MI vs RR: ರಾಜಸ್ಥಾನ ರಾಯಲ್ಸ್ ಅಷ್ಟೇ ಅಲ್ಲ ಮುಂಬೈ ಕ್ಯಾಪ್ಟನ್ ಹಾರ್ದಿಕ್ ಟೆನ್ಷನ್ ಹೆಚ್ಚಿಸಿದೆ ಈ ಸವಾಲು
ಇಂದು ಮುಂಬೈನ ವಾಂಖೇಡೆ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾ ರಾಯಲ್ಸ್ ತಂಡಗಳ ನಡುವೆ ಫೈಟ್ ನಡೆಯಲಿದೆ. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಮುಂಬೈ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡಲಿದೆ. ಈ ಜೋಶ್ ತಂಡದ ನಾಯಕನ ಮುಖದಲ್ಲಿ ಕಾಣುತ್ತಿಲ್ಲ. ಬದಲಿಗೆ ಹಾರ್ದಿಕ್ ಪಾಂಡ್ಯ ಮುಖದಲ್ಲಿ ಚಿಂತೆಯ ಗೆರೆಗಳೇ ಬಹುವಾಗಿ ಕಾಣುತ್ತಿವೆ.
ಆಡಿರುವ ಎರಡು ಪಂದ್ಯಗಳಲ್ಲಿ ಸೋತು, ಗೆಲುವಿನ ಟ್ರ್ಯಾಕ್‌ಗೆ ಮರಳಲು ಹರಸಾಹಸ ಪಡುತ್ತಿರುವ ಮುಂಬೈ ಇಂಡಿಯನ್ಸ್ ತಂಡ ತವರಿನಲ್ಲಿ ಶುಭಾರಂಭದ ಕನಸು ಕಾಣುತ್ತಿದೆ. ಆದರೆ, ಈ ಖುಷಿ ತಂಡದ ನಾಯಕನ ಮುಖದಲ್ಲಿ ಕಾಣಿಸುತ್ತಿಲ್ಲ. ಸಾಮಾನ್ಯವಾಗಿ ತವರಿನಲ್ಲಿ ತಂಡ ಅಖಾಡಕ್ಕೆ ಇಳಿಯುತ್ತದೆ ಎಂದರೆ ಅದರ ಜೋಶ್ ಹೆಚ್ಚಿರುತ್ತದೆ. ಆದರೆ ಇದೇ ಮೊದಲ ಬಾರಿಗೆ ಈ ಜೋಶ್ ಕಡಿಮೆ ಆದಂತೆ ಕಾಣುತ್ತಿದೆ. ಇದಕ್ಕೆ ಕಾರಣ ನಾಯಕತ್ವದ ಬದಲಾವಣೆ

ಹಾರ್ದಿಕ್ ನಾಯಕ
ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿ ತಂಡಕ್ಕೆ ಬರಮಾಡಿಕೊಂಡಿತು. ಅಲ್ಲದೆ ರೋಹಿತ್ ಶರ್ಮಾರನ್ನು ಕೆಳಗಿಳಿಸಿ, ಹಾರ್ದಿಕ್‌ಗೆ ಕ್ಯಾಪ್ಟನ್ಸಿ ನೀಡಲಾಯಿತು. ಈ ಬೆಳವಣಿಗೆ ಮುಂಬೈ ಇಂಡಿಯನ್ಸ್ ಫ್ಯಾನ್ಸ್‌ಗೆ ಬೇಸರ ತರಿಸಿದೆ. ಇದರಿಂದ ಸಮಾಜಿಕ ತಾಣದಲ್ಲಿ ಬಹಳಷ್ಟು ಆಕ್ರೋಶದ ಪೋಸ್ಟ್‌ಗಳು ಹರಿದಾಡಿದವು. ಈಗ ಹಾರ್ದಿಕ್ ಈ ಋತುವಿನಲ್ಲಿ ಮೊದಲ ಬಾರಿಗೆ ವಾಂಖೇಡೆಯಲ್ಲಿ ಮೈದಾನಕ್ಕೆ ಇಳಿಯುತ್ತಿದ್ದಾರೆ.
ತಮ್ಮದೇ ತವರಿನಲ್ಲಿ ಹಾರ್ದಿಕ್‌ಗೆ ಅವಮಾನ
ಹಾರ್ದಿಕ್ ಪಾಂಡ್ಯ ಗುಜರಾತ್ ಮೂಲದವರು. ಬರೋಡಾ ರಣಜಿ ತಂಡದ ಪರ ಆಡಿ ಸೈ ಎನಿಸಿಕೊಂಡವರು. ಇವರ ತವರು ನೆಲವಾದ ಅಹಮದಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಹಾರ್ದಿಕ್‌ಗೆ ಫ್ಯಾನ್ಸ್ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ ತಮ್ಮ ತಂಡವನ್ನು ಬಿಟ್ಟು ಬೇರೆ ತಂಡ ಸೇರಿಕೊಂಡಿದಕ್ಕೆ ಆಕ್ರೋಶ ವ್ಯಕ್ತ ಪಡಿಸಿದರು. ಮೈದಾನದಲ್ಲಿ ನಾಯಿ ಬಂದಾಗ ಚಿತ್ರ, ವಿಚಿತ್ರ ಘೋಷಣೆಗಳನ್ನು ಕೂಗಿ ಅವಮಾನ ಮಾಡಿದ್ದರು. ಈ ದೃಶ್ಯ ಬರೀ ಟೀಸರ್ ನಂತೆ ಕಂಡು ಬಂದಿತು.

