RCB: ನಮ್ಮವರ ಕಷ್ಟಕ್ಕೆ ಆಗದ ಹಣ ಇನ್ನು ಯಾರಿಗೆ?; ಟೀಂ ಇಂಡಿಯಾ ಮಾಜಿ ವೇಗಿ
KL Rahul: ವಿಶ್ವದ ಅತ್ಯಂತ ದೊಡ್ಡ, ಶ್ರೀಮಂತ ಲೀಗ್ ಐಪಿಎಲ್ ಆಗಿದೆ. ಈ ಬಾರಿ ಕನ್ನಡಿಗರನ್ನೇ ಆರ್‌ಸಿಬಿ ಖರೀದಿ ಮಾಡಲಿದ್ದಾರೆ ಎನ್ನುವ ಭರವಸೆ ಬೆಟ್ಟದಷ್ಟಿತ್ತು. ಆದರೆ ಈ ಭರವಸೆಯನ್ನು ನುಚ್ಚುನೂರು ಮಾಡಿದ್ದು, ಫ್ರಾಂಚೈಸಿ ನಡೆಗೆ ತೀವ್ರ ಆಕ್ರೋಶಗಳು ಭುಗಿಲೆದ್ದಿವೆ. ಈ ಬಗ್ಗೆ ಟೀಂ ಇಂಡಿಯಾ ಮಾಜಿ ವೇಗಿ ಬೌಲರ್ ಗಣೇಶ್ ಕೂಡ ಟ್ವೀಟ್ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 18ರ ಆವೃತ್ತಿಯ ಮೆಗಾ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಜಿತೇಶ್ ಶರ್ಮಾ ಅವರನ್ನು 11 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ ಎನ್ನುವುದೇ ಇದೀಗ ಅಚ್ಚರಿ ಉಂಡು ಮಾಡಿದೆ. ಮತ್ತೊಂದೆಡೆ ಕನ್ನಡಿದ ಕೆ.ಎಲ್.ರಾಹುಲ್ ಖರೀದಿ ಮಾಡಲು ಆರ್‌ಸಿಬಿ ನಿರಾಸಕ್ತಿ ತೋರಿರುವುದು ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮೊದಲ ಸುತ್ತಿನಲ್ಲಿ ಸ್ವಲ್ಪ ಮಟ್ಟಿಗೆ ಬಿಡ್ಡಿಂಗ್ ನಡೆಸಿದ ಆರ್‌ಸಿಬಿ ಕೆ.ಎಲ್.ರಾಹುಲ್ ಅವರ ಮೌಲ್ಯ 7 ಕೋಟಿ ರೂಪಾಯಿ ದಾಟುತ್ತಿದ್ದಂತೆ ಬಿಡ್ಡಿಂಗ್ ನಿಲ್ಲಿಸಿಬಿಟ್ರು. ಕೀಪಿಂಗ್, ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದ ಅದರಲ್ಲೂ ವಿಶೇಷವಾಗಿ ತಂಡಕ್ಕೆ ಬೇಕಾಗಿದ್ದ ಕೆ.ಎಲ್.ರಾಹುಲ್ ಅವರನ್ನು ಬಿಟ್ಟು ಜಿತೇಶ್ ಶರ್ಮಾ ಅವರನ್ನು ಖರೀದಿ ಮಾಡಿದ್ದೇ ಇದೀಗ ಅಚ್ಚರಿ ಉಂಟು ಮಾಡಿದೆ.
