Ind vs Pak: ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯ ಅನುಮಾನ
2028ರಲ್ಲಿ ಲಾಸ್ ಏಂಜಲಿಸ್ ಒಲಿಂಪಿಕ್ಸ್ ನಡೆಯಲಿದೆ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸಲು ಚಿಂತನೆ ನಡೆಯುತ್ತಿದ್ದು, 128 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳಲಿದೆ. ಟಿ20 ಮಾದರಿಯ ಪಂದ್ಯಗಳನ್ನು ನಡೆಸುವುದು ಬಹುತೇಕ ಖಚಿತವಾಗಿದೆ. ಆದರೆ ಒಲಿಂಪಿಕ್ಸ್‌ಗೆ ಕೇವಲ 6 ತಂಡಗಳನ್ನು ಮಾತ್ರ ಪರಿಗಣಿಸುವ ಸಾಧ್ಯತೆ ಇದ್ದು ಐಸಿಸಿಗೆ ಹೊಸ ತಲೆನೋವು ಶುರುವಾಗಿದೆ.
ಪುರುಷರು ಮತ್ತು ಮಹಿಳೆಯರಿಗೆ ಆರು ತಂಡಗಳ ಟಿ20 ಪಂದ್ಯಾವಳಿಯಾಗಲಿದೆ. ಗರಿಷ್ಠ 15 ಆಟಗಾರರು ತಂಡದಲ್ಲಿ ಇರುತ್ತಾರೆ. ಆದರೆ, ಇತರ ಕ್ರೀಡೆಗಳಿಗಿಂತ ಭಿನ್ನವಾಗಿ, ಕ್ರಿಕೆಟ್‌ಗೆ ನೇರ ಅರ್ಹತಾ ಅವಕಾಶ ಇರುವುದಿಲ್ಲ. ಐಸಿಸಿ ಉನ್ನತ ಅಧಿಕಾರಿಗಳು ಶೀಘ್ರದಲ್ಲೇ ಜಿಂಬಾಬ್ವೆಯಲ್ಲಿ ಈ ಬಗ್ಗೆ ಸಭೆ ನಡೆಸಲಿದ್ದಾರೆ.

2028ರ ಒಲಿಂಪಿಕ್ಸ್‌ಗಾಗಿ ಅರ್ಹತಾ ಸನ್ನಿವೇಶವು ಅಧಿಕೃತ ಕಾರ್ಯಸೂಚಿಯಲ್ಲಿಲ್ಲ. ನಡುವೆ ಎರಡು ಟಿ20 ವಿಶ್ವಕಪ್‌ಗಳು ನಡೆಯಲಿದ್ದು ಇನ್ನೂ ಸಮಯವಿದೆ. ಆರು ತಂಡಗಳು ಆಡಲು ಅವಕಾಶವಿದ್ದರೂ, ಯುಎಸ್‌ಎ ಒಲಿಂಪಿಕ್ಸ್‌ನ ಆತಿಥೇಯರಾಗಿರುವುದರಿಂದ, ಅವರು ಪುರುಷ ಮತ್ತು ಮಹಿಳಾ ಎರಡರಲ್ಲೂ ತಲಾ ಒಂದು ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಆದ್ದರಿಂದ, ಉಳಿದ ಐದು ಸ್ಥಾನಗಳಿಗಾಗಿ ಹೋರಾಟ ನಡೆಯಲಿದೆ.
"ಅರ್ಹತಾ ಮಾನದಂಡಗಳನ್ನು ನಿರ್ಧರಿಸಲು ಸಾಕಷ್ಟು ಸಮಯವಿದೆ. ಇದು ಈಗ ಮುಖ್ಯವಾಗುವುದಿಲ್ಲ. ಕ್ರಿಕೆಟ್ ಇತರ ಕ್ರೀಡೆಗಳಂತೆ ನೇರ ಅರ್ಹತಾ ಪಂದ್ಯಾವಳಿಯನ್ನು ಅನುಸರಿಸುವುದಿಲ್ಲವಾದ್ದರಿಂದ ಇದು ಕಷ್ಟಕರವಾಗಿರುತ್ತದೆ. ಸಮಯ ಬಂದಾಗ ಎಲ್ಲಾ ತಂಡಗಳು ಚರ್ಚೆಯ ಭಾಗವಾಗುತ್ತಾರೆ," ಎಂದು ಐಸಿಸಿ ಸಮಿತಿಯ ಸದಸ್ಯರೂ ಆಗಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್‌ಸೈಡ್‌ಸ್ಪೋರ್ಟ್ ವರದಿ ಮಾಡಿದೆ.
