ಭಾರತ ತಂಡದಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದ ಮಯಾಂಕ್ ಯಾದವ್; ಕಾರಣವೇನು?

ಮಯಾಂಕ್ ಯಾದವ್ ತಾವು ಪದಾರ್ಪಣೆ ಮಾಡಿದ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ಬೌಲರ್. ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ ಆಡುವ ಮಯಾಂಕ್ ಯಾದವ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 155.8 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದರು.

4 ಓವರ್ ಗಳಲ್ಲಿ 27 ರನ್ ನೀಡಿದ ಅವರು 3 ವಿಕೆಟ್ ಪಡೆಯುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.

Mayank Yadav Capable of Bowling 159 kmph Deliveries

ಗಂಟೆಗೆ 159 ಕಿ.ಮೀ. ವೇಗದಲ್ಲಿ ಬೌಲಿಂಗ್

ಮಯಾಂಕ್ ಯಾದವ್ ಪಂಜಾಬ್ ಕಿಂಗ್ಸ್ ವಿರುದ್ಧ ಗಂಟೆಗೆ 155.8 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದರು. ಇದು ಐಪಿಎಲ್ 2024ರಲ್ಲಿ ಅತಿ ವೇಗದ ಎಸೆತವಾಗಿದೆ. ಆದರೆ ಮಯಾಂಕ್ ಯಾದವ್ ಅವರು ಗಂಟೆಗೆ 159 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು ಎಂದು ಅವರ ಕೋಚ್ ದೇವೇಂದ್ರ ಶರ್ಮಾ ಹೇಳಿದ್ದಾರೆ.

ಮುಖ್ಯವಾಗಿ ಮಯಾಂಕ್ ಯಾದವ್ ಐಪಿಎಲ್‌ಗೆ ಮುಂಚೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಬೇಕಿತ್ತು. ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ರೇಡಾರ್‌ನಲ್ಲಿದ್ದರು ಎಂದು ಮಯಾಂಕ್ ಯಾದವ್ ಕೋಚ್ ದೇವೇಂದ್ರ ಶರ್ಮಾ ಬಹಿರಂಗಪಡಿಸಿದರು.

ರೇವ್‌ಸ್ಪೋರ್ಟ್ಸ್ (RevSportz) ವರದಿಯ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮಯಾಂಕ್ ಯಾದವ್‌ ಅವರನ್ನು ಆಯ್ಕೆ ಮಾಡಲು ಅಜಿತ್ ಅಗರ್ಕರ್ ಬಯಸಿದ್ದರು. ಆದರೆ ಅದೇ ಸಂದರ್ಭದಲ್ಲಿ ಮಯಾಂಕ್ ಯಾದವ್ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಅವರನ್ನು ಅನಿವಾರ್ಯವಾಗಿ ಆಯ್ಕೆಯಿಂದ ದೂರವಿಡಲಾಯಿತು ಎಂದು ಶರ್ಮಾ ಹೇಳಿದ್ದಾರೆ.

ಬೇಸರಗೊಂಡಿದ್ದ ಮಯಾಂಕ್

ಭಾರತ ತಂಡಕ್ಕೆ ಆಯ್ಕೆಯಾಗದ ಕಾರಣ ಮಯಾಂಕ್ ಯಾದವ್ ತುಂಬಾ ಬೇಸರಗೊಂಡಿದ್ದರು. ಮುಖ್ಯ ಆಯ್ಕೆದಾರರನ್ನು ಮೆಚ್ಚಿಸಲು ಮತ್ತು ಭಾರತಕ್ಕಾಗಿ ಆಡುವ ಅವಕಾಶವನ್ನು ಯಾರು ಬಿಟ್ಟುಕೊಡಲು ಬಯಸುತ್ತಾರೆ? ಆತ ಫಿಟ್ ಆಗಿರಲಿ, ಮತ್ತಷ್ಟು ಉತ್ತಮ ಪ್ರದರ್ಶನ ನೀಡಲಿ ಎಂದು ಪ್ರಾರ್ಥಿಸುವುದಾಗಿ ದೇವೇಂದ್ರ ಶರ್ಮಾ ಹೇಳಿದ್ದಾರೆ.

ಮಯಾಂಕ್ ಯಾದವ್ ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾನೆ. ಆತ ಸಾಕಷ್ಟು ಅಭ್ಯಾಸ ಮಾಡುತ್ತಾನೆ, ಭಾರತ ತಂಡಕ್ಕಾಗಿ ಸುದೀರ್ಘ ಕಾಲದವರೆಗೆ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆತನಲ್ಲಿ ಸಂದರ್ಭಕ್ಕೆ ತಕ್ಕಂತೆ ಬೌಲಿಂಗ್ ಮಾಡುವ ಕಲೆ ಇದೆ, ಅದು ಬಹಳ ಮುಖ್ಯ ಎಂದು ಹೇಳಿದರು.

ಬ್ಯಾಟರ್‌ಗಳು ಅವನ ಎಸೆತಗಳನ್ನು ನೋಡಲು ಹೆಣಗಾಡುತ್ತಾರೆ, ಅವರು ಗಂಟೆಗೆ 158-159 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಆರು ವರ್ಷಗಳ ಹಿಂದೆ ನಮ್ಮ ಬಳಿ ಬಂದರು, ಅವರು ನೋಡಲು ದುರ್ಬಲವಾಗಿ ಕಂಡರೂ ವೇಗವಾಗಿ ಬೌಲಿಂಗ್ ಮಾಡಿದರು. ಬಳಿಕ ಅವರ ಫಿಟ್‌ನೆಸ್ ಮೇಲೆ ಕೆಲಸ ಮಾಡಿದೆವು, ಬಳಿಕ ಕ್ಲಬ್‌ಗಾಗಿ ಕೆಲವು ವಯಸ್ಸಿನ-ಗುಂಪಿನ ಪಂದ್ಯಾವಳಿಗಳಲ್ಲಿ ಆಡುವಂತೆ ಮಾಡಿದೆವು, ಅಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ದೆಹಲಿ ತಂಡಕ್ಕಾಗಿ ದೇಶೀಯ ಕ್ರಿಕೆಟ್‌ನಲ್ಲಿ ಆಡಿದರು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+