KKR Vs RR: ಬಟ್ಲರ್ ಅಮೋಘ ಶತಕ; ರಾಜಸ್ಥಾನಕ್ಕೆ 2 ವಿಕೆಟ್‌ಗಳ ರೋಚಕ ಗೆಲುವು

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

ಏಕಾಂಗಿಯಾಗಿ ಹೋರಾಡಿದ ಜೋಸ್ ಬಟ್ಲರ್ ಅಮೋಘ ಶತಕ ಸಿಡಿಸುವ ಮೂಲಕ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಕೊನೆಯ ಎಸೆತದವರೆಗೂ ನೋಡುಗರನ್ನು ಸೀಟಿನಂಚಿನಲ್ಲಿ ಕೂರಿಸಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆದ್ದು ಬೀಗಿತು.

KKR Vs RR Jos Buttler s Century Leads Rajasthan Royals to Victory Over Kolkata Knight Riders

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸುನಿಲ್ ನರೇನ್ ಅವರ ಅಮೋಘ ಶತಕದ ನೆರವಿನಿಂದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 223 ರನ್ ಗಳಿಸಿತು. ಸುನಿಲ್ ನರೇನ್ 56 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್ ನೆರವಿನಿಂದ 109 ರನ್ ಗಳಿಸಿದರು. ಇದು ಅವರ ಮೊದಲ ಶತಕವಾಗಿದೆ. ಆಂಗ್ಕ್ರಿಶ್ ರಘುವಂಶಿ 30 ರನ್ ಗಳಿಸಿದರೆ, ರಿಂಕು ಸಿಂಗ್ 9 ಎಸೆತಗಳಲ್ಲಿ 20 ರನ್ ಗಳಿಸಿದರು.

ಹೀರೋ ಆದ ಜೋಸ್ ಬಟ್ಲರ್

224 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಘಾತ ಸಿಕ್ಕಿತು. ಯಶಸ್ವಿ ಜೈಸ್ವಾಲ್ 9 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು. ಸಂಜು ಸ್ಯಾಮ್ಸನ್ 12 ರನ್ ಗಳಿಸಿ ಔಟಾದರು. ರಿಯಾನ್ ಪರಾಗ್ 14 ಎಸೆತಗಳಲ್ಲಿ 34 ರನ್ ಗಳಿಸಿದರು.

ಧ್ರುವ್ ಜುರೆಲ್ 2 ರನ್, ರವಿಚಂದ್ರನ್ ಅಶ್ವಿನ್ 11 ಎಸೆತಗಳಲ್ಲಿ 8 ರನ್ ಗಳಿಸಿದರು. ಶಿಮ್ರಾನ್ ಹೆಟ್ಮೆಯರ್ ರನ್ ಗಳಿಸದೇ ಔಟಾದರು. ರೋವ್ಮನ್ ಪೋವೆಲ್ 13 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರು.

ಇನ್ನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್ ಕೊನೆಯ ಎಸೆತದವರೆಗೂ ಏಕಾಂಗಿಯಾಗಿ ಹೋರಾಟ ನೀಡುವ ಮೂಲಕ ಕೆಕೆಆರ್ ಗೆಲ್ಲುವ ಪಂದ್ಯವನ್ನು ಕಸಿದುಕೊಂಡರು. 18 ಎಸೆತಗಳಲ್ಲಿ 16 ರನ್ ಬೇಕಿದ್ದಾಗ ಅಬ್ಬರಿಸಲು ಶುರು ಮಾಡಿದ ಬಟ್ಲರ್ ಬೌಂಡರಿ, ಸಿಕ್ಸರ್ ಮೂಲಕ ಕೆಕೆಆರ್ ಬೌಲರ್ ಗಳನ್ನು ಕಂಗೆಡಿಸಿದರು.

60 ಎಸೆತಗಳಲ್ಲಿ 9 ಬೌಂಡರಿ 6 ಸಿಕ್ಸರ್ ಸಹಿತ ಅಜೇಯ 107 ರನ್ ಗಳಿಸಿದ ಅವರು, ಐಪಿಎಲ್‌ನ ತಮ್ಮ 7ನೇ ಶತಕ ಗಳಿಸಿದ್ದಲ್ಲದೆ, ತಂಡಕ್ಕೆ ಗೆಲುವು ತಂದುಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+