RCB: ಆರ್‌ಸಿಬಿಗೆ ಎಂಟ್ರಿ ಕೊಟ್ಟ ಆಲ್‌ರೌಂಡರ್ ಪಾಂಡ್ಯ!

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜು ಎರಡನೇ ದಿನದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಲ್‌ರೌಂಡರ್ ಕೃನಾಲ್ ಪಾಂಡ್ಯರನ್ನು ಖರೀದಿ ಮಾಡುವ ಮೂಲಕ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಮೊದಲ ದಿನ ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ರಸಿಕ್ ದಾರ್ ಮತ್ತು ಸುಯಶ್ ಶರ್ಮಾರನ್ನು ಖರೀದಿ ಮಾಡಿತ್ತು.

ಎರಡನೇ ದಿನ ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯರನ್ನು ಖರೀದಿ ಮಾಡುವ ಮೂಲಕ ಉತ್ತಮ ಆಯ್ಕೆಯನ್ನು ಮಾಡಿದೆ. ಮತ್ತೊಬ್ಬ ಆಲ್‌ರೌಂಡರ್ ನಿತೀಶ್ ರಾಣಾರನ್ನು ಖರೀದಿ ಮಾಡಲು ಆರ್ ಸಿಬಿ ಪ್ರಯತ್ನಿಸಿದರೂ ಕೊನೆಗೆ ರಾಜಸ್ಥಾನ ರಾಯಲ್ಸ್‌ ಅವರನ್ನು ಖರೀದಿ ಮಾಡಿತು.

krunal pandya sold to rcb for rs 5 75 crores in ipl 2025 mega auction

ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಜೊತೆಯಲ್ಲಿ ಆಡಿದವರು. ಕೃನಾಲ್ ಪಾಂಡ್ಯ ಅಪಾರ ಅನುಭವ ಹೊಂದಿರುವ ಆಟಗಾರ, 2022ರ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದರು. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಎಲ್‌ಎಸ್‌ಜಿ ಅವರನ್ನು ಉಳಿಸಿಕೊಳ್ಳಲು ಮನಸ್ಸು ಮಾಡಲಿಲ್ಲ.

ಕೃನಾಲ್ ಪಾಂಡ್ಯ ಖರೀದಿ ಮಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ನಡುವೆ ಭಾರಿ ಪೈಪೋಟಿ ನಡೆಯಿತು ಅಂತಿಮವಾಗಿ ಆರ್ ಸಿಬಿ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಯಿತು. 5.75 ಕೋಟಿ ರೂಪಾಯಿಗೆ ಕೃನಾಲ್ ಪಾಂಡ್ಯ ಆರ್ ಸಿಬಿ ಪಾಲಾದರು.

ಕೃನಾಲ್ ಪಾಂಡ್ಯ ಅಂಕಿ ಅಂಶ

ಕೃನಾಲ್ ಪಾಂಡ್ಯ 127 ಐಪಿಎಲ್ ಪಂದ್ಯಗಳನ್ನಾಡಿದ್ದು 1647 ರನ್ ಗಳಿಸಿದ್ದಾರೆ. 132.82 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು 22.56 ಸರಾಸರಿ ಹೊಂದಿದ್ದಾರೆ. 1 ಅರ್ಧಶತಕ ಕೂಡ ಗಳಿಸಿದ್ದಾರೆ. 76 ವಿಕೆಟ್ ಪಡೆದಿದ್ದು, 7.36 ಎಕಾನಮಿ ಹೊಂದಿದ್ದಾರೆ. 11 ರನ್‌ಗಳಿಗೆ 3 ವಿಕೆಟ್ ಪಡೆದಿರುವುದು ಅವರ ಉತ್ತಮ ಸಾಧನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+