ಸಂಭಾವ್ಯ ಮಾನದಂಡಗಳೇನು?
ಐಸಿಸಿ ಶ್ರೇಯಾಂಕ ಮತ್ತು ಅರ್ಹತಾ ಪಂದ್ಯಾವಳಿಯಾಗಿ ಐಸಿಸಿ ಟಿ 20 ವಿಶ್ವಕಪ್ 2026 ರನ್ನು ಆಧಾರವಾಗಿಟ್ಟುಕೊಳ್ಳುವ ಸಾಧ್ಯತೆ ಇದೆ.
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕ್ರಿಕೆಟ್ ಅನ್ನು ನಿರ್ದೇಶಿಸುವ ನಾಲ್ಕು ರಾಷ್ಟ್ರಗಳಾಗಿವೆ, ಈ ದೇಶಗಳೇ ಐಸಿಸಿಗೆ ಹೆಚ್ಚಿನ ಆದಾಯ ತಂದುಕೊಡುತ್ತವೆ. ಒಲಿಂಪಿಕ್ಸ್‌ನಲ್ಲಿ ಆಡಲು ಕೇವಲ ಆರು ತಂಡಗಳು ಯಾವು ಎನ್ನುವುದನ್ನು ಐಸಿಸಿ ನಿರ್ಧರಿಸಬೇಕಾಗುತ್ತದೆ.
ಐಸಿಸಿ ಟಿ 20 ಐ ಶ್ರೇಯಾಂಕಗಳು ತಂಡಗಳನ್ನು ನಿರ್ಧರಿಸುವ ಸೂತ್ರವಾಗಿರಬಹುದು. ಎಲ್ಲಾ ತಂಡಗಳಿಗೂ ಇದು ನ್ಯಾಯಯುತವಾಗಿರುತ್ತಿತ್ತು. ಆದಾರೂ, ಇಂಗ್ಲೆಂಡ್ ಗ್ರೇಟ್ ಬ್ರಿಟನ್‌ನ ಭಾಗವಾಗಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತದೆ. ಕ್ರಿಕೆಟ್ ಅರ್ಥದಲ್ಲಿ, ಕೆಲವು ಸ್ಕಾಟ್ಲೆಂಡ್ ಆಟಗಾರರು ಗ್ರೇಟ್ ಬ್ರಿಟನ್ ತಂಡದ ಭಾಗವಾಗಿರಬೇಕು.
ಪ್ರತಿ ಐಸಿಸಿ ಪಂದ್ಯಾವಳಿಯಲ್ಲೂ ಭಾರತವನ್ನು ಪಾಕಿಸ್ತಾನದ ಪಂದ್ಯಗಳು ನಡೆಯುತ್ತವೆ. ಐಸಿಸಿ ಪಂದ್ಯಾವಳಿಯಲ್ಲಿ ಮಾತ್ರ ಈ ಎರಡೂ ತಂಡಗಳು ಮುಖಾಮುಖಿಯಾಗುತ್ತವೆ. ಆದರೆ ಒಲಿಂಪಿಕ್ಸ್‌ನಲ್ಲಿ ಭಾರತ ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ.
ಸದ್ಯ ಐಸಿಸಿ ಟಿ 20 ಐ ಶ್ರೇಯಾಂಕಗಳಲ್ಲಿ ಪಾಕಿಸ್ತಾನ 7ನೇ ಸ್ಥಾನದಲ್ಲಿದೆ. ಮುಂದಿನ ಮೂರು ವರ್ಷಗಳಲ್ಲಿ ಅಗ್ರ 5ರ ಸ್ಥಾನದೊಳಗೆ ಇದ್ದರೆ ಮಾತ್ರ ಪಾಕಿಸ್ತಾನಕ್ಕೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ.
-
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ












Click it and Unblock the Notifications