Neeraj Chopra & Manu Bhaker: ನೀರಜ್ ಚೋಪ್ರಾ ಮತ್ತು ಮನು ಭಾಕರ್ ಮದುವೆ?
ಮನು ಭಾಕರ್ ಮತ್ತು ನೀರಜ್ ಚೋಪ್ರಾ ಭಾರತದ ಹೆಮ್ಮೆಯ ಕ್ರೀಡಾಪಟುಗಳು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕೆರ್ ಎರಡು ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತದ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಕಳೆದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಮನು ಭಾಕರ್ ಶೂಟಿಂಗ್‌ನಲ್ಲಿ ಎರಡು ಪದಕ ಗೆದ್ದರೆ, ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದುಕೊಟ್ಟರು. ಇವರಿಬ್ಬರು ಮದುವೆಯಾಗುತ್ತಾರೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳು ಇವರಿಬ್ಬರು ಮದುವೆಯಾದರೆ ಚನ್ನಾಗಿರುತ್ತದೆ ಎಂದು ಕೂಡ ಹೇಳುತ್ತಿದ್ದಾರೆ.

ನೀರಜ್ ಚೋಪ್ರಾ-ಮನು ಭಾಕರ್ ಭೇಟಿ
ಒಲಿಂಪಿಕ್ ಪದಕ ವಿಜೇತರಿಬ್ಬರೂ ಪರಸ್ಪರ ಭೇಟಿಯಾಗಿದ್ದಾರೆ. ಸುಮ್ಮನೆ ಭೇಟಿಯಾಗಿದ್ದರೆ ಅಭಿಮಾನಿಗಳು ಕೂಡ ಏನೂ ಅಂದುಕೊಳ್ಳದೆ ಸುಮ್ಮನೆ ಇರುತ್ತಿದ್ದರು, ಆದರೆ ಇಬ್ಬರು ಭೇಟಿಯಾದಾಗ ಪರಸ್ಪರ ಮುಖ ಕೂಡ ನೋಡಿಕೊಳ್ಳದೆ ನಾಚಿಕೆಯಿಂದ ಇಬ್ಬರೂ ಮಾತನಾಡುತ್ತಿರುವುದು ಈಗ ಈ ಸುದ್ದಿ ಹಬ್ಬಲು ಕಾರಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ಇಬ್ಬರು ಮಾತನಾಡುತ್ತಿರುವ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ. ಇಬ್ಬರೂ ಕೂಡ ಪರಸ್ಪರ ಮುಖ ನೋಡುವುದನ್ನು ತಪ್ಪಿಸುವುದನ್ನು ನೋಡಬಹುದಾಗಿದೆ. ದಂಪತಿಗಳಾಗಲು ಇವರಿಬ್ಬರೂ ಸರಿಯಾಗಿದ್ದಾರೆ ಎಂದು ಹಲವು ಅಭಿಮಾನಿಗಳು ಹೇಳುತ್ತಿದ್ದಾರೆ.
All you need is a medal in the Olympics to impress both mother and daughter.
— Yanika_Lit (@LogicLitLatte) August 12, 2024
Neeraj Chopra with Manu Bhaker and her mother. pic.twitter.com/5rDUOepyXs
ಮನು ಭಾಕರ್ ಅವರ ತಾಯಿ ನೀರಜ್ ಚೋಪ್ರಾ ಜೊತೆ ಫೋಟೊಗೆ ಫೋಸ್ ಕೊಡು ಎಂದು ಕೇಳುವ ಮೂಲಕ ವಿಡಿಯೋ ಅಂತ್ಯವಾಗುತ್ತದೆ. ಮತ್ತೊಂದು ವಿಡಿಯೋದಲ್ಲಿ ಮನು ಭಾಕರ್ ಅವರ ತಾಯಿ ನೀರಜ್ ಚೋಪ್ರಾ ಅವರ ಕೈ ಹಿಡಿದು ಮಾತನಾಡುತ್ತಿರುವುದನ್ನು ನೋಡಬಹುದು.
ಒಳ್ಳೆ ಜೋಡಿ ಅಂತಿದ್ದಾರೆ ಫ್ಯಾನ್ಸ್
ನೀರಜ್ ಚೋಪ್ರಾ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ಜಾವೆಲಿನ್ ಎಸೆತಗಾರ. ಡೈಮೆಂಡ್ಸ್ ಲೀಗ್, ಒಲಿಂಪಿಕ್ ಪದಕ ಸೇರಿ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದರೂ ಇನ್ನೂ ಸಾಧನೆ ಮಾಡಬೇಕಿರುವುದು ಬಹಳಷ್ಟಿದೆ ಎನ್ನುವ ಉತ್ಸಾಹಿ. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಹಂಬಲ ಅವರದ್ದು.
Imagine Neeraj Chopra and Manu Bhakar marrying each other and both winning a gold medal in the LA Olympics in 2028. Pure Cinema!!! pic.twitter.com/5VX3NWdNj3
— Nikhil Gupta (@Nikhilgupta1104) August 12, 2024
ಮನು ಭಾಕರ್ ಕೂಡ ಶೂಟಿಂಗ್‌ನಲ್ಲಿ ಎರಡು ಪದಕ ಗೆದ್ದು ಭಾರಿ ಹೆಸರು ಮಾಡಿದ್ದಾರೆ. ಇಬ್ಬರಲ್ಲೂ ಸಾಧಿಸುವ ಉತ್ಸಾಹ, ಛಲ ಇದೆ. ಇಬ್ಬರ ಜೋಡಿ ಕೂಡ ಚನ್ನಾಗಿದ್ದು ಮದುವೆಯಾದರೆ ಇನ್ನೂ ಸಖತ್ತಾಗಿರುತ್ತಿದೆ ಎನ್ನುತ್ತಿದ್ದಾರೆ ಫ್ಯಾನ್ಸ್.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications