KL Rahul: ಕನ್ನಡಿಗ ಕೆಎಲ್ ರಾಹುಲ್‌ಗೆ ಹಿನ್ನಡೆ: ಉಪನಾಯಕತ್ವ ಕಳೆದುಕೊಂಡಿದ್ದು ಏಕೆ?
ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಆಯ್ಕೆ ಆಗಿದೆ. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಆಟಗಾರರಿಗೆ ನಿರಾಸೆ ಆಗಿದೆ. ಇನ್ನು ತಂಡದ ಪ್ರಮುಖ ಜವಾಬ್ದಾರಿಯನ್ನು ಹೊರುವ ಆಸೆ ಹೊಂದಿದ್ದ ಪ್ಲೇಯರ್‌ಗಳಿಗೆ ಶಾಕ್ ಕಾದಿದೆ. ಇದೇ ರೀತಿಯ ಪೆಟ್ಟು ಕನ್ನಡಿಗ ಕೆಎಲ್ ರಾಹುಲ್ ಅವರಿಗೂ ಬಿದ್ದಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆಗ ಈ ಸ್ಥಾನವನ್ನು ಕನ್ನಡಿಗ ಕೆ.ಎಲ್ ರಾಹುಲ್ ತುಂಬುತ್ತಾರೆ ಎಂಬ ಮಾತುಗಳು ಇದ್ದವು. ಆದರೆ ರೋಹಿತ್ ತಂಡಕ್ಕೆ ಎಂಟ್ರಿ ನೀಡಿದ್ದರಿಂದ ನಾಯಕತ್ವದ ಆಸೆ ಕಮರಿತು. ನಾಯಕತ್ವ ಹೊದ್ರೂ ಉಪನಾಯಕ ಗ್ಯಾರಂಟಿ ಅಂದುಕೊಂಡಿದ್ದ ರಾಹುಲ್‌ಗೆ ಅಲ್ಲೂ ಪೆಟ್ಟು ಬಿದ್ದಿದೆ.

ಉಪನಾಯಕತ್ವ ನೀಡದ ಆಯ್ಕೆ ಸಮಿತಿ
ಈಗಾಗಲೇ ಆಯ್ಕೆ ಸಮಿತಿ ಘೋಷಿಸಿರುವ ತಂಡದಲ್ಲಿ ಕೆ.ಎಲ್ ರಾಹುಲ್ ಅವರಿಗೆ ಬರೀ ಒಬ್ಬ ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡಿದೆ. ಅದರಲ್ಲೂ ಈಗಿನ ತಂಡವನ್ನು ನೋಡಿದರೆ ಇಬ್ಬರು ವಿಕೆಟ್ ಕೀಪರ್‌ಗಳಲ್ಲಿ ರಾಹುಲ್‌ಗೆ ಒಂದು ಸ್ಲಾಟ್ ನೀಡಲಾಗಿದೆ. ರಿಷಭ್ ಪಂಥ್ ಈ ಸರಣಿಯಲ್ಲಿ ಆಡುವ ಅವಕಾಶ ಪಡೆದು ಅಬ್ಬರಿಸಿದರೆ, ಕಥೆ ಮುಗಿದೇ ಹೋಯಿತು.
ಈಗ ಟೀಮ್ ಇಂಡಿಯಾ ಮಲ್ಟಿ ಟಾಸ್ಕ್ ಹ್ಯಾಂಡಲ್ ಮಾಡುವ ಆಟಗಾರರು ಬೇಕಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಹ ಫೀಲ್ಡಿಂಗ್‌ನಲ್ಲಿ ಅಮೋಘ ಕಾಣಿಕೆ ನೀಡುತ್ತಾರೆ. ಇನ್ನು ಹಲವು ಆಟಗಾರರು ನೀವು ಏನ್ ಕೆಲಸಾ ನೀಡ್ತೀರಾ ಅದನ್ನು ಮಾಡಲು ಸೈ ಎನುತ್ತಾರೆ. ರಾಹುಲ್ ಈ ಸಾಲಿನಲ್ಲಿ ಕೊಂಚ ಹಿಂದೆ ಇದ್ದಾರೆ. ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಅವರನ್ನು ತಂಡಕ್ಕೆ ಸೇರಿಸಿಕೊಂಡಲ್ಲಿ, ವಿಕೆಟ್ ಕೀಪಿಂಗ್‌ನಲ್ಲಿ ಅಷ್ಟೊಂದು ಚುರುಕುತನ ಕಾಣುತ್ತಿಲ್ಲ.

ಅವಕಾಶ ಕೈ ತಪ್ಪಲು ಕಾರಣ ಏನು?
ಯುವ ವಿಕೆಟ್ ಕೀಪರ್‌ಗಳು ಕಲಾತ್ಮಕತೆ ಅಮೋಘವಾಗಿದೆ. ಒಂದು ವೇಳೆ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಸಹ ಈ ರೇಸ್‌ಗೆ ಎಂಟ್ರಿ ನೀಡಿದರೆ ರಾಹುಲ್ ಕಥೆ ಏನು?, ಇನ್ನು ಆಯ್ಕೆ ಸಮಿತಿ ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ಭವಿಷ್ಯದ ತಂಡದಲ್ಲಿ ರಾಹುಲ್ ಕಾಣಿಸಿಕೊಳ್ಳುವುದು ಡೌಟ್ ಎನ್ನುವಂತಾಗಿದೆ.
ಇದಕ್ಕೆ ಕಾರಣ ರಾಹುಲ್ ಫಿಟ್ನೆಸ್.. ರಾಹುಲ್ ಪದೇ ಪದೇ ಫಿಟ್ನೆಸ್ ಇಲ್ಲದೆ ಪರದಾಟ ನಡೆಸುತ್ತಾರೆ. ಅಲ್ಲದೆ ಮಹತ್ವದ ಸರಣಿಗಳ ವೇಳೆಯೂ ಇವರ ಫಿಟ್ನೆಸ್ ಸಮಸ್ಯೆಯನ್ನು ಎದುರಿಸಿದ್ದಾರೆ. ಇದರಿಂದ ಪಾರಾಗುವುದು ನಿಜಕ್ಕೂ ರಾಹುಲ್‌ಗೆ ದೊಡ್ಡ ಸವಾಲೇ ಆಗಿದೆ. ಹಾಗಾಗಿ ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಇವರು ಆಡುತ್ತಾರೋ ಇಲ್ಲವೋ ಎಂಬುದೇ ಅನುಮಾನ. ಹೀಗಾಗಿ ಯುವಕರಿಗೆ ಆದ್ಯತೆ ನೀಡಲಾಗುತ್ತಿದೆ.
ರಾಹುಲ್ ಫಿಟ್ನೆಸ್ ಬಗ್ಗೆ ಅವರ ಅಂಕಿ ಅಂಶಗಳೇ ಕನ್ನಡಿ ಹಿಡಿಯುತ್ತವೆ. ರಾಹುಲ್ ಕಳೆದ ಒಂದು ದಶಕದಿಂದ ಭಾರತದ ಪರ ಆಡಿದ್ದು ಕೇವಲ 50 ಟೆಸ್ಟ್, 75 ಏಕದಿನ, 72 ಟಿ20 ಪಂದ್ಯಗಳನ್ನು ಆಡಿದ್ದಾರೆ.












Click it and Unblock the Notifications