Karun Nair: ವಿಶ್ವ ದಾಖಲೆ ಬರೆದ ಕರುಣ್‌ ನಾಯರ್: ಏನದು?

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೊದಲ ಟೆಸ್ಟ್‌ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ಕರುಣ್‌ ನಾಯರ್‌ ಸ್ಥಾನ ಪಡೆದಿದ್ದಾರೆ. ಈ ಮೂಲಕ ಕರುಣ್‌ ನಾಯರ್‌ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಬೆನ್‌ ಸ್ಟೋಕ್ಸ್‌ ಅವರ ಎಸೆತವನ್ನು ಬಾರಿಸುವಲ್ಲಿ ವಿಫಲರಾಗಿ ಔಟ್ ಆದರು.

ನಾಯಕ ಶುಭಮನ್‌ ಗಿಲ್ ಔಟ್ ಆಗುತ್ತಿದ್ದಂತೆ ಮೈದಾನಕ್ಕೆ ಇಳಿದ ಕರ್ನಾಟಕದ ಸ್ಟಾರ್ ಆಟಗಾರ ಕರುಣ್ ನಾಯರ್‌ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಇವರು ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ರನ್‌ ಮಹಲ್‌ ಕಟ್ಟಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 8 ವರ್ಷದ ಬಳಿಕ ಕಂ ಬ್ಯಾಕ್ ಮಾಡಿದ್ದರು. ಆದರೆ ಬೆನ್‌ ಸ್ಟೋಕ್ಸ್ ತೋಡಿದ್ದ ಖೆಡ್ಡಾಗೆ ಬಲಿಯಾದರು. ಬೆನ್‌ ಸ್ಟೋಕ್ಸ್ ಎಸೆದ ಔಟ್ ಸೈಡ್‌ ಆಫ್‌ ಸ್ಟಂಪರ್‌ ಇದ್ದ ಪುಲರ್‌ ಲೆಂತ್ ಎಸೆತವನ್ನು ಎಕ್ಸ್‌ಟ್ರಾ ಕವರ್ ಮೇಲೆ ಬಾರಿಸಲು ಮುಂದಾಗಿ ಓಲಿ ಪೋಪ್‌ ಹಿಡಿದ ಅದ್ಭುತ್ ಕ್ಯಾಚ್‌ಗೆ ಬಲಿಯಾದರು. ಆದರೆ ಕರುಣ್‌ ನಾಯರ್‌ ಈ ಪಂದ್ಯದಲ್ಲಿ ತಂಡಕ್ಕೆ ಆಯ್ಕೆ ಆಗಿ ವಿಶ್ವ ದಾಖಲೆ ಬರೆದಿದ್ದರು.

Karun Nair Sets World Record for Most Missed International Matches on Return

ಕರುಣ್‌ ನಾಯರ್‌ 8 ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದರು. ಆದರೆ ಆ ಕನಸು ಸಾಕಾರವಾಗಿರಲಿಲ್ಲ. ಆದರೆ ಕಳೆದ ವರ್ಷ ಕರುಣ್‌ ದೇಶೀಯ ಟೂರ್ನಿಯಲ್ಲಿ ವಿದರ್ಭ ಪರ ವಿಜಯ್‌ ಹಜಾರೆ, ರಣಜಿ ಟ್ರೋಫಿಗಳಲ್ಲಿ ಆರ್ಭಟ ನಡೆಸಿದರು. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿ ಇವರನ್ನು ತಂಡದಲ್ಲಿ ಸೇರಿಸಿಕೊಳ್ಳುವಂತೆ ಮಾಡಿದರು. ಕರುಣ್‌ ನಾಯರ್‌ ಭಾರತದ ಪರ ತಮ್ಮ ಕೊನೆಯ ಪಂದ್ಯವನ್ನು 2017ರಲ್ಲಿ ಆಡಿದ್ದರು. ಈಗ 8 ವರ್ಷಗಳ ಬಳಿಕ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದಾರೆ.

ಕರುಣ್‌ ನಾಯರ್ ನಿರ್ಮಿಸಿದ ದಾಖಲೆ ಏನು?

ಈ ಮೂಲಕ ಕರುಣ್‌ ನಾಯರ್‌ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಂಡ ಆಟಗಾರ ಎಂಬ ದಾಖಲೆ ಬರೆದರು. ಇವರು ಒಟ್ಟು 402 ಅಂತಾರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. 400 ಕ್ಕೂ ಹೆಚ್ಚು ಪಂದ್ಯಗಳನ್ನು ತಪ್ಪಿಸಿಕೊಂಡ ಕ್ರಿಕೆಟ್ ಜಗತ್ತಿನ ಏಕೈಕ ಆಟಗಾರ ಕರುಣ್‌. ಈ ಮೊದಲು ಈ ದಾಖಲೆ ವೆಸ್ಟ್‌ ಇಂಡೀಸ್‌ನ ರಾಯದ್ ಅಮೃತ್ ಹೆಸರಿನಲ್ಲಿತ್ತು. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 396 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

Karun Nair Sets World Record for Most Missed International Matches on Return

ದೇಶೀಯ ಟೂರ್ನಿಯಲ್ಲಿ ಕರ್ನಾಟಕದ ಪರ ಅಮೋಘ ಪ್ರದರ್ಶನ ನೀಡಿದ್ದರಿಂದ ಕರುಣ್‌ ನಾಯರ್‌ 2026ರಲ್ಲಿ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಕರುಣ್‌ ಭಾರತದ ಪರ 6 ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು. ಅಲ್ಲದೆ ಒಮ್ಮೆ ಇಂಗ್ಲೆಂಡ್‌ ವಿರುದ್ಧ ತ್ರಿಶತಕ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇವರು 374 ರನ್‌ ಸಿಡಿಸಿ ಅಬ್ಬರಿಸಿದ್ದಾರೆ. ಇವರು ಭಾರತದ ಪರ 2 ಏಕದಿನ ಪಂದ್ಯವನ್ನು ಆಡಿದ್ದು ಒಟ್ಟು 46 ರನ್‌ ಸಿಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+