KL Rahul: ನಿವೃತ್ತಿ ಬಗ್ಗೆ ಕನ್ನಡಿಗ ಕೆಎಲ್ ರಾಹುಲ್ ಹೇಳಿದ್ದೇನು?

ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೊಂದಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು, ಬಳಿಕ ಅದೊಂದು ಸುಳ್ಳು ಸುದ್ದಿ ಎನ್ನುವುದು ತಿಳಿದು ಬಂದಿತು. 2024ರ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ನಾಯಕತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಪ್ರದರ್ಶನ ನೀಡದ ಹಿನ್ನಲೆಯಲ್ಲಿ ಅವರನ್ನು ಫ್ರಾಂಚೈಸಿ ಕೈಬಿಡಲಿದೆ ಎನ್ನುವ ಸುದ್ದಿ ಕೂಡ ಇದೆ. ಇದೆಲ್ಲದರ ನಡುವೆ ಕೆಎಲ್ ರಾಹುಲ್ ವೃತ್ತಿಜೀವನ, ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

ತಾವು ಈಗಾಗಲೇ ನಿವೃತ್ತಿ ಬಗ್ಗೆ ಯೋಚನೆ ಮಾಡಲು ಆರಂಭಿಸಿರುವುದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿಖಿಲ್ ಕಾಮತ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಕೃತಿ ಸನೋನ್ ಮತ್ತು ಬಾದ್‌ಶಾ ಅವರ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಮ್ಮ ವೃತ್ತಿ ಜೀವನ, ನಿವೃತ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

KL Rahul Discusses Career Longevity and Retirement Thoughts

"ಅಭದ್ರತೆ ಇಲ್ಲ, ಆದರೆ ಎಲ್ಲವೂ ಕೊನೆಗೊಳ್ಳುತ್ತದೆ ಎನ್ನುವ ಭಾವನೆ ಇದೆ. ನನ್ನ ವಿಚಾರದಲ್ಲಿ ಅದು ಬೇಗನೆ ಕೊನೆಯಾಗಬಹುದು. ಸಾಕಷ್ಟು ಫಿಟ್ ಆಗಿದ್ದರೆ ಮಾತ್ರ 40 ವರ್ಷದವರೆಗೂ ಆಡಬಹುದು. ಆದರೆ ಯಾರೋ ಒಂದಿಬ್ಬರು ಮಾತ್ರ ಹಾಗೆ ಆಡಲು ಸಾಧ್ಯ, ಎಂಎಸ್ ಧೋನಿ 43 ವರ್ಷವಾದರೂ ಆಡಬಹುದು, ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ವರ್ಷ ಆಡಲು ಆಗಲ್ಲ, ವೃತ್ತಿ ಜೀವನ ಚಿಕ್ಕದು ಎನ್ನುವ ಭಯ ಮತ್ತು ಅರಿವು ಇದೆ ಎಂದು ಹೇಳಿದ್ದಾರೆ.

"ನನಗೆ 30 ವರ್ಷ ಆದಾಗ ಆತಂಕವಾಗಿತ್ತು, ನಾನು ದಾರಿಯ ಕೊನೆಯನ್ನು ನೋಡುತ್ತಿದ್ದೆ. 29 ವರ್ಷವಿದ್ದಾಗ ಇದನ್ನೆಲ್ಲಾ ಯೋಚನೆ ಮಾಡಿರಲಿಲ್ಲ. ನನ್ನ 30 ನೇ ಹುಟ್ಟುಹಬ್ಬದಂದು ಕೆಲವು ವಿಚಿತ್ರವಾದ ಸಂಗತಿಗಳು ಸಂಭವಿಸಿದವು. ಇನ್ನೂ 10 ವರ್ಷ ಕ್ರಿಕೆಟ್ ಆಡುತ್ತೇನೆ ಎನ್ನುವ ವಿಶ್ವಾಸ ಇತ್ತು, ಆದರೆ 30 ತುಂಬಿದ ಬಳಿಕ ಒಂದು ಹಂತದಲ್ಲಿ ಇದೆಲ್ಲಾ ಕೊನೆಯಾಗುತ್ತದೆ ಎಂದು ಅನಿಸಲು ಶುರುವಾಗಿದೆ ಎಂದು ಹೇಳಿದ್ದರು.

ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಆದಾಯಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂದು ನಂಬಿರುವ ಕಾರಣ, ಈಗಲೇ ಬೇರೆ ವ್ಯವಹಾರ ಮತ್ತು ಹೂಡಿಕೆಗಳ ಬಗ್ಗೆ ಯೋಚಿಸಲು ಆರಂಭಿಸಿದ್ದೇನೆ ಎಂದು ಹೇಳಿದ್ದಾರೆ.

"ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕವೂ ನಾನು ಉತ್ತಮ ಜೀವನ ನಡೆಸಬೇಕು ಎಂದರೆ ಬೇರೆ ಆದಾಯದ ಮೂಲಗಳನ್ನು ಸೃಷ್ಟಿಸಬೇಕು. ನಿವೃತ್ತಿಯಾದ ಬಳಿಕ ನನ್ನ ಗಳಿಕೆ ಕಡಿಮೆಯಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಇದು ನನಗೆ ಅನುಭವಕ್ಕೆ ಬಂದಿದ್ದು, ಹೂಡಿಕೆ ಬಗ್ಗೆ ಯೋಚಿಸುವಂತೆ ಮಾಡಿತು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+