Glenn Maxwell: ದ್ವಿಶತಕದ ಬಳಿಕ ಮ್ಯಾಕ್ಸ್‌ವೆಲ್ ಹೇಳಿದ್ದೇನು?

ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸುವಂತೆ ಇನ್ನಿಂಗ್ಸ್ ಆಡಿದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದನ್ನು ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು ಎಂದು ಹೇಳಲಾಗಿದೆ.

292 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 91 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಅಫ್ಘಾನಿಸ್ತಾನ ಸುಲಭ ಗೆಲುವು ಸಾಧಿಸುತ್ತದೇ ಎಂದುಕೊಳ್ಳುವಾಗಲೇ, ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಂಗಿಯಾಗಿ ಹೋರಾಟ ಮಾಡಿದರು, ಶತಕ ಹೊಡೆದ ನಂತರ ಕಾಲು ನೋವು ಶುರುವಾದರೂ, ಓಡಲು ಕಷ್ಟ ಪಡುತ್ತಿದ್ದ ಮ್ಯಾಕ್ಸ್‌ವೆಲ್ ಬೌಂಡರಿ, ಸಿಕ್ಸರ್ ಗಳಲ್ಲಿಯೇ ರನ್ ಗಳಿಸಿದರು.

Maxwells Reaction to His Stunning 201* vs Afghanistan

ಕೇವಲ 128 ಎಸೆತಗಳಲ್ಲಿ 21 ಬೌಂಡರಿಗಳು ಮತ್ತು 10 ಸಿಕ್ಸರ್‌ ಸಹಿತ ಅಜೇಯ 201 ರನ್ ಗಳಿಸಿದ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾವನ್ನು ಗೆಲುವಿನ ದಡ ತಲುಪಿಸಿದರು. ಮ್ಯಾಕ್ಸ್‌ವೆಲ್ ಇನ್ನಿಂಗ್ಸ್ ನೋಡಿ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿದೆ, ಸಚಿನ್ ತೆಂಡೂಲ್ಕರ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಕೂಡ ಇದನ್ನು ಶ್ರೇಷ್ಠ ಇನ್ನಿಂಗ್ಸ್ ಎಂದು ಬಣ್ಣಿಸಿದ್ದಾರೆ.

ಮ್ಯಾಕ್ಸ್‌ವೆಲ್ ಹೇಳಿದ್ದೇನು?

ಒಂದು ಹಂತದಲ್ಲಿ ಕಾಲು ಸೆಳೆತದಿಂದ ನಡೆಯಲು ಕೂಡ ಮ್ಯಾಕ್ಸ್‌ವೆಲ್ ಕಷ್ಟಪಡುತ್ತಿದ್ದರು, ಅವರು ಪೆವಿಲಿಯನ್‌ಗೆ ಮರಳಲು ಅವಕಾಶ ಇದ್ದರೂ, ನೋವಿನ ನಡುವೆಯೂ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು, ಅದಕ್ಕೆ ತಕ್ಕಂತೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಪಂದ್ಯದ ಬಳಿಕ ಮಾತನಾಡಿದ ಗ್ಲೆನ್ ಮ್ಯಾಕ್ಸ್‌ವೆಲ್, ಹೆಚ್ಚಿನ ತಾಪಮಾನ ಮತ್ತು ಸೀಮಿತ ದೈಹಿಕ ಚಟುವಟಿಕೆಯ ಸಂಯೋಜನೆಯು ಕಾಲು ಸೆಳೆತ ಉಂಟಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.

"ಇದು ಅದ್ಭುತ, ಹೆಚ್ಚು ಉಲ್ಲಸಿತನಾಗಿದ್ದೇನೆ" ಎಂದು ಮ್ಯಾಕ್ಸ್‌ವೆಲ್ ದ್ವಿಶತಕ ಸಿಡಿಸಿದ ನಂತರ ಹೇಳಿದರು.

"ನಾವು ಫೀಲ್ಡಿಂಗ್ ಮಾಡುವಾಗ ಸಾಕಷ್ಟು ಬಿಸಿಯಾಗಿತ್ತು. ನಾನು ಶಾಖದಲ್ಲಿ ಹೆಚ್ಚಿನ ತೀವ್ರತೆಯ ತರಬೇತಿಯನ್ನು ಮಾಡಲಿಲ್ಲ, ಅದಕ್ಕಾಗಿ ಕಾಲಿನ ಸೆಳೆತ ಆರಂಭವಾಯಿತು. ಕೊನೆಯವರೆಗೂ ವಿಕೆಟ್‌ ಉಳಿಸಿಕೊಳ್ಳುವುದು ಒಳ್ಳೆಯದು" ಎಂದು ಹೇಳಿದರು.

"ನಾನು ಸಕಾರಾತ್ಮವಾಗಿರಲು ಪ್ರಯತ್ನಿಸುತ್ತಿದ್ದೆ, ನಾನು ರಕ್ಷಣಾತ್ಮಕವಾಗಿ ಆಡಿದ್ದರೆ ನನ್ನ ವಿಕೆಟ್ ಕಳೆದುಕೊಳ್ಳುತ್ತಿದೆ. ಎಲ್‌ಬಿಡಬ್ಲ್ಯೂ ತೀರ್ಪು ವಿರುದ್ಧವಾದ ನಂತರ ನಾನು ಆಕ್ರಮಣಕಾರಿಯಾಗಿ ಆಡಲು ನಿರ್ಧರಿಸಿದೆ" ಎಂದು ಹೇಳಿದರು.

ಇನ್ನು ತಮ್ಮ ಇನ್ನಿಂಗ್ಸ್ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿರುವುದನ್ನು ಕಂಡು ಮ್ಯಾಕ್ಸ್‌ವೆಲ್ ಸಂತಸಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು "ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು, ಪಾಟ್ ಕಮ್ಮಿನ್ಸ್ ಅದ್ಭುತವಾಗಿ ಜೊತೆಯಾದರು, ಅಪ್ಪನ ಕರ್ತವ್ಯ ನಿರ್ವಹಿಸಲು ತೆರಳಬೇಕಿದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+