Jasprit Bumrah: ಜಸ್ಪ್ರೀತ್ ಬುಮ್ರಾ ಫಿಟ್‌ನೆಸ್‌ ಬಗ್ಗೆ ಆತಂಕ, ರೊಚ್ಚಿಗೆದ್ಧ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್

India vs Afghanistan T20: ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಟಿ-20 ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಈಗಾಗಲೇ ಭಾರತ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಸ್ಟಾರ್ ಬೌಲರ್ ಜಸ್ಪ್ರಿತ್ ಬೂಮ್ರಾ ಕೂಡ ಇದ್ದಾರೆ. ಆದರೆ ಅವರ ಫಿಟ್‌ನೆಸ್ ರಿಪೋರ್ಟ್‌ ಇನ್ನೂ ಬಂದಿಲ್ಲ. ಈ ಹಿನ್ನೆಲೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಆಯ್ಕೆಗಾರರು, ಮಂಡಳಿ ಹಾಗೂ ಕೋಚ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಡಿಸಿದ್ದಾರೆ.

ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಬಿಸಿಸಿಐ ವೈದ್ಯಕೀಯ ತಂಡದಿಂದ ಇನ್ನೂ ಫಿಟ್‌ನೆಸ್ ಪ್ರಮಾಣಪತ್ರ ಲಭಿಸಿಲ್ಲ. ಮುಂಬರುವ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿ ಹಾಗೂ 2026ರ ಏಷ್ಯನ್ ಗೇಮ್ಸ್‌ನ ಭಾರತೀಯ ತಂಡಗಳಲ್ಲಿ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ ಅವರ ಪಾಲ್ಗೊಳ್ಳುವಿಕೆಯು ಫಿಟ್‌ನೆಸ್ ಆಧಾರದ ಮೇಲೆ ನಿರ್ಧಾರವಾಗಲಿದೆ.

Jasprit Bumrah Fitness Update Badrinath Slams Board of Control for Cricket in India Over Handling

ಗಾಯದ ಸಮಸ್ಯೆಗೆ ಒಳಗಾಗಿರುವ ಜಸ್ಪ್ರೀತ್ ಬುಮ್ರಾ

ಬುಮ್ರಾ ಅವರು ಕಳೆದ ಕೆಲವು ದಿನಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜುಲೈ 16ರಂದು ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಅವರ ಮೊಣಕಾಲಿಗೆ ಪೆಟ್ಟಾಗಿದ್ದು, ಹಳೆಯ ಗಾಯದ ಸಮಸ್ಯೆ ಮತ್ತಷ್ಟು ತೀವ್ರಗೊಂಡಿತ್ತು. ಆ ಪಂದ್ಯದ ಬಳಿಕ ಅವರು ಇದುವರೆಗೆ ಬೌಲಿಂಗ್ ಮಾಡಿಲ್ಲ ಹಾಗೂ ಚೇತರಿಕೆಯ ಪ್ರಕ್ರಿಯೆ ಇನ್ನೂ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಬುಮ್ರಾ ಬದಲಿಗೆ ಬ್ಯಾಕಪ್ ಬೌಲರ್ ಯಾರು?

ಜಸ್ಪ್ರೀತ್ ಬುಮ್ರಾ ಅವರು ಭಾರತ ತಂಡಕ್ಕೆ ಯಾವಾಗ ಮರಳಲಿದ್ದಾರೆ ಎಂಬ ದಿನಾಂಕವನ್ನು ಅಂದಾಜಿಸುವುದು ಕಷ್ಟವಾಗಿರುವ ಈ ಸಮಯದಲ್ಲಿ, ಬಿಸಿಸಿಐ ಆಯ್ಕೆಗಾರರು ಪ್ರಿನ್ಸ್ ಯಾದವ್ ಅವರನ್ನು 'ಸಂಭಾವ್ಯ ಬ್ಯಾಕಪ್' ಬೌಲರ್ ಆಗಿ ಗುರುತಿಸಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ತಿಳಿಸಿದೆ. ಇದರ ಜೊತೆಗೆ ಬುಮ್ರಾ ಅವರು ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಮತ್ತು ಹರ್ಷಿತ್ ರಾಣಾ ಅವರೊಂದಿಗೆ ಸೆಪ್ಟೆಂಬರ್ 10ರಂದು ದೆಹಲಿಯಲ್ಲಿ ತಂಡವನ್ನು ಸೇರಿಕೊಳ್ಳುವ ಮುನ್ನ, ಒಂದು ವಾರದ ಅವಧಿಯಲ್ಲಿ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.

ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಅಸಮಾಧಾನ

ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸುಬ್ರಮಣ್ಯಂ ಬದರಿನಾಥ್ ಅವರು ಜಸ್ಪ್ರೀತ್ ಬುಮ್ರಾ ಅವರನ್ನು ನಿರ್ವಹಿಸುತ್ತಿರುವ ರೀತಿಯನ್ನು ಟೀಕಿಸಿದ್ದು, ತಂಡದ ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ. 'ಕಳೆದ ವರ್ಷದ ಜನವರಿಯಲ್ಲಿ ಬೆನ್ನು ನೋವಿನ ಗಾಯಕ್ಕೆ ತುತ್ತಾದಾಗಿನಿಂದಲೂ ಬಿಸಿಸಿಐ ಈ ವೇಗದ ಬೌಲರ್‌ನ ಒತ್ತಡವನ್ನು ನಿರ್ವಹಣೆಯತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಆದರೆ ಈ ಪ್ರಯತ್ನದ ಫಲಿತಾಂಶಗಳು ಸಮಾಧಾನಕರವಾಗಿ ಮೂಡಿಬಂದಿಲ್ಲ,' ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಕಳಪೆ ನಿರ್ವಹಣೆ ವಿರುದ್ಧ ಆಕ್ರೋಶ

ಜಸ್ಪ್ರಿತ್ ಬುಮ್ರಾ ಅವರ ಗಾಯದ ಕಳಪೆ ನಿರ್ವಹಣೆಗೆ ಬದ್ರಿನಾಥ್ ಅವರು ತಂಡದ ನಾಯಕ, ತರಬೇತುದಾರ ಹಾಗೂ ಆಯ್ಕೆಗಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಿದ್ದಾರೆ. 'ಈ ನಿರ್ಧಾರವನ್ನು ಯಾರು ತೆಗೆದುಕೊಂಡರು ಎಂದು ನನಗೊತ್ತಿಲ್ಲ. ಸೆಂಟರ್ ಆಫ್ ಎಕ್ಸಲೆನ್ಸ್ ಆಯ್ಕೆ ಪ್ರಕ್ರಿಯೆಯನ್ನು ಮಾಡುವುದಿಲ್ಲ. ಅವರು ಕೇವಲ ಆಟಗಾರ ಪ್ರಸ್ತುತ ಈ ಸ್ಥಿತಿಯಲ್ಲಿದ್ದಾರೆ, ಇಂತಿಷ್ಟು ಪಂದ್ಯಗಳನ್ನು ಆಡಬಹುದು ಮತ್ತು ಅವರ ದೇಹದ ಸ್ಥಿತಿ ಹೀಗಿದೆ ಎಂದು ಮಾಹಿತಿ ನೀಡುತ್ತಾರಷ್ಟೇ,' ಎಂದು ಹೇಳಿದ್ದಾರೆ.

'ಆದರೆ ನಾಯಕ, ಕೋಚ್ ಮತ್ತು ಆಯ್ಕೆಗಾರರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸೆಂಟರ್ ಆಫ್ ಎಕ್ಸಲೆನ್ಸ್ ಕೇವಲ ಮಾಹಿತಿಯನ್ನು ರವಾನಿಸುತ್ತದೆ, ಅವರೇನು ಆಯ್ಕೆಗಾರರಲ್ಲ,' ಎಂದು ಬದ್ರಿನಾಥ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಕ್ರೋಶ ಹೊರಹಾಕಿದ್ದರು.

ಬುಮ್ರಾ ಅವರನ್ನು ಹೊರತುಪಡಿಸಿ, ಭಾರತ ತಂಡವು ಇತರ ಪ್ರಮುಖ ಆಟಗಾರರ ಗಾಯದ ಸಮಸ್ಯೆಗಳನ್ನೂ ಎದುರಿಸುತ್ತಿದೆ. ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ವೇಗಿ ಹರ್ಷಿತ್ ರಾಣಾ, ಸ್ಪಿನ್-ಬೌಲಿಂಗ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಬ್ಯಾಟರ್ ಸಾಯಿ ಸುದರ್ಶನ್ ಅವರು ಸಹ ಗಾಯಗೊಂಡಿರುವ ಕಾರಣ ಪ್ರಸ್ತುತ ತಂಡದಿಂದ ಹೊರಗುಳಿದಿದ್ದಾರೆ.

ಸರಣಿ ಆರಂಭ ಯಾವಾಗ?

ಇನ್ನೂ ಮೂರು ಪಂದ್ಯಗಳ ಈ ಸರಣಿಯು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಈ ಸರಣಿಯು ಭಾರತ ತಂಡಕ್ಕೆ ಮುಂಬರುವ ಏಷ್ಯನ್ ಗೇಮ್ಸ್‌ಗೆ ಸಿದ್ಧತೆ ನಡೆಸಲು ಸೂಕ್ತ ವೇದಿಕೆಯಾಗಲಿದೆ. ಈ ಹಿಂದೆ ಜೂನ್‌ನಲ್ಲಿ ನಡೆದಿದ್ದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವು ಭರ್ಜರಿ ಪ್ರದರ್ಶನ ನೀಡಿ ಕ್ಲೀನ್ ಸ್ವೀಪ್ ಸಾಧಿಸಿತ್ತು. ಅದೇ ಗೆಲುವಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿ ಶ್ರೇಯಸ್ ಪಡೆ ಮೈದಾನಕ್ಕಿಳಿಯಲಿದೆ.

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾಮ, ಅರ್ಷದೀಪ್ ಸಿಂಗ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+