ಗೆದ್ದಿದ್ದು ಕೇವಲ 5 ಐಪಿಎಲ್‌ ಪಂದ್ಯ.. ಆದ್ರೆ ಕೃನಾಲ್ ಪಾಂಡ್ಯ ಮನೆಯಲ್ಲಿವೆ 10 ಟ್ರೋಫಿಗಳು

Krunal Pandya: ಐಪಿಎಲ್‌ 2026ರ ಫೈನಲ್ ಪಂದ್ಯದಲ್ಲಿ ಗುಜರಾಟ್‌ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಸತತ ಎರಡನೇ ಬಾರಿ ಟ್ರೋಫಿ ಎತ್ತಿಹಿಡಿಯಿತು. ಬೆಂಗಳೂರು ತಂಡವು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾದ ಕೃನಾಲ್ ಪಾಂಡ್ಯ ಅವರು ಇದೀಗ ಅಚ್ಚರಿ ಹೇಳಿಕೆ ನೀಡಿದ್ದಾರೆ. ನಮ್ಮ ಮನೆಯಲ್ಲಿ 10 ಐಪಿಎಲ್‌ ಟ್ರೋಫಿಗಳಿವೆ ಎಂದು ಹೇಳಿದ್ದು, ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸಹೋದರರ ಜೋಡಿ ಅಂದ್ರೆ ಅದು ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ. ಇತ್ತೀಚೆಗೆ ಮುಕ್ತಾಯಗೊಂಡ 2026ರ ಆವೃತ್ತಿಯಲ್ಲಿ ಕೃನಾಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅದ್ಭುತ ಪ್ರದರ್ಶನ ನೀಡಿ ತಂಡವು ಸತತ ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Krunal Pandya Reveals Unique IPL Record Pandya Family Has 10 IPL Trophies Viral Social media

ಆರ್‌ಸಿಬಿ ಹೊಸ ದಾಖಲೆ

ಕಳೆದ ಆವೃತ್ತಿಯಲ್ಲಿ 17 ವರ್ಷಗಳ ದೀರ್ಘ ಕಾಯುವಿಕೆಯ ಬಳಿಕ ತನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದಿದ್ದ ಆರ್‌ಸಿಬಿ ತಂಡ ಈ ಬಾರಿ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಾತ್ರವಾಯಿತು.

ಹಾರ್ದಿಕ್-ಕೃನಾಲ್ ಬಾಂಡಿಂಗ್

ಮತ್ತೊಂದೆಡೆ ಕೃನಾಲ್ ಪಾಂಡ್ಯ ಪಾಲಿಗೆ ಇದು 5ನೇ ಐಪಿಎಲ್ ಪ್ರಶಸ್ತಿಯಾಗಿದೆ. ಈ ಹಿಂದೆ ಅವರು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ 4 ಬಾರಿ ಟ್ರೋಫಿ ಗೆದ್ದಿದ್ದರು. ವಿಶೇಷ ಅಂದ್ರೆ ಕೃನಾಲ್ ಅವರು ಚಾಂಪಿಯನ್ಸ್ ವೇದಿಕೆಯಲ್ಲಿ ತಮ್ಮ ಸಹೋದರ ಹಾರ್ದಿಕ್ ಪಾಂಡ್ಯ ಇಲ್ಲದೆ ಪ್ರಶಸ್ತಿ ಸಂಭ್ರಮ ಆಚರಿಸಿದ ಎರಡನೇ ಸಂದರ್ಭ ಇದಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದ ಹಾರ್ದಿಕ್ ಅವರಿಗೆ ಈ ಸೀಸನ್ ನಿರಾಶಾದಾಯಕವಾಗಿತ್ತು.

'ಪಾಂಡ್ಯ ಕುಟುಂಬದಲ್ಲಿ 10 ಐಪಿಎಲ್ ಟ್ರೋಫಿಗಳಿವೆ'

