ಐಪಿಎಲ್‌ ಇತಿಹಾಸದಲ್ಲೇ ಹೊಸ ದಾಖಲೆ.. ಈ ಸಾಧನೆ ಮಾಡಿರೋದು ಕನ್ನಡಿಗ ಕೆಎಲ್‌ ರಾಹುಲ್‌ ಮಾತ್ರ

KL Rahul: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 09) ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಭರ್ಜರಿ ಜಯ ದಾಖಲಿಸಿತು. ಇದೇ ಪಂದ್ಯದಲ್ಲಿ ಡಿಸಿ ಪರ ಆಡುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ಐಪಿಎಲ್ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಮೂರು ಬೇರೆ ಬೇರೆ ತಂಡಗಳ ಪರ ತಲಾ 1,000 ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಟಾಸ್‌ ಗೆದ್ದ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 142 ರನ್‌ಗಳನ್ನು ಕಲೆಹಾಕಿ 143 ರನ್‌ಗಳ ಸಾಧಾರಣ ಗುರಿ ನೀಡಿತು. ಈ ಗುರಿಯನ್ನು ಕೊಲ್ಕತ್ತಾ ಕೇವಲ 14.2 ಓವರ್‌ಗಳಲ್ಲಿ ತಲುಪಿ ಭರ್ಜರಿ ಜಯ ಸಾಧಿಸಿತು.

KL Rahul Creates Indian Premier League History Becomes First Batter to Score 1 000 Runs for 3 Teams

ವಿವಿಧ ತಂಡಗಳ ಪರ ರಾಹುಲ್‌ ಗಳಿಸಿದ ರನ್‌ಗಳು

* ಪಂಜಾಬ್ ಕಿಂಗ್ಸ್: 2,548 ರನ್
* ಲಕ್ನೋ ಸೂಪರ್ ಜೈಂಟ್ಸ್: 1,410 ರನ್
* ಡೆಲ್ಲಿ ಕ್ಯಾಪಿಟಲ್ಸ್: 1,002 ರನ್

ಹೊಸ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್

ಕೇವಲ ಮೂರು ತಂಡಗಳ ಪರ 1,000 ರನ್ ಗಳಿಸುವುದು ಮಾತ್ರವಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ದಾಖಲೆಯನ್ನೂ ರಾಹುಲ್ ಮುರಿದ್ದಾರೆ. ಅವರು ಕೇವಲ 23 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಜೆಪಿ ಡುಮಿನಿ ಮತ್ತು ರಿಷಬ್ ಪಂತ್ (35 ಇನ್ನಿಂಗ್ಸ್) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

1,000 ರನ್ ಗಳಿಸಿ ದಾಖಲೆ ಮಾಡಿದ ಕನ್ನಡಿಗ

ಕೊಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ಈ ಪಂದ್ಯದಲ್ಲಿ ರಾಹುಲ್ 23 ರನ್ ಗಳಿಸಿ ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಕ್ಯಾಮರೂನ್ ಗ್ರೀನ್‌ಗೆ ಕ್ಯಾಚ್ ನೀಡಿ ವಿಕೆಟ್‌ ಒಪ್ಪಿಸಿದರು. ಆದರೂ ಕೆಎಲ್‌ ರಾಹುಲ್‌ ಈ ರನ್‌ಗಳೊಂದಿಗೆ ಐಪಿಎಲ್‌ನಲ್ಲಿ ಡೆಲ್ಲಿ ಪರ 1,000 ರನ್ ಗಳಿಸಿ ದಾಖಲೆ ಮಾಡಿದರು. ಈ ಸಾಧನೆಯು ಐಪಿಎಲ್‌ನಲ್ಲಿ ರಾಹುಲ್ ಅವರ ಉತ್ತಮ ಪ್ರದರ್ಶನ ಮತ್ತು ವಿವಿಧ ತಂಡಗಳ ಪರ ಅವರು ನಿಭಾಯಿಸಿದ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.

ಕೆಎಲ್‌ ರಾಹುಲ್‌ ಮಾಡಿದ ಸಾಧನೆಗಳ ವಿವರ

ಕೆಎಲ್‌ ರಾಹುಲ್ ಅವರು ಐಪಿಎಲ್‌ ಇತಿಹಾಸದಲ್ಲಿನ ಅತ್ಯಂತ ಸ್ಥಿರ ಬ್ಯಾಟರ್‌ಗಳಲ್ಲೊಬ್ಬರು. 2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ರಾಹುಲ್ ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್‌ ಹೈದರಾಬಾದ್, ಪಂಜಾಬ್‌ ಕಿಂಗ್ಸ್‌, ಹಾಗೂ ಲಕ್ನೋ ಸೂಪರ್ ಜೈಂಟ್ಸ್‌ ಪರ ಆಡಿದ್ದಾರೆ. ಇದೀಗ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದಾರೆ. ಆರಂಭಿಕ ಬ್ಯಾಟರ್ ಆಗಿ ಅವರು ಅನೇಕ ಬಾರಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.

ಐಪಿಎಲ್‌ನಲ್ಲಿ ರಾಹುಲ್ ಅತ್ಯಂತ ವೇಗವಾಗಿ 5,000ಕ್ಕೂ ಅಧಿಕ ರನ್ ಪೂರೈಸಿದ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಹಲವು ಸೀಸನ್‌ಗಳಲ್ಲಿ 500ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಸಾಬೀತುಪಡಿಸಿದ್ದಾರೆ. 2020ರ ಸೀಸನ್‌ನಲ್ಲಿ ಅವರು 670 ರನ್ ಗಳಿಸಿ ಆರೆಂಜ್ ಕ್ಯಾಪ್‌ ಗೆದ್ದಿದ್ದರು. ಅದೇ ವರ್ಷ ಮುಂಬೈ ವಿರುದ್ಧ ಅಜೇಯ 132 ರನ್‌ಗಳ ಭರ್ಜರಿ ಇನ್ನಿಂಗ್ಸ್‌ ಆಡಿ ಐಪಿಎಲ್‌ನಲ್ಲಿ ತಮ್ಮ ಗರಿಷ್ಠ ವೈಯಕ್ತಿಕ ಮೊತ್ತವನ್ನು ದಾಖಲಿಸಿದರು.

ವಿಕೆಟ್ ಕೀಪರ್ ಬ್ಯಾಟರ್ ಆಗಿಯೂ ರಾಹುಲ್ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಶಾಂತ ಸ್ವಭಾವ, ಕ್ಲಾಸಿಕ್ ಶಾಟ್‌ಗಳು ಹಾಗೂ ಒತ್ತಡದ ಸಂದರ್ಭಗಳಲ್ಲಿ ಜವಾಬ್ದಾರಿಯುತ ಆಟದಿಂದ ಅವರು ಅಭಿಮಾನಿಗಳ ಮನಸು ಗೆದ್ದಿದ್ದಾರೆ. ನಾಯಕತ್ವದಲ್ಲಿಯೂ ಅವರು ಉತ್ತಮ ಸಾಮರ್ಥ್ಯ ತೋರಿದ್ದು, ಹಲವು ಸೀಸನ್‌ಗಳಲ್ಲಿ ತಂಡವನ್ನು ಪ್ಲೇಆಫ್ ಹಂತದವರೆಗೆ ಮುನ್ನಡೆಸಿದ ಉದಾಹರಣೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+