ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್ ಶೇರು ಖರೀದಿ ಅಂತಿಮ ಹಂತಕ್ಕೆ.. ಅಮೆಜಾನ್ ಸಂಸ್ಥಾಪಕರ ಹೆಸರು ಮುನ್ನೆಲೆಗೆ

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಪ್ರಸಿದ್ಧ ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್‌ಬಾಲ್ ಕ್ಲಬ್ ಆದ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್‌ನ ಶೇರುಗಳನ್ನು ಖರೀದಿಸುವ ಒಪ್ಪಂದಕ್ಕೆ ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪ್ರಮುಖವಾಗಿ ಈ ಹೂಡಿಕೆ ಒಕ್ಕೂಟದ ನೇತೃತ್ವವನ್ನು ಉದ್ಯಮಿ ಅಮಿತ್ ಭಾಟಿಯಾ ವಹಿಸಿಕೊಂಡಿದ್ದಾರೆ. ಇದರಲ್ಲಿ ಜೆಫ್ ಬೆಜೋಸ್ ಅವರೊಂದಿಗೆ ಫೇಸ್‌ಬುಕ್ ಸಹ-ಸಂಸ್ಥಾಪಕ ಎಡ್ವರ್ಡೊ ಸವೆರಿನ್ ಕೂಡ ಭಾಗಿಯಾಗಿದ್ದಾರೆ. ಈ ಒಕ್ಕೂಟವು ಲಿವರ್‌ಪೂಲ್ ಕ್ಲಬ್‌ನ ಸುಮಾರು ಮೂರನೇ ಒಂದು ಭಾಗದಷ್ಟು ಶೇರುಗಳನ್ನು ಖರೀದಿಸಲು ಮುಂದಾಗಿದೆ.

Jeff Bezos Set to Buy Liverpool FC Stake Amazon Founder Joins Amit Bhatia-Led Investment Group

2010ರಿಂದ ಲಿವರ್‌ಪೂಲ್‌ನ ಮುಖ್ಯ ಮಾಲೀಕರಾಗಿರುವ 'ಫೆನ್‌ವೇ ಸ್ಪೋರ್ಟ್ಸ್ ಗ್ರೂಪ್' (FSG) ನಿಯಂತ್ರವನ್ನ ತನ್ನ ಬಳಿಯೇ ಉಳಿಸಿಕೊಳ್ಳಲಿದ್ದು, ಶೀಘ್ರದಲ್ಲೇ ಈ ಒಪ್ಪಂದದ ಅಧಿಕೃತ ಘೋಷಣೆ ಮಾಡಲಿದೆ. ಈ ಒಪ್ಪಂದದ ಪ್ರಕಾರ ಲಿವರ್‌ಪೂಲ್ ಕ್ಲಬ್‌ನ ಒಟ್ಟು ಮೌಲ್ಯ ಸುಮಾರು £೪.೪ ಬಿಲಿಯನ್ ($೫.೯ ಬಿಲಿಯನ್ / ಸುಮಾರು ₹೪೯,೦೦೦ ಕೋಟಿ) ಎಂದು ಅಂದಾಜಿಸಲಾಗಿದೆ.

$280 ಬಿಲಿಯನ್‌ಗೂ ಅಧಿಕ ಆಸ್ತಿ ಹೊಂದಿರುವ ಜೆಫ್ ಬೆಜೋಸ್ ಅವರಿಗೆ ಫುಟ್‌ಬಾಲ್ ಕ್ರೀಡಾ ಕ್ಷೇತ್ರದಲ್ಲಿ ಇದು ಮೊದಲ ಪ್ರಮುಖ ಹೂಡಿಕೆಯಾಗಲಿದೆ. ಇವರು ಈ ಹಿಂದೆ ಇಂಗ್ಲೆಂಡ್‌ನ 'ಕ್ವೀನ್ಸ್ ಪಾರ್ಕ್ ರೇಂಜರ್ಸ್' ಕ್ಲಬ್‌ನ ಶೇರುದಾರರಾಗಿದ್ದರು. 2010ರಲ್ಲಿ ಕೇವಲ £೩೦೦ ಮಿಲಿಯನ್‌ಗೆ ಈ ಕ್ಲಬ್‌ ಖರೀದಿಸಿದ್ದ ಎಫ್‌ಎಸ್‌ಜಿ, 2020ರಲ್ಲಿ 30 ವರ್ಷಗಳ ನಂತರ ಲಿವರ್‌ಪೂಲ್‌ಗೆ ಪ್ರೀಮಿಯರ್ ಲೀಗ್ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+