Ind vs Aus: ಸಿಡ್ನಿ ರಣಾಂಗಣ! ಬುಮ್ರಾ ಅಬ್ಬರಕ್ಕೆ ನಡುಗಿದ ಸ್ಯಾಮ್ ಕೋನ್‌ಸ್ಟಾಸ್‌

ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲ ದಿನವೇ 185 ರನ್‌ಗಳಿಗೆ ಆಲೌಟ್ ಆಗಿದೆ. ಬಳಿಕ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಕೂಡ ದಿನದಾಟದ ಅಂತ್ಯಕ್ಕೆ 9 ರನ್ ಗಳಿಸುವುಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ಮೊದಲ ದಿನವೇ ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕೋನ್‌ಸ್ಟಾಸ್ ಮತ್ತೆ ಭಾರತೀಯ ಆಟಗಾರರನ್ನು ಕೆಣಕಿದ್ದಾರೆ.

ದಿನದ ಕೊನೆಯ ಓವರ್ ನಲ್ಲಿ ನಡೆದ ಹೈಡ್ರಾಮಾ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದೆ. ಖವಾಜಾ ಜೊತೆ ಮಾತನಾಡುತ್ತಿದ್ದ ಬುಮ್ರಾರನ್ನು ಕೋನ್‌ಸ್ಟಾಸ್ ಸುಮ್ಮನೆ ಕೆಣಕಿದ್ದು ಇಡೀ ತಂಡವನ್ನೇ ಕೆರಳಿಸಿತು. ಬುಮ್ರಾ ಕೂಡ ತಾಳ್ಮೆ ಕಳೆದುಕೊಂಡು ವಾಗ್ವಾದದಲ್ಲಿ ತೊಡಗಿದರು.

Jasprit bumrah team india reply australia sam konstas sydney test

ಅಷ್ಟಕ್ಕೂ ಆಗಿದ್ದೇನು?

ಆಸ್ಟ್ರೇಲಿಯಾ ಇನ್ನಿಂಗ್ಸ್‌ನ ಮೂರನೇ ಓವರ್ ನಲ್ಲಿ ಬುಮ್ರಾ ಬೌಲಿಂಗ್ ಮಾಡುತ್ತಿದ್ದರು. ನಾಲ್ಕನೇ ಎಸೆತವನ್ನು ಬೌಲ್ ಮಾಡಲು ಬುಮ್ರಾ ಸಜ್ಜಾದರೂ ಖವಾಜಾ ಇನ್ನೂ ಕ್ರೀಸ್‌ನಲ್ಲಿ ಸಿದ್ಧವಾಗಿರಲಿಲ್ಲ, ಇದಕ್ಕೆ ಬುಮ್ರಾ ಕೈಸನ್ನೆಯ ಮೂಲಕ ತಮ್ಮ ಬೇಸರ ಹೊರಹಾಕಿದರು. ಇನ್ನೊಂದು ತುದಿಯಲ್ಲಿದ್ದ ಸ್ಯಾಮ್‌ ಕೋನ್‌ಸ್ಟಾಸ್ ಬುಮ್ರಾ ಕಡೆ ತಿರುಗಿ ಏನೋ ಹೇಳಿದರು. ಇದು ಬುಮ್ರಾರನ್ನು ಕೆರಳಿಸಿತು, ಅವರು ತಕ್ಷಣವೇ ಮಾತನಾಡುತ್ತಾ ಕೋನ್‌ಸ್ಟಾಸ್ ಕಡೆಗೆ ಬಂದರು.

ಈ ಘಟನೆ ನಡೆದ ಬಳಿಕ ಮುಂದಿನ ಎರಡನೇ ಎಸೆತದಲ್ಲೇ ಬುಮ್ರಾ ಖವಾಜ ವಿಕೆಟ್ ಪಡೆದರು. ಕೂಡಲೇ ಜೋರಾಗಿ ಕಿರುಚಿದ ಅವರು ತಿರುಗಿ ಕೋನ್‌ಸ್ಟಾಸ್‌ರನ್ನು ಗುರಾಯಿಸಿದರು. ಉಳಿದ ಆಟಗಾರರು ಕೂಡ ಕೋನ್‌ಸ್ಟಾಸ್‌ರನ್ನು ನೋಡಿಕೊಂಡೇ ಜೋರಾಗಿ ಕೂಗಿ ಸಂಭ್ರಮಾಚರಣೆ ಮಾಡಿದರು. ಕೋನ್‌ಸ್ಟಾಸ್ ಕೂಡಲೇ ಪೆವಿಲಿಯನ್‌ ಕಡೆ ಮೌನವಾಗಿ ನಡೆದರು.

ವಿರಾಟ್ ಕೊಹ್ಲಿ, ಪ್ರಸಿದ್ಧ್ ಕೃಷ್ಣ ಕೋನ್‌ಸ್ಟಾಸ್‌ರನ್ನು ನೋಡಿಕೊಂಡು ಜೋರಾಗಿ ಕಿರುಚಿ ಸಂಭ್ರಮಿಸಿದರು. ಮೈದಾನದಲ್ಲಿನ ಪ್ರೇಕ್ಷಕರು ಕೂಡ ಜೋರಾಗಿ ಕೂಗುವ ಮೂಲಕ ಭಾರತ ತಂಡದ ಆಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು.

ಮತ್ತೆ ಕೈಕೊಟ್ಟ ಬ್ಯಾಟರ್ ಗಳು

ಕೊನೆಯ ಟೆಸ್ಟ್‌ನಲ್ಲಿ ಭಾರತದ ಬ್ಯಾಟರ್ ಗಳು ಮತ್ತೆ ಕೈಕೊಟ್ಟರು. ರೋಹಿತ್ ಶರ್ಮಾ ಕೊನೆಯ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದು ಬುಮ್ರಾ ನಾಯಕತ್ವ ವಹಿಸಿಕೊಂಡರು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲೌಟ್ ಆಯಿತು. ರಿಷಬ್ ಪಂತ್ 40 ರನ್ ಗಳಿಸಿದರೆ, ರವೀಂದ್ರ ಜಡೇಜಾ 26 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ 22 ರನ್, ಶುಭಮನ್ ಗಿಲ್ 20 ರನ್, ವಿರಾಟ್ ಕೊಹ್ಲಿ 17 ರನ್ ಗಳಿಸಿದರೆ, ವಾಷಿಂಗ್ಟನ್ ಸುಂದರ್ 14 ರನ್, ಜೈಸ್ವಾಲ್ 10 ರನ್ ಮಾತ್ರ ಗಳಿಸಿದರು. ಬೊಲ್ಯಾಂಡ್ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರು. ನಾಯಕ ಕಮ್ಮಿನ್ಸ್ 2 ವಿಕೆಟ್ ಪಡೆದರು. ನಾಥನ್ ಲಿಯಾನ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಭಾರತ ಕೂಡ ಉತ್ತಮ ಬೌಲಿಂಗ್ ಮಾಡಿ ಆಸ್ಟ್ರೇಲಿಯಾವನ್ನು 185 ಕ್ಕಿಂತ ಕಡಿಮೆ ರನ್‌ಗಳಿಗೆ ಆಲೌಟ್ ಮಾಡಿದರೆ ಈ ಪಂದ್ಯವನ್ನು ಗೆಲ್ಲುವ ಬಗ್ಗೆ ಯೋಚಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+