ಇನ್ನು ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಮಾಜಿ ವೇಗಿ ಬೌಲರ್ ದೊಡ್ಡ ಗಣೇಶ ಅವರು, "ಕೆಎಲ್ ರಾಹುಲ್ ಅವರನ್ನು ಬಿಟ್ಟುಕೊಟ್ಟು, ನೀವು ಯಾರಿಗಾಗಿ ಎಲ್ಲಾ ಹಣವನ್ನು ಎತ್ತಿಟ್ಟಿದ್ದೀರಿ. ಇದು ಸಂಪೂರ್ಣವಾಗಿ ಬುದ್ದಿಹೀನತೆಯನ್ನು ತೋರಿಸುತ್ತದೆ. ಸ್ಥಳೀಯ ಅಂದರೆ ಕನ್ನಡದ ಅಭಿಮಾನಿಗಳ ಭಾವನೆಗಳೊಂದಿಗೆ ಆಟವಾಡುತ್ತಿದೆ," ಎಂದು ಆಕ್ರೋಶ ಹೊರಹಾಕಿದ್ದಾರೆ.
.@RCBTweets what’s the rationale there? Not bidding for KL Rahul? For whom are you guys saving all that money. Totally mindless. Playing with local fans’ emotions #IPL2025 #IPLAuction2025
— Dodda Ganesh | ದೊಡ್ಡ ಗಣೇಶ್ (@doddaganesha) November 24, 2024
ಆರ್‌ಸಿಬಿ ತಂಡವು ಕೆಎಲ್ ರಾಹುಲ್‌ಗಾಗಿ ಕೇವಲ 7 ಕೋಟಿ ರೂಪಾಯಿಗಿಂತ ಹೆಚ್ಚು ಬಿಡ್ ಮಾಡಲು ಮುಂದಾಗಲಿಲ್ಲ. ಆದರೆ, ಜಿತೇಶ್ ಶರ್ಮಾ ಅವರನ್ನು ಬರೋಬ್ಬರಿ 11 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ. ಹಾಗೆ ನೋಡುವುದಾದರೆ, ಉತ್ತಮ ಪ್ರದರ್ಶನದಲ್ಲಿ ಜಿತೇಶ್ ಶರ್ಮಾಗಿಂತ ಕೆಎಲ್ ರಾಹುಲ್ ಉತ್ತಮ ಆಯ್ಕೆ ಆಗಿತ್ತು ಎನ್ನುವುದೇ ಬಹುತೇಕದ ವಾದ ಆಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು 14 ಕೋಟಿ ರೂಪಾಯಿದೆ ಖರೀದಿಸಿದ್ದು , ಆರ್‌ಸಿಬಿ ಫ್ರಾಂಚೈಸಿಯು ನಿರಾಸಕ್ತಿ ತೋರಿದೆ. ಇದರಿಂದ ಕನ್ನಡದ ಅಂದರೆ ತವರಿನ ಪರ ಆಡುವ ಕೆಎಲ್ ರಾಹುಲ್ ಆಸೆ ಮತ್ತೆ ಹುಸಿಯಾದಂತಾಗಿದೆ. ಮತ್ತೊಂದೆಡೆ ಪ್ರಾಂಚೈಸಿ ವಿರುದ್ಧ ಕನ್ನಡಿಗರು ಕೆಂಡಕಾರುತ್ತಿದ್ದಾರೆ.
ಕಳೆದ ಬಾರಿ ಅಂದರೆ 17ನೇ ಸೀಸನ್‌ನಲ್ಲಿ ಎಲ್‌ಎಸ್‌ಜಿ ಕೆ.ಎಲ್.ರಾಹುಲ್ ಅವರನ್ನು 17 ಕೋಟಿಗೆ ಖರೀದಿ ಮಾಡಿದ್ದರು. ಈ ಬಾರಿ ಎಲ್‌ಎಸ್‌ಜಿ ಕೈಬಿಟ್ಟ ಹಿನ್ನೆಲೆ ಆರ್‌ಸಿಬಿ ಖರೀದಿ ಮಾಡಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಅಲ್ಲದೆ, ಕೆ.ಎಲ್.ರಾಹುಲ್ ಕೂಡ ಹಲವು ಬಾರಿ ಆರ್‌ಸಿಬಿ ಪರ ಆಡುವ ಬಗ್ಗೆ ಇಂಗಿತವನ್ನು ವ್ಯಕ್ತಪಡಿಸಿದ್ದರು.












Click it and Unblock the Notifications