ನಾಯಕ ನಾನೇ
ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ಸಿಗುತ್ತಿದ್ದಂತೆ ಮೈದಾನದಲ್ಲಿ ಅನುಭವಿಗಳ ಅನುಭಕ್ಕೆ ಮಣೆ ಹಾಕುತ್ತಿಲ್ಲ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಅಲ್ಲದೆ ರೋಹಿತ್ ಶರ್ಮಾ ಅವರನ್ನು 30 ಯಾರ್ಡ್ ಸರ್ಕಲ್‌ನಿಂದ ಹೊರಗೆ ಫೀಲ್ಡ್ ಮಾಡಲು ಸೂಚಿಸಿದರು. ಇದರಿಂದ ಫ್ಯಾನ್ಸ್ ಫುಲ್ ಗರಂ ಆಗಿದ್ದರು.
ತಂಡದಲ್ಲಿದೆ ಅಸಮಾಧಾನ
ಮುಂಬೈ ಇಂಡಿಯನ್ಸ್ ತನ್ನ ಟ್ಯಾಗ್ ಲೈನ್‌ನಲ್ಲಿ ಹೇಳುವಂತೆ ಮುಂಬೈ ಒನ್ ಫ್ಯಾಮಲಿ ಎಂಬುದು ಈಗ ಮುರಿದ ಮನೆ ಆಗಿದೆ. ಮುಂಬೈ ತಂಡದಲ್ಲಿ ಅಸಮಾಧಾನದ ಹೊಗೆ ಇನ್ನು ತಣ್ಣಗೆ ಆಗಿಲ್ಲ. ಜಸ್ಪ್ರಿತ್ ಬುಮ್ರಾ, ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕಂತೂ ಸ್ಪಷ್ಟವಾಗಿದೆ. ಈ ಎಲ್ಲ ನ್ಯೂನತೆಗಳನ್ನು ಮೆಟ್ಟಿನಿಂತು ತಂಡ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ತವರಿನಲ್ಲಿ ಸಾಲು ಸಾಲು ಸವಾಲು
ಹಾರ್ದಿಕ್ ಪಾಂಡ್ಯ ಬ್ಲ್ಯೂ ಜೆರ್ಸಿ ತೊಟ್ಟು ಡ್ರೆಸ್ಸಿಂಗ್ ರೂಮ್‌ನಿಂದ ಸ್ಟೆಪ್ಸ್ ಇಳಿದು ಬರುತ್ತಿದ್ದಂತೆ ಅವರ ಮುಂದೆ ಸವಾಲುಗಳ ರಾಶಿ ಎದ್ದು ಕಾಣುತ್ತದೆ. ಮೈದಾನದಲ್ಲಂತೂ ರಾಜಸ್ಥಾನ ಸವಾಲು ಎಸೆಯಲಿದೆ. ಆದರೆ ಮೈದಾನದ ಹೊರಗೆ ಕುಳಿತ ಪ್ರೇಕ್ಷಕನ ಸವಾಲನ್ನು ಹಾರ್ದಿಕ್ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಿದೆ.
11 ವರ್ಷಗಳ ಬಳಿಕ ರೋಹಿತ್ ಶರ್ಮಾ ಬದಲಿಗೆ ಇನ್ನೊಬ್ಬ ನಾಯಕ ಟಾಸ್‌ಗೆ ಬರುವಾಗ ಫ್ಯಾನ್ಸ್ ರಿಯಾಕ್ಷನ್ ಹೇಗಿರಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ. ತಂಡದಲ್ಲಿ ರೋಹಿತ್ ಶರ್ಮಾಗೆ ಸಿಕ್ಕ ಮರ್ಯಾದೆಯನ್ನು ನೋಡಿದ ಫ್ಯಾನ್ಸ್ ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ ಎಂಬುದು ಕುತೂಗಲ ಮೂಡಿಸಿದೆ.












Click it and Unblock the Notifications