RCB: ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮಕ್ಕೆ ಮುನ್ನ ಎಂಟ್ರಿಕೊಟ್ಟ ಮಾರಕ ಬೌಲರ್!

ಐಪಿಎಲ್ 2025ರ ಆವೃತ್ತಿಯ ಆರಂಭಕ್ಕೆ ಇನ್ನು 5 ದಿನ ಮಾತ್ರ ಉಳಿದಿದೆ. ಶನಿವಾರದಿಂದ ಐಪಿಎಲ್ ಹಬ್ಬ ಆರಂಭವಾಗಲಿದ್ದು ಎರಡು ತಿಂಗಳು ಭರ್ಜರಿ ಮನರಂಜನೆ ಸಿಗಲಿದೆ. ಮಾರ್ಚ್ 22ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವು ಆರ್ ಸಿಬಿ ತಂಡವನ್ನು ಎದುರಿಸಲಿದೆ. ಸೋಮವಾರ ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯುತ್ತಿದ್ದು ಇದಕ್ಕೂ ಮುನ್ನ ಮಾರಕ ವೇಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ತಂಡದ ಪ್ರಮುಖ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಐಪಿಎಲ್‌ನಲ್ಲಿ ಆಡುತ್ತಾರಾ ಇಲ್ಲವಾ ಎನ್ನುವ ಅನುಮಾನವಿತ್ತು. ತಂಡದ ಬೌಲಿಂಗ್‌ ಶಕ್ತಿಯಾಗಿದ್ದು ಅವರು ಅಲಭ್ಯವಾದರೆ ಮುಂದೇನು ಎಂದು ಅಭಿಮಾನಿಗಳಿಗೆ ಚಿಂತೆ ಕಾಡುತ್ತಿತ್ತು. ಆದರೆ ಐಪಿಎಲ್‌ ಆರಂಭಕ್ಕೆ ಮುನ್ನ ಅವರು ತಂಡವನ್ನು ಸೇರಿಕೊಂಡಿದ್ದು ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.

josh hazlewood join rcb ahead of ipl 2025 strengthens bowling lineup

ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಕಳೆದ 3-4 ತಿಂಗಳುಗಳಿಂದ ಸ್ನಾಯುಗಳ ಗಾಯದಿಂದಾಗಿ ಕ್ರಿಕೆಟ್‌ನಿಂದ ಹೊರಗುಳಿದಿದ್ದರು ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೂಡ ಅವರು ಆಡಿರಲಿಲ್ಲ. ಆದರೆ ಈಗ ಫಿಟ್ ಆಗಿದ್ದು ತಂಡವನ್ನು ಸೇರಿಕೊಂಡಿದ್ದು ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುವ ಸಾಧ್ಯತೆ ಇದೆ.

ಬೌಲಿಂಗ್ ಬಲ ಹೆಚ್ಚಿಸಿದ ವೇಗಿ

ಜೋಶ್ ಹೇಜಲ್‌ವುಡ್‌ 2022 ಮತ್ತು 2023ರಲ್ಲಿ ಆರ್ ಸಿಬಿ ತಂಡದಲ್ಲಿ ಆಡಿದ್ದರು. 2022ರಲ್ಲಿ ಅವರು 18 ವಿಕೆಟ್ ಪಡೆದಿದ್ದರೆ, 2023ರಲ್ಲಿ 1 ವಿಕೆಟ್ ಪಡೆದಿದ್ದರು, ಗಾಯದ ಸಮಸ್ಯೆಯಿಂದ ಅವರು ಪಂದ್ಯಾವಳಿಯನ್ನು ತಪ್ಪಿಸಿಕೊಂಡರು. 2024ರಲ್ಲಿ ಅವರು ಆಡಲೇ ಇಲ್ಲ, ಆದರೆ 2025ರ ಮೆಗಾ ಹರಾಜಿನಲ್ಲಿ ಬರೋಬ್ಬರಿ 12.5 ಕೋಟಿ ರೂಪಾಯಿ ನೀಡಿ ಅವರನ್ನು ಮತ್ತೆ ಆರ್ ಸಿಬಿ ಖರೀದಿ ಮಾಡಿತು. ಭುವನೇಶ್ವರ್ ಕುಮಾರ್, ಯಶ್ ದಯಾಳ್, ಲುಂಗಿ ಎಂಗಿಡಿ, ನುವಾನ್ ತುಷಾರ, ರಸಿಕ್ ದಾರ್ ಅವರಂತಹ ವೇಗಿಗಳನ್ನು ಹೊಂದಿದ್ದು ಈ ಬಾರಿ ಬೌಲಿಂಗ್ ವಿಭಾಗ ಬಲಿಷ್ಠವಾಗಿ ಕಾಣುತ್ತಿದೆ.

ಜೋಶ್ ಹೇಜಲ್‌ವುಡ್ 107 ಟಿ 20 ಪಂದ್ಯಗಳನ್ನು ಆಡಿದ್ದು 36 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಎಕಾನಮಿ ರೇಟ್ ಕೇವಲ 7.51 ಆಗಿರುವುದ ಗಮನಾರ್ಹ. ಐಪಿಎಲ್‌ನ 27 ಪಂದ್ಯಗಳಲ್ಲಿ, ಅವರು 8.05 ಎಕಾನಮಿಯಲ್ಲಿ 35 ವಿಕೆಟ್‌ ಪಡೆದಿದ್ದಾರೆ.

ಗಾಯಗೊಂಡಿದ್ದಾರೆ ಎನ್ನಲಾಗಿದ್ದ ಜೇಕಬ್ ಬೆಥೆಲ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಆರ್ ಸಿಬಿ ಪೂರ್ಣ ತಂಡ ಇಂದು ಬೆಂಗಳೂರಿನಲ್ಲಿ ಅಭ್ಯಾಸ ನಡೆಸಿದೆ. ಅನ್‌ಬಾಕ್ಸ್ ಕಾರ್ಯಕ್ರಮಕ್ಕೆ ಮುನ್ನ ತಂಡವು ಕಠಿಣ ಅಭ್ಯಾಸದಲ್ಲಿ ತೊಡಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+