್‌ 15.3 ಓವರ್‌ಗಳಲ್ಲಿ 4 ವಿಕೆಟ್‌ಗೆ 127 ರನ್‌ ಸೇರಿಸಿತು. ನೂತನ ನಾಯಕ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಮುಂಬೈ ಮೊದಲ ಗೆಲುವಿನ ಹುಡುಕಾಟ ಮುಂದುವರೆದಿದೆ.

MI vs RR Rajasthan Royals Beat Mumbai Indians Hattrick defeat for Hardik team

ಸೊನ್ನೆ ಸುತ್ತಿದ ಟಾಪ್‌ 3

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ ಆರಂಭ ಕಳಪೆಯಾಗಿತ್ತು. ಪವರ್‌ ಪ್ಲೇನಲ್ಲಿ ಸಾಮಾನ್ಯವಾಗಿ ರನ್‌ ಸುರಿಮಳೆ ಆಗುತ್ತದೆ. ಆದರೆ ಮಂಗಳವಾರ ಪಟಪಟನೆ ವಿಕೆಟ್‌ಗಳು ಬಿದ್ದವು. ಮುಂಬೈ ಇಂಡಿಯನ್ಸ್‌ ತಂಡದ ಟಾಪ್ ಮೂರು ಆಟಗಾರರಾದ ರೋಹಿತ್ ಶರ್ಮಾ, ನಮನ್‌ ಧೀರ್‌, ಡೆವಾಲ್ಡ್ ಬ್ರೆವಿಸ್ ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಸೇರಿದರು. ಇಶಾನ್‌ ಕಿಶನ್‌ 16 ರನ್‌ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ ಇವರು ಸಹ ನಾಲ್ಕನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್ ಹಾದಿ ಹಿಡಿದರು.

ಐದನೇ ವಿಕೆಟ್‌ 56 ರನ್‌ ಜೊತೆಯಾಟ

ಭರವಸೆಯ ಆಟಗಾರ ತಿಲಕ್‌ ವರ್ಮಾ ಅವರನ್ನು ಸೇರಿಕೊಂಡ ನಾಯಕ ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ ವೃದ್ಧಿಸುವ ಯೋಚನೆಯನ್ನು ಹಾಕಿಕೊಂಡರು. ಇವರು ರಾಜಸ್ಥಾನ ಬೌಲರ್‌ಗಳನ್ನು ಕೊಂಚ ಕಾಡಿದರು. ಈ ಜೋಡಿ 6 ಓವರ್‌ ಬ್ಯಾಟ್ ಮಾಡಿ 56 ರನ್‌ ಸಿಡಿಸಿತು. ತಿಲಕ್‌ ವರ್ಮಾ 32, ಹಾರ್ದಿಕ್ ಪಾಂಡ್ಯ 34 ರನ್‌ ಬಾರಿಸಿ ಔಟ್ ಆದರು.

MI vs RR Rajasthan Royals Beat Mumbai Indians Hattrick defeat for Hardik team

ಕೆಳ ಮಧ್ಯಮ ಕ್ರಮಾಂಕದಲ್ಲಿ ಟಿಮ್‌ ಡೇವಿಡ್‌ (17) ಡಬಲ್‌ ಡಿಜಿಟ್ ಮುಟ್ಟಿದರು.

ಟ್ರೆಂಟ್‌, ಚಹಾಲ್‌ ಮಿಂಚು

ರಾಜಸ್ಥಾನ ರಾಯಲ್ಸ್ ತಂಡದ ಭರವಸೆಯ ಬೌಲರ್‌ಗಳು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಸಫಲರಾದರು. ಟ್ರೆಂಟ್‌ ಬೌಲ್ಟ್‌ ಪವರ್‌ ಪ್ಲೇ ಮೂರು ವಿಕೆಟ್‌ ಕಬಳಿಸಿ, ಮುಂಬೈ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಪೆಟ್ಟು ನೀಡಿದರು. ಇವರಿಗೆ ನಾಂದ್ರೆ ಬರ್ಗರ್ ಸಹ ಉತ್ತಮ ಸಾಥ್ ನೀಡಿದರು. ಈ ವೇಗಿ ಎರಡು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಸ್ಪಿನ್ ಬೌಲರ್‌ ಯುಜುವೇಂದ್ರ ಚಹಾಲ್‌ ಸಹ ಮೂರು ವಿಕೆಟ್‌ ಕಬಳಿಸಿದರು. ರಿಯಾನ್‌ ಪರಾಗ್‌ ಹಾಗೂ ಶುಭಂ ದುಬೆ ತಂಡಕ್ಕೆ ಅಗತ್ಯವಿದ್ದ ರನ್‌ಗಳನ್ನು ಕಲೆ ಹಾಕಿ ಮಿಂಚಿದರು.

MI vs RR Rajasthan Royals Beat Mumbai Indians Hattrick defeat for Hardik team

ಪರಾಗ್‌ ಅರ್ಧಶತಕ

ದೇಶೀಯ ಟೂರ್ನಿಯಲ್ಲಿ ಅಬ್ಬರ ನಡೆಸಿದ್ದ ರಿಯಾನ್‌ ಪರಾಗ್‌ ಅದೇ ಫಾರ್ಮ್‌ನ್ನು ಕಂಟಿನ್ಯೂ ಮಾಡಿದ್ದಾರೆ. ಇವರು 39 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 54 ರನ್‌ ಸಿಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+