ಭಾರತ & ದಕ್ಷಿಣ ಆಫ್ರಿಕಾ ಮ್ಯಾಚ್ ನೋಡಿದ ಸಿಎಂ ಸಿದ್ದರಾಮಯ್ಯ!
ಭಾರತ & ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್ ಫೈನಲ್ ಮ್ಯಾಚ್ ಇನ್ನೇನು ಅಂತಿಮ ಹಂತಕ್ಕೆ ಬಂದಿದ್ದು, ಯಾರು ಗೆಲ್ಲುವರು? ಅನ್ನೋ ಕೋಟಿ ರೂಪಾಯಿ ಪ್ರಶ್ನೆಗೆ ಇನ್ನೇನು ಕೆಲವೇ ಕ್ಷಣದಲ್ಲಿ ಉತ್ತರ ಸಿಗಲಿದೆ. ಹೀಗಾಗಿ ಕೋಟಿ ಕೋಟಿ ಭಾರತೀಯರು ಉಸಿರನ್ನ ಬಿಗಿ ಹಿಡಿದು ಮ್ಯಾಚ್ ನೋಡುತ್ತಿದ್ದಾರೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಕೂಡ ಈ ಸಮಯದಲ್ಲಿ ತಮ್ಮ ಕ್ರಿಕೆಟ್ ಪ್ರೀತಿ ತೋರಿಸಿದ್ದಾರೆ.
ಭಾರತ & ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್ ಫೈನಲ್ ಮ್ಯಾಚ್ ನಡೆಯುತ್ತಿದ್ದು, ಈ ಪಂದ್ಯವನ್ನ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ವೀಕ್ಷಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕ್ರಿಕೆಟ್ ಅಂದ್ರೆ ಪ್ರೀತಿ, ಅದರಲ್ಲೂ ಐಪಿಎಲ್ ಟೂರ್ನಿ ನಡೆಯುವ ಸಮಯದಲ್ಲಿ ಬೆಂಗಳೂರು ತಂಡ ಆರ್‌ಸಿಬಿ ಪರವಾಗಿ ಸಪೋರ್ಟ್ ಮಾಡಲು ಖುದ್ದು ಸಿಎಂ ಕ್ರೀಡಾಂಗಣಕ್ಕೆ ಬರುತ್ತಾರೆ. ಹಾಗಾದರೆ ಇದೀಗ ಸಿಎಂ ಸಿದ್ದು ಭಾರತ & ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಫೈನಲ್ ಮ್ಯಾಚ್ ನೋಡಿದ್ದು ಎಲ್ಲಿ? ಮುಂದೆ ಓದಿ.

ಮ್ಯಾಚ್ ನೋಡಿದ ಸಿಎಂ ಸಿದ್ದರಾಮಯ್ಯ
ಕರ್ನಾಟಕದ ಸಮಸ್ಯೆಗಳನ್ನ ಪ್ರಧಾನಿ ಮೋದಿ ಅವರಿಗೆ ತಲುಪಿಸಲು ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದಾರೆ. ಹೀಗೆ ರಾಷ್ಟ್ರ ರಾಜಧಾನಿಗೆ ತೆರಳಿ ಪ್ರಧಾನಿ ಮೋದಿ ಅವರ ಜೊತೆಗೆ ಮಾತುಕತೆ ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಅವರು ಕ್ರಿಕೆಟ್ ಮ್ಯಾಚ್ ನೋಡಿದ್ದಾರೆ. ಅಲ್ಲದೆ ಮ್ಯಾಚ್ ನೋಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಶೇರ್ ಮಾಡಿಕೊಂಡಿದ್ದಾರೆ.
ದೆಹಲಿಯಲ್ಲಿ ವಿಮಾನ ಹತ್ತುವ ಸಮಯದಲ್ಲಿ ಟ್ಯಾಬ್ ಮೂಲಕ ಮ್ಯಾಚ್ ನೋಡಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಕುರಿತು ಪೋಸ್ಟ್ ಹಾಕಿದ್ದು 'ದೆಹಲಿ ಪ್ರವಾಸದಿಂದ ನಾಡಿಗೆ ವಾಪಾಸಾಗುವ ವೇಳೆ ವಿಮಾನ ಏರುವ ಮೊದಲು ಸಿಕ್ಕ ಅಲ್ಪ ಸಮಯದಲ್ಲೇ ಭಾರತ - ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪೈನಲ್ ಪಂದ್ಯ ವೀಕ್ಷಿಸಿದೆ' ಎಂದು ಈ ಬಗ್ಗೆ ಬರೆದುಕೊಂಡಿದ್ದಾರೆ.












Click it and Unblock the Notifications