Jasprit Bumrah: ಕಪಿಲ್ ದೇವ್, ಮುತ್ತಯ್ಯ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಮೋಘ ಬೌಲಿಂಗ್ ನಡೆಸಿ ಅಬ್ಬರಿಸಿದ್ದಾರೆ. ಇವರು ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದರು. ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 6 ರನ್ ಹಿನ್ನಡೆ ಅನುಭವಿಸುವಲ್ಲಿ, ಇವರ ಕೊಡುಗೆ ಅಪಾರ.
ಇಂಗ್ಲೆಂಡ್‌ನಲ್ಲಿ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಕಮಾಲ್ ಪ್ರದರ್ಶನ ಮಾಡಿದರು. ಈ ಮೂಲಕ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್‌ಗಳನ್ನು ಪಡೆದ ಭಾರತದ ಬೌಲರ್ ಎನಿಸಿಕೊಂಡರು. ಯಾವುದೇ ಭಾರತೀಯ ಬೌಲರ್ ಆಂಗ್ಲರ ತವರಿನಲ್ಲಿ 3 ಬಾರಿ 5 ವಿಕೆಟ್ ಪಡೆದಿಲ್ಲ. ಬುಮ್ರಾ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ 9 ಭಾರತೀಯ ಬೌಲರ್‌ಗಳನ್ನು ವಿಕೆಟ್ ಬೇಟೆಯಲ್ಲಿ ಹಿಂದಿಕ್ಕಿದರು.

ಸೇನಾ ರಾಷ್ಟ್ರದಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ಏಷ್ಯನ್ ಬೌಲರ್ ಒಬ್ಬ 150ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾದರು. ಇವರು ಮೊದಲ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್‌ನ ಇಬ್ಬರು ಬ್ಯಾಟರ್‌ಗಳನ್ನು ಔಟ್ ಮಾಡುವ ಮೂಲಕ, ಪಾಕಿಸ್ತಾನದ ಮಾಜಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ದಾಖಲೆಯನ್ನು ಸಹ ಅಳಿಸಿ ಹಾಕಿದ್ದರು. ಸೇನಾ ರಾಷ್ಟ್ರದಲ್ಲಿ ಏಷ್ಯಾ ಬೌಲರ್ ಒಬ್ಬ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಈಗ ಬುಮ್ರಾ ಹೆಸರಿನಲ್ಲಿದೆ. ಈ ವರೆಗೆ, ಸೇನಾ ದೇಶಗಳಲ್ಲಿ ಕೇವಲ 3 ಬೌಲರ್‌ಗಳು 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರಲ್ಲಿ ವೆಸ್ಟ್ ಇಂಡೀಸ್‌ನ 2 ಇಬ್ಬರು ದಿಗ್ಗಜ ಬೌಲರ್‌ಗಳು ಸೇರಿದ್ದಾರೆ.
ಸೇನಾ ರಾಷ್ಟ್ರಗಳಲ್ಲಿ ದಾಖಲೆ
ಮೊದಲ ಇನಿಂಗ್ಸ್‌ನಲ್ಲಿ ಬುಮ್ರಾ ಟೀಮ್ ಇಂಡಿಯಾದ ಉಳಿದ ಬೌಲರ್‌ಗಳಿಂತ ಭಿನ್ನವಾಗಿ ಕಾಣಿಸಿಕೊಂಡರು. ಇವರು ಕೇವಲ 34 ಟೆಸ್ಟ್ ಪಂದ್ಯಗಳಲ್ಲಿ 12ನೇ ಬಾರಿಗೆ 5ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ತವರಿನಾಚೆ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಐದು ವಿಕೆಟ್‌ಗಳನ್ನು ಪಡೆದ ಕಪೀಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟಿದರು. ಕಪಿಲ್ ದೇವ್ ಸಹ ವಿದೇಶಗಳಲ್ಲಿ 5ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಹೊಂದಿದ್ದಾರೆ.
ಮುರಳಿ ದಾಖಲೆಯ ಸಮಕ್ಕೆ ಬುಮ್ರಾ
ಇಂಗ್ಲೆಂಡ್ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಜಸ್ಪ್ರಿತ್ ಬುಮ್ರಾ ಮತ್ತೊಂದು ದಾಖಲೆ ಬರೆದಿದ್ದಾರೆ. ಇವರು ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಐದುಕ್ಕೂ ಹೆಚ್ಚು ವಿಕೆಟ್ ಪಡೆದ ಏಷ್ಯನ್ ಬೌಲರ್‌ಗಳ ಪಟ್ಟಿಯಲ್ಲಿ, ಶ್ರೀಲಂಕಾದ ಮುತ್ತಯ್ಯಾ ಮುರಳಿಧರನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಬುಮ್ರಾ ಸೇನಾ ರಾಷ್ಟ್ರಗಳಲ್ಲಿ 10 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಸದ್ಯ ಪಾಕಿಸ್ತಾನದ ವಾಸೀಮ್ ಅಕ್ರಮ್ ಮಾತ್ರ ಬುಮ್ರಾಗಿಂತ ಮುಂದಿದ್ದಾರೆ. ಇವರು 11 ಬಾರಿ ಈ ಸಾಧನೆ ಮಾಡಿದ್ದಾರೆ.












Click it and Unblock the Notifications