ರಾಜಸ್ಥಾನಕ್ಕೆ 197 ರನ್‌ಗಳ ಗುರಿ ನೀಡಿದ ಲಖನೌ!

ಲಖನೌ ಸೂಪರ್ ಜೈಂಟ್ಸ್ ಬಿದ್ದು, ಎದ್ದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸವಾಲಿನ ಮೊತ್ತ ನೀಡಿದೆ. ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಲಖನೌ ಸೂಪರ್ ಜೈಂಟ್ಸ್, ಮ್ಯಾಚ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಕೇವಲ 8 ರನ್ ಆಗಿದ್ದಾಗ ಮೊದಲ ವಿಕೆಟ್ ಹಾಗೂ 11 ರನ್‌ಗೆ 2ನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಇಂದು ನೆರವಾಗಿದ್ದು ಕನ್ನಡಿಗ ಹಾಗೂ ಲಖನೌ ಟೀಂನ ಕ್ಯಾಪ್ಟನ್ ಕೆ.ಎಲ್. ರಾಹುಲ್ ಅವರು. ಯಾಕಂದ್ರೆ ಕೇವಲ 11 ರನ್‌ ಗಳಿಸುವ ಒಳಗಾಗಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು ಲಖನೌ ಸೂಪರ್ ಜೈಂಟ್ಸ್ ಟೀಂ. ಈ ಹಂತದಲ್ಲಿ ಭಾರಿ ಒತ್ತಡಕ್ಕೆ ಸಿಲುಕಿತ್ತು ಲಖನೌ. ಆಗ ಹಿಂದೆ & ಮುಂದೆ ನೋಡದೇ ಮುನ್ನುಗ್ಗಿ ಚಚ್ಚಿ ಬಿಸಾಡಿದ ಕೆ.ಎಲ್. ರಾಹುಲ್, ರಾಜಸ್ಥಾನ ತಂಡಕ್ಕೆ ಚಳಿ ಬಿಡಿಸಿದರು. ಈ ಮೂಲಕವಾಗಿ ರಾಜಸ್ಥಾನಕ್ಕೆ 197 ರನ್‌ಗಳ ಗುರಿ ನೀಡುವಲ್ಲಿ ಲಖನೌ ತಂಡಕ್ಕೆ ಕೆ.ಎಲ್. ರಾಹುಲ್ ಇಂದು ನೆರವಾದರು.

Lucknow Super Giants Given 197 Runs Target To Rajasthan Royals

ರಾಹುಲ್ + ದೀಪಕ್ ಹೂಡ!

20 ಓವರ್ ಆಡಿದ ಲಖನೌ ಸೂಪರ್ ಜೈಂಟ್ಸ್ ತಂಡವು, 196 ರನ್‌ಗೆ 5 ವಿಕೆಟ್ ಕಳೆದುಕೊಂಡು ಆಟ ಮುಗಿಸಿದೆ. ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಕೆ.ಎಲ್. ರಾಹುಲ್ ಅವರು 76 ರನ್ ಗಳಿಸಿದರು. ಕೇವಲ 48 ಬಾಲ್ ಆಡಿದ್ದ ಕೆ.ಎಲ್. ರಾಹುಲ್, 8 ಬೌಂಡರಿ ಹಾಗೂ 2 ಸಿಕ್ಸರ್ ಕೂಡ ಬಾರಿಸಿದ್ದಾರೆ. ಹಾಗೇ ಕೆ.ಎಲ್. ರಾಹುಲ್ ಅವರ ಸೂಪರ್ ಬ್ಯಾಟಿಂಗ್‌ಗೆ ದೀಪಕ್ ಹೂಡ ಕೂಡ ಸಾಥ್ ನೀಡಿದ್ದರು. ಆದರೆ, 31 ಬಾಲ್ ಆಡಿ 50 ರನ್ ಗಳಿಸಿದ್ದ ದೀಪಕ್ ಹೂಡ ಔಟಾದರು. ಆ ನಂತರ ಕೆಲವೇ ಬಾಲ್‌ಗಳಲ್ಲಿ ಕೆ.ಎಲ್. ರಾಹುಲ್ ಕೂಡ ಔಟಾಗಿಬಿಟ್ಟರು. ಲಖನೌ ತಂಡದ ಮಧ್ಯಮ ಕ್ರಮಾಂಕ ಕೈಕೊಟ್ಟ ಕಾರಣ ಲಖನೌ ಸೂಪರ್ ಜೈಂಟ್ಸ್ ಕೇವಲ 196 ರನ್‌ಗೆ 5 ವಿಕೆಟ್ ಕಳೆದುಕೊಂಡು 20 ಓವರ್‌ಗಳ ಆಟ ಮುಗಿಸಿತು.

ಯಾರಿಗೆ ಎಷ್ಟು ವಿಕೆಟ್ ಸಿಕ್ಕಿತು?

ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಸಂದೀಪ್ ಶರ್ಮಾ 4 ಓವರ್ ಮಾಡಿ 31 ರನ್‌ಗಳ ಬಿಟ್ಟುಕೊಟ್ಟರು, ಹಾಗೇ ಸಂದೀಪ್ ಶರ್ಮಾ 2 ವಿಕೆಟ್ ಗಳಿಸಿದರು. ಟ್ರೆಂಟ್ ಬೋಲ್ಟ್, 4 ಓವರ್ ಮಾಡಿ 41 ರನ್ ನೀಡಿ 1 ವಿಕೆಟ್, ಆವೇಶ್ ಖಾನ್ 4 ಓವರ್ ಮಾಡಿ 42 ರನ್‌ಗಳ ನೀಡಿ 1 ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್ ಕೂಡ 4 ಓವರ್ ಮಾಡಿ ಒಂದು ವಿಕೆಟ್ ಗಳಿಸಿದರು. ಹಾಗೇ ರವಿಚಂದ್ರನ್ ಅಶ್ವಿನ್ 39 ರನ್ ನೀಡಿದರು. ಯಜುವೇಂದ್ರ ಚಹಲ್ 4 ಓವರ್ ಬೌಲಿಂಗ್ ಮಾಡಿದರೂ 41 ರನ್ ನೀಡಿ ವಿಕೆಟ್ ತೆಗೆಯುವಲ್ಲಿ ವಿಫಲರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+