KL Rahul Birthday:ಆರ್‌ಸಿಬಿ-ಡಿಸಿ ಪಂದ್ಯಕ್ಕೂ ಮುನ್ನ ಪತಿ ಕೆಎಲ್ ರಾಹುಲ್ ಬಗ್ಗೆ ಪತ್ನಿ ಅಥಿಯಾ ಶೆಟ್ಟಿ ವಿಶೇಷ ಪೋಸ್ಟ್

KL Rahul Birthday: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್‌ 18) ನಡೆಯುವ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಇವತ್ತೇ ಡಿಸಿಯ ವಿಕೆಟ್‌ ಕೀಪರ್‌ ಹಾಗೂ ಸ್ಟಾರ್ ಬ್ಯಾಟರ್‌ ಕೆಎಲ್ ರಾಹುಲ್ ಅವರ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಅವರ ಪತ್ನಿ ಅಥಿಯಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಇದು ಭಾರಿ ವೈರಲ್‌ ಆಗಿದೆ.

ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಪತಿ ಕೆ.ಎಲ್‌.ರಾಹುಲ್‌ ಜೊತೆಗಿನ ವಿಶೇಷ ಫೋಟೋಗಳನ್ನು ಹಂಚಿಕೊಂಡಿರುವ ಅಥಿಯಾ, ತಮ್ಮ ಪ್ರೀತಿಯ ಪಯಣದ ಸುಂದರ ಕ್ಷಣಗಳನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. ಅಥಿಯಾ ಅವರು ರಾಹುಲ್ ಅವರು "ನನ್ನ ಪ್ರಿಯ ವ್ಯಕ್ತಿ", "ನಿನ್ನನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪತಿಯ ಹುಟ್ಟುಹಬ್ಬಕ್ಕೆ ವಿಶೇಷ ಶುಭಾಶಯ ಕೋರಿದ್ದಾರೆ.

KL Rahul Birthday Athiya Shetty s Emotional Post Goes Viral Ahead of RCB vs DC IPL 2026 Clash

ವಿಶೇಷ ಫೋಟೋ ಹಂಚಿಕೊಂಡ ಅಥಿಯಾ ಶೆಟ್ಟಿ

ಈ ಪೋಸ್ಟ್‌ನಲ್ಲಿ ದಂಪತಿಗಳ ಮದುವೆಯ ಸುಂದರ ಫೋಟೋಗಳು, ರಜಾ ದಿನಗಳ ಮೋಜಿನ ಕ್ಷಣಗಳು ಮತ್ತು ಇಬ್ಬರೂ ಒಟ್ಟಿಗೆ ಹಾಕಿಸಿಕೊಂಡ ಮ್ಯಾಚಿಂಗ್ ಟ್ಯಾಟೂಗಳ ಚಿತ್ರಗಳಿವೆ. ಅಥಿಯಾ ಹಂಚಿಕೊಂಡಿರುವ ಚಿತ್ರಗಳಲ್ಲಿ ರಾಹುಲ್ ಅವರು ತಮ್ಮ ಮಗಳು ಇವಾರಾ ಪಾದಗಳನ್ನು ಹಿಡಿದಿರುವ ಹೃದಯಸ್ಪರ್ಶಿ ಫೋಟೋ ಕೂಡ ಇವೆ. ಅಂದಹಾಗೆ, ಈ ದಂಪತಿ ಕಳೆದ ವರ್ಷ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದರು.

ಹಟ್ಟುಹಬ್ಬದ ಸಂಭ್ರಮದಲ್ಲಿ ಕೆಎಲ್‌ ರಾಹುಲ್

ಕೆಎಲ್ ರಾಹುಲ್ ಅವರು ಇಂದು ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ವಿಶೇಷವೆಂದರೆ ಇಂದು ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ತಮ್ಮ ತವರು ನೆಲವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇನ್ನೂ ಅಥಿಯಾ ಅವರ ಈ ಪೋಸ್ಟ್‌ಗೆ ಕರಣ್ ಜೋಹರ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಮತ್ತು ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಹರಿಸಿದ್ದಾರೆ.

ಪತಿ ರಾಹುಲ್‌ಗೆ ಪತ್ನಿ ಅಥಿಯಾ ವಿಶೇಷ ಸಂದೇಶ

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತಿ ರಾಹುಲ್ ಜೊತೆಗಿನ ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಅಥಿಯಾ ಶೆಟ್ಟಿ ಅವರು, "ನನ್ನ ಪ್ರಿಯ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ," ಎಂದು ಬರೆದುಕೊಳ್ಳುವುದರ ಜೊತೆಗೆ ಹಾರ್ಟ್‌ ಸಿಂಬಲ್‌ ಇಟ್ಟು ಗಮನ ಸೆಳೆದಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ.

ಒಂದು ಚಿತ್ರದಲ್ಲಿ ಅಥಿಯಾ ಶೆಟ್ಟಿ ಅವರು ತಮ್ಮ ಮದುವೆಯ ಉಡುಪಿನಲ್ಲಿ, ಕೈಯಲ್ಲಿನ ಮೆಹೆಂದಿ ಮತ್ತು ಆಭರಣಗಳನ್ನು ಪ್ರದರ್ಶಿಸುತ್ತಾ ಕೆಎಲ್ ರಾಹುಲ್ ಅವರನ್ನು ಅಪ್ಪಿಕೊಂಡಿದ್ದಾರೆ. ಅವರ ಮುಖದಲ್ಲಿನ ನಗು ಆ ಕ್ಷಣದ ಖುಷಿಯನ್ನು ಎತ್ತಿ ತೋರಿಸುತ್ತಿದೆ.

ಹಳದಿ ಶಾಸ್ತ್ರದ ಸಮಯದಲ್ಲಿ ರಾಹುಲ್ ಅವರು ಅಥಿಯಾಗೆ ಅರಿಶಿಣ ಹಚ್ಚುತ್ತಿರುವಾಗ, ಅಥಿಯಾ ನಾಚಿಕೆಯಿಂದ ನಗುತ್ತಿರುವ ಚಿತ್ರವು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಲ್ಲದೆ, ಈ ಪೋಸ್ಟ್‌ನಲ್ಲಿ ಅವರ ವೈಯಕ್ತಿಕ ಜೀವನದ ತುಣುಕುಗಳೂ ಇವೆ. ವಿಶೇಷವಾಗಿ ಇಬ್ಬರೂ ಒಟ್ಟಿಗೆ ಒಂದೇ ರೀತಿಯ 'ಹಾರ್ಟ್‌ ಸಿಂಬಲ್‌ ಟ್ಯಾಟೂ' ಹಾಕಿಸಿಕೊಂಡಿರುವುದು ಅವರ ಗಾಢವಾದ ಪ್ರೀತಿಗೆ ಸಾಕ್ಷಿಯಾಗಿದೆ.

ಇವು ಕೇವಲ ಫೋಟೋಗಳಲ್ಲ, ಬದಲಾಗಿ ಅವರ ಪ್ರೀತಿಯ ಪಯಣದ ಸುಂದರ ನೆನಪುಗಳಾಗಿವೆ. ಇಂದಿನ ಬಿಡುವಿಲ್ಲದ ಐಪಿಎಲ್ ಪಂದ್ಯದ ನಡುವೆಯೂ ರಾಹುಲ್ ಅವರಿಗೆ ಈ ಪೋಸ್ಟ್ ವಿಶೇಷವಾಗಿದೆ ಎಂದು ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+