DC vs LSG: ರಿಷಬ್ ಪಂತ್ ಮಾಡಿದ ಎಡವಟ್ಟುಗಳೇ ಎಲ್‌ಎಸ್‌ಜಿ ಸೋಲಿಗೆ ಕಾರಣ

ಐಪಿಎಲ್ 2025ರ ಆವೃತ್ತಿಯವಲ್ಲಿ 4ನೇ ಪಂದ್ಯವೇ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದೆ. ರೋಚಕ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್‌ನಿಂದ ರೋಚಕ ಗೆಲುವು ಸಾಧಿಸಿದೆ. ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವ ಹಂತದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಿದ್ದರಿಂದ ಸೋಲು ಕಂಡಿತು.

ನಾಯಕ ರಿಷಭ್ ಪಂತ್ ಮಾಡಿದ ಎಡವಟ್ಟುಗಳೇ ಲಕ್ನೋ ಸೂಪರ್ ಜೈಂಟ್ಸ್ ಸೋಲಿಗೆ ಮುಖ್ಯ ಕಾರಣವಾಗಿದೆ. ಅದರಲ್ಲೂ ಕೊನೆಯ ಓವರ್ ನಲ್ಲಿ ಅವರು ಮಾಡಿದ ಪ್ರಮಾದ ತಂಡವನ್ನು ಸೋಲಿನ ಅಂಚಿಗೆ ತಳ್ಳಿತು. ಬರೋಬ್ಬರಿ 27 ಕೋಟಿ ರೂಪಾಯಿ ಪಡೆದುಕೊಂಡಿರುವ ರಿಷಬ್ ಪಂತ್ ಬ್ಯಾಟಿಂಗ್‌ನಲ್ಲಿ, ನಾಯಕತ್ವ ನಿಭಾಯಿಸುವಲ್ಲಿ ಹಾಗೂ ಕೀಪಿಂಗ್‌ನಲ್ಲೂ ವಿಫಲವಾದರು.

lsg captain rishabh pant mistake reason lost delhi capitals ipl 2025

ಕೊನೆಯ ಓವರ್ ನಲ್ಲಿ ಎಡವಟ್ಟು

ಕೊನೆಯ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಕೇವಲ 6 ರನ್ ಬೇಕಿತ್ತು, ಆದರೆ ಅದಾಗಲೆ 9 ವಿಕೆಟ್ ಕಳೆದುಕೊಂಡಿತ್ತು. ಅಶುತೋಷ್ ಶರ್ಮಾ ನಾನ್‌ ಸ್ಟ್ರೈಕರ್ ತುದಿಯಲ್ಲಿದ್ದರೆ, ಮೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದರು. ಶಹಬಾಜ್ ಅಹ್ಮದ್ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು, ಮೊದಲನೇ ಎಸೆತದಲ್ಲೇ ಮೋಹಿತ್ ಶರ್ಮಾ ಕ್ರೀಸ್ ಬಿಟ್ಟು ಮುಂದೆ ಬಂದು ಚೆಂಡು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಅವರನ್ನು ದಾಟಿ ಕೀಪರ್ ಗೆ ಹೋಯಿತು.

ರಿಷಬ್ ಪಂತ್ ಚೆಂಡನ್ನು ಹಿಡಿದಿದ್ದರೆ ಸ್ಟಂಪ್ ಮಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಡಬಹುದಿತ್ತು. ಆದರೆ ಕೀಪಿಂಗ್‌ನಲ್ಲಿ ವಿಫಲವಾದ ಕಾರಣ ಅವಕಾಶ ಕೈಚೆಲ್ಲಿದರು. ಬಳಿಕ ಮುಂದಿನ ಎಸೆತದಲ್ಲಿ ಮೋಹಿತ್ ಶರ್ಮಾ ಒಂದು ರನ್ ಓಡಿದರು. ಕ್ರೀಸ್‌ಗೆ ಬಂದ ಅಶುತೋಷ್ ಶರ್ಮಾ ಮುಂದಿನ ಎಸೆತದಲ್ಲೇ ಸಿಕ್ಸರ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಗೆಲುವು ತಂದುಕೊಟ್ಟರು.

Take a Poll

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ರಿಷಬ್‌ ಪಂತ್‌ರನ್ನು ಲಕ್ನೋ ಸೂಪರ್ ಜೈಂಟ್ಸ್ ಬರೋಬ್ಬರಿ 27 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಐಪಿಎಲ್ ಇತಿಹಾಸದಲ್ಲೇ ರಿಷಬ್ ಪಂತ್ ದುಬಾರಿ ಆಟಗಾರನಾಗಿದ್ದಾರೆ. ಕಳೆದ ಬಾರಿ ಎಲ್‌ಎಸ್‌ಜಿ ನಾಯಕರಾಗಿದ್ದ ಕೆಎಲ್ ರಾಹುಲ್ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಡುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ಬಳಿಕ ತಂಡದ ಮಾಲಿಕ ಸಂಜೀವ್ ಗೊಯೆಂಕಾ ಮೈದಾನದಲ್ಲೇ ಕೆಎಲ್ ರಾಹುಲ್ ಮೇಲೆ ಅಸಮಾಧಾನಗೊಂಡಿದ್ದರು. ಈಗ ಪಂತ್ ಮಾಡಿದ ಎಡವಟ್ಟಿಗೆ ಏನು ಮಾಡುತ್ತಾರೆ ಎನ್ನುವ ಕುತೂಹಲವಿದೆ. ರಿಷಬ್ ಪಂತ್ ಕಳಪೆ ನಾಯಕತ್ವಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+