IPL 2025: ಐಪಿಎಲ್ ಕ್ವಾಲಿಫೈಯರ್ ಭವಿಷ್ಯ
IPL 2025 Qualifier Prediction: ಐಪಿಎಲ್ 2025ನೇ ಆವೃತ್ತಿ ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶ ಮಾಡಿವೆ. ಹಾಗಾದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿ ಉಳಿದ ಮೂರು ತಂಡಗಳ ಕ್ವಾಲಿಫೈಯರ್ ಎಂಟ್ರಿ ಭವಿಷ್ಯ ಹೇಗಿದ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇದೀಗ ಐಪಿಎಲ್ 2025 ಟೂರ್ನಿ ಮುಕ್ತಾಯದ ಹಂತದಲ್ಲಿದ್ದು, ಪ್ಲೇ ಆಫ್‌ಗೆ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡಗಳು ಎಂಟ್ರಿ ಕೊಟ್ಟಿದ್ದು, ಕ್ವಾಲಿಫೈಯರ್‌ಗಾಗಿ ಜಿದ್ದಾಜಿದ್ದಿ ನಡೆಸುತ್ತಿವೆ.

ಪ್ಲೇ ಆಫ್ ಪ್ರವೇಶ ಪಡೆದ ತಂಡಗಳು
* ಗುಜರಾತ್ ಟೈಟಾನ್ಸ್
* ಪಂಜಾಬ್ ಕಿಂಗ್ಸ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಮುಂಬೈ ಇಂಡಿಯನ್ಸ್
* ಗುಜರಾತ್ ಟೈಟಾನ್ಸ್: ಗುಜರಾತ್ ಟೈಟಾನ್ಸ್ ತಂಡವು ಇದುವರೆಗೂ 13 ಪಂದ್ಯಗಳನ್ನಾಡಿದೆ. 9ರಲ್ಲಿ ಗೆದ್ದು, 4 ಸೋಲು ಕಂಡಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 18 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಅಲ್ಲದೆ, ಪ್ಲೇ ಆಫ್ ಕೂಡ ಪ್ರವೇಶ ಮಾಡಿದೆ. ಇಂದಿನ ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ ಗೆದ್ದರೆ 20 ಅಂಕಗಳನ್ನು ಪಡೆದು ಅಗ್ರಸ್ಥಾನದೊಂದಿದೆ ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಬಹುದು.
* ಪಂಜಾಬ್ ಕಿಂಗ್ಸ್: ಪಂಜಾಬ್ ಕಿಂಗ್ಸ್ ತಂಡವು ಇದುವರೆಗೆ 13 ಪಂದ್ಯಗಳನ್ನಾಡಿದೆ. ಇವುಗಳಲ್ಲಿ 8 ಗೆಲುವು, 4 ಸೋಲು ಕಂಡಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ 17 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಉಳಿದ ಒಂದು ಪಂದ್ಯದಲ್ಲಿ ಗೆದ್ದರೆ, 19 ಅಂಕಗಳನ್ನು ಪಡೆಯಬಹುದು. ಅಲ್ಲದೆ. ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅವಕಾಶ ಸಗುವ ಸಾಧ್ಯತೆಯಿದೆ.
* ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ 13 ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ 4 ಸೋಲು, 8 ಗೆಲುವು, ಒಂದು ರದ್ದಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದೆ. ಮುಂದಿನ ಉಳಿದ ಒಂದು ಪಂದ್ಯದಲ್ಲಿ ಉತ್ತಮ ರನ್ ರೇಟ್‌ನಲ್ಲಿ ಗೆದ್ದರೆ, 19 ಅಂಕಗಳೊಂದಿಗೆ ಮೊದಲ ಅಥವಾ ದ್ವಿತೀಯ ಸ್ಥಾನಕ್ಕೇರುವ ಅವಕಾಶ ಇದೆ. ಅಲ್ಲದೆ, ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಲಿದೆ.
