ಮೆಸ್ಸಿ ಕೇರಳ ಭೇಟಿ ವಿವಾದ: ₹126 ಕೋಟಿ ಆರ್ಥಿಕ ಅಕ್ರಮ ಬಯಲು, ತನಿಖಾ ವರದಿಯಲ್ಲಿ ಸ್ಫೋಟಕ ಮಾಹಿತಿ

ತಿರುವನಂತಪುರಂ, ಆಗಸ್ಟ್‌ 11: ವಿಶ್ವಪ್ರಸಿದ್ಧ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ಫುಟ್‌ಬಾಲ್ ತಂಡವನ್ನು ಕೇರಳಕ್ಕೆ ಕರೆತರುವ ಬಹುಚರ್ಚಿತ ಯೋಜನೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಯೋಜನೆಗೆ ಸಂಬಂಧಿಸಿದಂತೆ ಸುಮಾರು 126 ಕೋಟಿ ರೂಪಾಯಿ ಆರ್ಥಿಕ ಅಕ್ರಮಗಳು ನಡೆದಿರುವುದು ಕ್ರೀಡಾ ಇಲಾಖೆಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕ್ರೀಡಾ ಇಲಾಖೆಯ ವಿಶೇಷ ಕಾರ್ಯದರ್ಶಿ ಎನ್.ಪ್ರಶಾಂತ್ ಅವರು ಈ ಕುರಿತು ವಿಸ್ತೃತ ತನಿಖೆ ನಡೆಸಿ, ಕ್ರೀಡಾ ಸಚಿವ ಒ.ಜೆ. ಜೀನಿಶ್ ಅವರಿಗೆ ವರದಿ ಸಲ್ಲಿಸಿದ್ದಾರೆ. ಈ ತನಿಖಾ ವರದಿಯಲ್ಲಿ ಹಲವಾರು ಆಘಾತಕಾರಿ ವಿಷಯಗಳು ಪತ್ತೆಯಾಗಿವೆ. ಯೋಜನೆಗೆ ಸ್ಪಾನ್ಸರ್ (ಪ್ರಾಯೋಜಕತ್ವ) ವಹಿಸಿಕೊಂಡಿದ್ದ 'ರಿಪೋರ್ಟರ್ ಬ್ರಾಡ್‌ಕಾಸ್ಟಿಂಗ್ ಕಂಪನಿ'ಯು ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್‌ಗೆ ಸುಮಾರು 126 ಕೋಟಿ ರೂಪಾಯಿ ಪಾವತಿಸಿರುವುದಾಗಿ ಹೇಳಿತ್ತು. ಆದರೆ ಈ ಹಣ ನಿಜವಾಗಿ ವರ್ಗಾವಣೆಯಾಗಿದೆಯೇ ಅಥವಾ ಎಎಫ್‌ಎ ಅದನ್ನು ಸ್ವೀಕರಿಸಿದೆಯೇ ಎಂಬುದಕ್ಕೆ ಯಾವುದೇ ಸೂಕ್ತ ಆಧಾರ ಅಥವಾ ದಾಖಲೆಗಳು ಸಿಕ್ಕಿಲ್ಲ.

Lionel Messi Kerala Visit Row 126 Cr Financial Irregularities Surface in Sports Department Probe

ಹಣ ವರ್ಗಾವಣೆಗೆ ಸರ್ಕಾರದಿಂದ ಅನುಮತಿ ಕೋರಿದ್ದರು

ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ ಹಾಗೂ ಕೇರಳ ಸರ್ಕಾರದ ನಡುವೆಯಾಗಲಿ ಅಥವಾ ಪ್ರಾಯೋಜಕ ಸಂಸ್ಥೆ ಮತ್ತು ಸರ್ಕಾರದ ನಡುವೆಯಾಗಲಿ ಮೆಸ್ಸಿ ಭೇಟಿಗೆ ಸಂಬಂಧಿಸಿದಂತೆ ಯಾವುದೇ ಕಾನೂನುಬದ್ಧ ಒಪ್ಪಂದಗಳು ನಡೆದಿರಲಿಲ್ಲ. ಅಮೆರಿಕ ಮೂಲದ ಸಂಸ್ಥೆಯೊಂದರ ಮೂಲಕ ವಿದೇಶಕ್ಕೆ ಹಣ ವರ್ಗಾಯಿಸಲು ಪ್ರಾಯೋಜಕರು ಸರ್ಕಾರದ ಅನುಮತಿ ಕೋರಿದ್ದರು.

ಆದರೆ ಅದೇ ಅಮೆರಿಕನ್ ಏಜನ್ಸಿ ವಿರುದ್ಧ ಆರ್ಥಿಕ ಅಪರಾಧಗಳ ಆರೋಪದ ಮೇಲೆ ಅಮೆರಿಕದಲ್ಲೇ ತನಿಖೆ ನಡೆಯುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅದರಲ್ಲೂ ಪಾವತಿಯಾಗಿದೆ ಎಂಬುದಕ್ಕೆ ಸರ್ಕಾರಕ್ಕೆ ಪ್ರಾಯೋಜಕರು ಯಾವುದೇ ಪುರಾವೆಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ.

ಉನ್ನತ ಮಟ್ಟದ ತನಿಖೆಗೆ ಶಿಫಾರಸು

ಈ ಯೋಜನೆಯು ಕೇವಲ ಸುಳ್ಳು ಹಕ್ಕುಗಳು ಮತ್ತು ಆರ್ಥಿಕ ಅಕ್ರಮಗಳಿಂದ ಕೂಡಿದೆ ಎಂದು ಬೆಟ್ಟು ಮಾಡಿರುವ ಕ್ರೀಡಾ ಇಲಾಖೆ ಪ್ರಕರಣವನ್ನು ವಿಜಿಲೆನ್ಸ್ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳಿಂದ ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿದೆ. ಕ್ರೀಡಾ ಸಚಿವರಿಂದ ಈ ತನಿಖಾ ವರದಿಯನ್ನು ಪಡೆಯಲಾಗಿದ್ದು, ಮುಂದಿನ ಸೂಕ್ತ ಮತ್ತು ಉನ್ನತ ಮಟ್ಟದ ತನಿಖೆಗಾಗಿ ವರದಿಯನ್ನು ಈಗ ಕೇರಳ ಮುಖ್ಯಮಂತ್ರಿಯವರ ಪರಿಶೀಲನೆಗೆ ಹಸ್ತಾಂತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+