Jasprit Bumrah "ನನ್ನ ಹೆಸರಿನಿಂದ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ" ಎಂದು ಬುಮ್ರಾ ಹೇಳಿದ್ದೇಕೆ?

ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಆಂಡರ್ಸನ್‌-ತೆಂಡೂಲ್ಕರ್‌ ಸರಣಿಯ ಮೊದಲ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ದಾಳಿಯನ್ನು ಸಂಘಟಿಸಿದರು. ಅಲ್ಲದೆ ಟೀಮ್ ಇಂಡಿಯಾ ಅಲ್ಪ ಮುನ್ನಡೆ ಸಾಧಿಸುವಲ್ಲಿ ಬುಮ್ರಾ ಶ್ರಮಿಸಿದರು. ಬೌನ್ಸಿ ಪಿಚ್‌ಗಳಲ್ಲಿ ಬೌಲಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಬುಮ್ರಾ ಇಂಗ್ಲೆಂಡ್‌ ನೆಲದಲ್ಲಿ ಮತ್ತೊಂದು ಐದು ವಿಕೆಟ್‌ ಸಾಧನೆ ಮಾಡಿದರು. ಈ ಸಾಧನೆಯ ಬಳಿಕ ಬುಮ್ರಾ, ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ.

ಭಾನುವಾರ ಲೀಡ್ಸ್‌ ಅಂಗಳದಲ್ಲಿ ನಡೆದ ಮೂರನೇ ದಿನದಾಟದಲ್ಲಿ ಜಸ್ಪ್ರೀತ್ ಬುಮ್ರಾ ಅಮೋಘ ಬೌಲಿಂಗ್ ದಾಳಿಯನ್ನು ನಡೆಸಿದರು. ಈ ವೇಳೆ ಇವರು ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಕಾಡಿ ಐದು ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಬುಮ್ರಾ ಹಲವು ದಾಖಲೆಗಳನ್ನು ಬರೆದರು. ಈ ಅಮೋಘ ಸ್ಪೆಲ್‌ ಬಗ್ಗೆ ಬುಮ್ರಾ ದಿನದಾಟದ ಮುಕ್ತಾಯದ ಬಳಿಕ ಮಾತನಾಡಿದ್ದಾರೆ.

Jasprit Bumrah Silences Critics with Five-Wicket Haul in Leeds

ಜನ ನಾನು ಗಾಯಕ್ಕೆ ತುತ್ತಾದ ಬಳಿಕ ಮಾತನಾಡುತ್ತಲೇ ಇರುತ್ತಾರೆ. ಅವರು ಮಾತನಾಡುತ್ತಲೇ ಇರುತ್ತಾರೆ. ಈ ಬಾರಿ ಹೋಗುತ್ತಾನೆ. ಮುಂದಿನ ಬಾರಿ ಹೋಗುತ್ತಾನೆ ಎಂದು ಹೇಳುತ್ತಲೇ ಇರುತ್ತಾರೆ. ನಾನು ಸಹ ದಶಕದಿಂದ ಕ್ರಿಕೆಟ್ ಆಡುತ್ತಿದ್ದೇನೆ. ಇದನ್ನೆಲ್ಲಾ ಕೇಳಿ ನನಗೆ ಅಭ್ಯಾಸವಾಗಿದೆ. ಐಪಿಎಲ್‌ನಲ್ಲೂ ಸಹ ನಾನು ಆಡುತ್ತಿದ್ದೇನೆ. ಎಲ್ಲಿಯ ವರೆಗೆ ಭಗವಂತ ನನಗೆ ಆಡಲು ಶಕ್ತಿ ನೀಡುತ್ತಾನೋ ಅಲ್ಲಿಯ ವರೆಗೆ ಆಡುವೆ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಗೊಂಡ ನಂತರ, ಅನೇಕ ಜನರು ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಅನ್ನು ಪ್ರಶ್ನಿಸಿದರು. ಈ ಬಗ್ಗೆ ಮಾತನಾಡಿರುವ ಬುಮ್ರಾ ಜನರು ಏನು ಅಂದುಕೊಳ್ಳುತ್ತಾರೆ ಎಂದು ನಾನು ಯೋಚಿಸಲು ಸಾಧ್ಯವಿಲ್ಲ. ಜನರಿಗೆ ತಮ್ಮ ಬಗ್ಗೆ ಏನು ಬರೆಯಬೇಕು ಎಂದು ಅನಿಸುತ್ತದೋ, ಅದನ್ನು ಬರೆಯುತ್ತಾರೆ. ಪ್ರತಿಯೊಬ್ಬರು ಬರೆಯಲು ಸ್ವತಂತ್ರ್ಯರು. ಭಾರತದಲ್ಲಿ ಕ್ರಿಕೆಟ್‌ ಬಹಳ ಜನಪ್ರೀಯವಾಗಿದೆ. ತಮ್ಮ ಹೆಸರಿನ ಸುದ್ದಿಗಳು ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ತಮಗೆ ಇದರ ಬಗ್ಗೆ ಏನು ಬೇಸರವಿಲ್ಲ ಎಂದು ಬುಮ್ರಾ ತಿಳಿಸಿದ್ದಾರೆ.

Jasprit Bumrah Silences Critics with Five-Wicket Haul in Leeds

ಕ್ಯಾಚಿಂಗ್‌ ಬಗ್ಗೆ ಬುಮ್ರಾ ಹೇಳಿದ್ದು ಇಷ್ಟು...

ಇಂಗ್ಲೆಂಡ್ ತಂಡದ ಪರ ಹ್ಯಾರಿ ಬ್ರೂಕ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಈ ಮೈದಾನ ದೊಡ್ಡ ಸ್ಕೋರ್‌ದ್ದಾಗಿದೆ ಎಂದರು. ಇನ್ನು ಕ್ಯಾಚ್‌ ಬಿಟ್ಟ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಇದು ಪಂದ್ಯದ ಒಂದು ಭಾಗ ಎಂದು ಬುಮ್ರಾ ತಿಳಿಸಿದ್ದಾರೆ. ಯಾರು ಇದನ್ನು ಬೇಕಂತ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಪಂದ್ಯದ ಚಿತ್ರಣ

ಲೀಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 470 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 465 ರನ್‌ ಸೇರಿಸಿತು. ಈ ವೇಳೆ ಬುಮ್ರಾ 83 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಎರಡನೇ ಇನಿಂಗ್ಸ್‌ ಆರಂಭಿಸಿರುವ ಭಾರತ ದಿನದಾಟದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 90 ರನ್‌ ಕಲೆ ಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+