* ಮುಂಬೈ ಇಂಡಿಯನ್ಸ್: ಮುಂಬೈ ಇಂಡಿಯನ್ಸ್ ಈವರೆಗೂ 13 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ 5ರಲ್ಲಿ ಸೋಲು, 8ರಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಉಳಿದ ಒಂದು ಪಂದ್ಯದಲ್ಲಿ ಗೆದ್ದರೆ, 18 ಅಂಕಗಳನ್ನು ಪಡೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಲು ಆರ್‌ಸಿಬಿ, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಸೋಲಿಗೆ ಕಾಯಬೇಕಿದೆ. ಇಲ್ಲದಿದ್ದರೆ, ಮೊದಲೆರಡು ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ.
ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಗೆದ್ದರೆ ಒಟ್ಟು ಅಂಕಗಳ ಸಂಖ್ಯೆ 20 ಆಗಲಿದೆ. ಮತ್ತೊಂದೆಡೆ ಆರ್‌ಸಿಬಿ ಉಳಿದ ಒಂದು ಪಂದ್ಯದಲ್ಲಿ ಗೆದ್ದರೆ 19 ಅಂಕ ಪಡೆಯಲಿದೆ. ಆಗ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯದಲ್ಲಿ ಗೆದ್ದರೂ ಸಹ 18 ಅಂಕಗಳನ್ನು ಮಾತ್ರ ಪಡೆದುಕೊಳ್ಳಲಿದ್ದು, ಎಲಿಮಿನೇಟರ್ ಪಂದ್ಯ ಆಡುವುದು ಖಚಿತ ಆದಂತಾಗಲಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಬರುವ ತಂಡಗಳು ಎಲಿಮಿನೇಟರ್ ಪಂದ್ಯ ಆಡಲಿವೆ.
ಇದೀಗ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲು ಜಿಟಿ, ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಮುಂಬೈ ಕೂಡ ಈ ಸಾಲಿನಲ್ಲಿದೆ. ಆದರೆ, ಪ್ಲೇಆಫ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ಆಡುವ ತಂಡಗಳು ಯಾವುವು ಎಂಬುದು ಇನ್ನೂ ನಿರ್ಧಾರ ಆಗಬೇಕಿದೆ ಅಷ್ಟೇ.
ಯಾವ ಪಂದ್ಯ ಯಾವಾಗ ನಡೆಯಲಿದೆ?
* ಮೊದಲ ಕ್ವಾಲಿಫೈಯರ್ ಪಂದ್ಯ ಮೇ 29ರಂದು ಚಂಡೀಗಢದಲ್ಲಿ ಸಂಜೆ 7:30ಕ್ಕೆ ನಡೆಯಲಿದೆ.
* ಎಲಿಮಿನೇಟರ್ ಪಂದ್ಯ ಮೇ 30ರಂದು ಚಂಡೀಗಢದಲ್ಲಿ ಸಂಜೆ 7:30ಕ್ಕೆ ನಡೆಯಲಿದೆ.
* ಎರಡನೇ ಎಲಿಮಿನೇಟರ್ ಪಂದ್ಯ ಜೂನ್ 1ರಂದು ಅಹಮದಬಾದ್‌ನಲ್ಲಿ ಸಂಜೆ 7:30ಕ್ಕೆ ನಡೆಯಲಿದೆ.
* ಫೈನಲ್ ಪಂದ್ಯ ಜೂನ್ 3ರಂದು ಅಹಮದಬಾದ್‌ನಲ್ಲಿ ಸಂಜೆ 7:30ಕ್ಕೆ ನಡೆಯಲಿದೆ.
ಟೂರ್ನಿಯಿಂದ ಹೊರಬಿದ್ದ ತಂಡಗಳು
* ಡೆಲ್ಲಿ ಕ್ಯಾಪಿಟಲ್ಸ್
* ಕೊಲ್ಕತ್ತಾ ನೈಟ್ ರೈಡರ್ಸ್
* ಲಕ್ನೋ ಸೂಪರ್ ಜೈಂಟ್ಸ್
* ಸನ್ ರೈಸರ್ಸ್ ಹೈದರಾಬಾದ್
* ರಾಜಸ್ತಾನ್ ರಾಯಲ್ಸ್
* ಚೆನ್ನೈ ಸೂಪರ್ ಕಿಂಗ್ಸ್












Click it and Unblock the Notifications