KL Rahul: ಆರ್‌ಸಿಬಿ ಸೇರುವ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಕನ್ನಡಿಗ

ಐಪಿಎಲ್ 2025ರ ಆವೃತ್ತಿ ಆರಂಭಕ್ಕೆ ಮುನ್ನ ಮೆಗಾ ಹರಾಜು ನಡೆಯಲಿದ್ದು ಹಲವು ತಂಡಗಳಲ್ಲಿ ಈ ಬಾರಿ ಪ್ರಮುಖ ಬದಲಾವಣೆಗಳನ್ನು ನೋಡಬಹುದು. ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಕೊಡಬೇಕು ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಗಬೇಕಿದ್ದು, ಹಲವು ಫ್ರಾಂಚೈಸಿಗಳು ಈಗಾಗಲೇ ಆಟಗಾರರನ್ನು ಉಳಿಸಿಕೊಳ್ಳುವ, ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ಮಾಡಿರುತ್ತಾರೆ. ಕೆಲವು ಆಟಗಾರರೇ ತಂಡ ಬಿಡಲು ಸಜ್ಜಾಗಿದ್ದಾರೆ. ಕೆಎಲ್ ರಾಹುಲ್ ಕೂಡ ಅಂತಹ ಆಟಗಾರರಲ್ಲಿ ಒಬ್ಬರಾಗುವ ಸೂಚನೆ ಸಿಕ್ಕಿದೆ.

2024ರ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಅರವು ಕೆಎಲ್ ರಾಹುಲ್ ಜೊತೆ ನಡೆದುಕೊಂಡ ರೀತಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು, ಗೊಯೆಂಕಾ ಬಹಿರಂಗವಾಗಿ ಕೆಎಲ್ ರಾಹುಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

kl rahul hints at joining rcb ipl 2025

2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಎಲ್‌ಎಸ್‌ಜಿ ಫ್ರಾಂಚೈಸಿಯನ್ನು ತೊರೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರುವ ಬಗ್ಗೆ ವದಂತಿ ಹಬ್ಬುತ್ತಿದ್ದು, ಕನ್ನಡಿಗ ಮತ್ತೆ ಬೆಂಗಳೂರು ತಂಡಕ್ಕೆ ಬರಲಿ ಎಂದು ಅಭಿಮಾನಿಗಳು ಕೂಡ ಆಶಿಸಿದ್ದಾರೆ. ಇದಕ್ಕೆ ಇದೀಗ ಕೆಎಲ್ ರಾಹುಲ್ ಕೂಡ ಸ್ಪಂದನೆ ಕೊಟ್ಟಿದ್ದು, ಭಾರಿ ವೈರಲ್ ಆಗುತ್ತಿದೆ.

ದೊಡ್ಡ ಮುನ್ಸೂಚನೆ ಕೊಟ್ಟ ಕೆಎಲ್ ರಾಹುಲ್

ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ ಕೆಎಲ್ ರಾಹುಲ್ ಅಭಿಮಾನಿ ಜೊತೆ ಮಾತನಾಡಿದ್ದು, ಆರ್ ಸಿಬಿ ಸೇರುವ ವಿಚಾರದ ಬಗ್ಗೆ ಪ್ರಸ್ತಾಪಿಸಲಾಗಿದೆ. ವಿಡಿಯೋದಲ್ಲಿ ಅಭಿಮಾನಿಗಳು ರಾಹುಲ್ ಆರ್‌ಸಿಬಿಗೆ ಸೇರುವ ಸಾಧ್ಯತೆಯ ಬಗ್ಗೆ ವಿಚಾರಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಕೆಎಲ್ ರಾಹುಲ್ ಅದರ ಬಗ್ಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಅಭಿಮಾನಿಯೊಬ್ಬ "ನಾನು ಕಟ್ಟಾ ಆರ್ ಸಿಬಿ ಅಭಿಮಾನಿ, ಸಾಕಷ್ಟು ವರ್ಷಗಳಿಂದ ಆರ್ ಸಿಬಿ ತಂಡವನ್ನು ಹಿಂಬಾಲಿಸುತ್ತಿದ್ದೇನೆ. ನೀವು ಮೊದಲು ಆರ್ ಸಿಬಿ ತಂಡದಲ್ಲಿ ಆಡುತ್ತಿದ್ದೀರಿ. ಈಗಲೂ ನೀವು ಆರ್ ಸಿಬಿ ಸೇರುವ ಬಗ್ಗೆ ವದಂತಿಗಳು ಹರಡುತ್ತಿವೆ. ನೀವು ಆರ್ ಸಿಬಿಗೆ ಬರಲಿ ಎಂದು ಬಯಸುತ್ತೇನೆ ಮತ್ತು ಪ್ರಾರ್ಥಿಸುತ್ತಿದ್ದೇನೆ. ನೀವು ಆರ್‌ಸಿಬಿಗೆ ಬಂದು ಇಲ್ಲಿ ಮಿಂಚುತ್ತೀರಿ ಎಂದು ಬಯಸುವುದಾಗಿ ಅಭಿಮಾನಿ ಹೇಳಿದರು. ಅದಕ್ಕೆ ಕೆಎಲ್ ರಾಹುಲ್ ಉತ್ತರ ನೀಡಿ ಅದರ ಬಗ್ಗೆ ವಿಶ್ವಾಸವಿದೆ ಎಂದರು.

ಕೆಎಲ್ ರಾಹುಲ್ 2013ರಲ್ಲಿ ಆರ್ ಸಿಬಿ ತಂಡಕ್ಕೆ ಸೇರುವ ಮೂಲಕ ಐಪಿಎಲ್ ಪ್ರಯಾಣ ಆರಂಭಿಸಿದರು. 2014 ಮತ್ತು 2015 ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿದರು. 2016 ರಲ್ಲಿ, ರಾಹುಲ್ ಬೆಂಗಳೂರು ಮೂಲದ ತಂಡಕ್ಕೆ ಮರಳಿದರು, ಆದರೆ ದುರದೃಷ್ಟವಶಾತ್, ಗಾಯದಿಂದಾಗಿ ಅವರು ಸಂಪೂರ್ಣ 2017ರ ಆವೃತ್ತಿಯಲ್ಲಿ ಆಡಲು ಆಗಲಿಲ್ಲ. ಬಳಿಕ 2018 ರಿಂದ 2021 ರವರೆಗೆ ಪಂಜಾಬ್‌ ಕಿಂಗ್ಸ್ ತಂಡಕ್ಕಾಗಿ ಆಡಿದರು. 2022 ರಿಂದ 2024ರವರೆಗೆ ಎಲ್‌ಎಸ್‌ಜಿ ತಂಡಕ್ಕೆ ನಾಯಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+