ಮೈದಾನದಲ್ಲಿ ಎಷ್ಟೇ ಪೈಪೋಟಿ ಇದ್ದರೂ ಹಾರ್ದಿಕ್ ಮತ್ತು ಕೃನಾಲ್ ಪರಸ್ಪರ ಆಪ್ತ ಬಾಂಧವ್ಯ ಹೊಂದಿದ್ದಾರೆ. ತಮ್ಮಿಬ್ಬರ ನಡುವಿನ ಬಾಂಧವ್ಯದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಕೃನಾಲ್ ಪಾಂಡ್ಯ, 'ನಾವಿಬ್ಬರೂ ಜೊತೆಯಾಗಿ ಕ್ರಿಕೆಟ್ ಆಡಿದ್ದೇವೆ. ಕ್ರಿಕೆಟ್‌ಗೆ ಸಂಬಂಧಿಸಿದ ತಾಂತ್ರಿಕ ಹಾಗೂ ತಂತ್ರಗಾರಿಕೆಯ ವಿಷಯಗಳ ಬಗ್ಗೆ ನಾವು ಸದಾ ಚರ್ಚಿಸುತ್ತೇವೆ. ಇದು ನಮ್ಮಿಬ್ಬರಿಗೂ ಆಟವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತದೆ. ನಮ್ಮ ಪಾಂಡ್ಯ ಕುಟುಂಬದಲ್ಲಿ ಈಗ ಒಟ್ಟು 10 ಐಪಿಎಲ್ ಟ್ರೋಫಿಗಳಿವೆ. ಇದು ನಿಜಕ್ಕೂ ಹೆಮ್ಮೆಯ ವಿಷಯ,' ಎಂದು ಹೇಳಿದ್ದಾರೆ.

ಪಾಂಡ್ಯ ಸಹೋದರರ ಐಪಿಎಲ್ ಪಯಣ

ಹಾರ್ದಿಕ್ ಪಾಂಡ್ಯ 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದು, ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. ಕೃನಾಲ್ ಪಾಂಡ್ಯ 2016ರಲ್ಲಿ ಅದೇ ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ತದನಂತರ ಈ ಸಹೋದರರು ಮುಂಬೈ ಇಂಡಿಯನ್ಸ್ 2017, 2019 ಮತ್ತು 2020ರಲ್ಲಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

2021ರ ಸೀಸನ್ ಬಳಿಕ ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಮೊದಲ ವರ್ಷವೇ ಪ್ರಶಸ್ತಿ ಗೆದ್ದುಕೊಟ್ಟರು. ಮರು ವರ್ಷ ತಂಡವನ್ನು ರನ್ನರ್ ಅಪ್ ಸ್ಥಾನಕ್ಕೆ ಮುನ್ನಡೆಸಿದರು. ತದನಂತರ ಅವರು ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ ಮರಳಿದರು. ಆದರೂ ಈ ಸೀಸನ್‌ನಲ್ಲಿ ಮುಂಬೈ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯುವ ಮೂಲಕ ಭಾರಿ ವೈಫಲ್ಯ ಅನುಭವಿಸಿತು.

ಇನ್ನೊಂದೆಡೆ ಮುಂಬೈ ತಂಡದಿಂದ ಹೊರಬಂದ ಬಳಿಕ ಕೃನಾಲ್ ಪಾಂಡ್ಯ ಮೂರು ಸೀಸನ್‌ಗಳ ಕಾಲ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಅವರು ತಂಡವು ಸತತ ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಕೊಡುಗೆ ನೀಡಿದ್ದಾರೆ. ಸದ್ಯ ಈ ಇಬ್ಬರೂ ಸಹೋದರರು ತಲಾ 5 ಬಾರಿ ಐಪಿಎಲ್ ಟ್ರೋಫಿ ಗೆದ್ದ ಅಪರೂಪದ ದಾಖಲೆ ಹೊಂದಿದ್ಧಾರೆ.

ಹಾರ್ದಿಕ್ ಪಾಂಡ್ಯ (5 ಟ್ರೋಫಿ)

* ಮುಂಬೈ ಇಂಡಿಯನ್ಸ್ ಪರ ಆಡಿ 4 ಬಾರಿ (2015, 2017, 2019, 2020) ಹಾಗೂ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ 1 ಬಾರಿ (2022) ಟ್ರೋಫಿ ಗೆದ್ದಿದ್ದಾರೆ.

ಕೃನಾಲ್ ಪಾಂಡ್ಯ (5 ಟ್ರೋಫಿ)

* ಮುಂಬೈ ಇಂಡಿಯನ್ಸ್ ಪರ 3 ಬಾರಿ (2017, 2019, 2020) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿ ಸತತ 2 ಬಾರಿ (2025, 2026) ಚಾಂಪಿಯನ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+