IPL 2025: ಐಪಿಎಲ್ ಆಟಗಾರರಿಗೆ ಹಣದ ಹೊಳೆ; ಪ್ರತಿ ಪಂದ್ಯಕ್ಕೆ ಸಿಗಲಿದೆ ₹7.5 ಲಕ್ಷ

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾಹರಾಜಿಗೆ ಮುನ್ನ ಆಟಗಾರರಿಗೆ ಹಣದ ಹೊಳೆ ಹರಿಯುವ ಸೂಚನೆ ಸಿಕ್ಕಿದೆ. ಐಪಿಎಲ್‌ನಲ್ಲಿ ಆಡುವ ಆಟಗಾರರು ಇನ್ನು ಮುಂದೆ ಪ್ರತಿ ಪಂದ್ಯದಲ್ಲಿ 7.5 ಲಕ್ಷ ರೂಪಾಯಿ ಶುಲ್ಕ ಪಡೆಯಲಿದ್ದಾರೆ ಎಂದು ಘೋಷಿಸಲಾಗಿದೆ. ಇದರ ಪ್ರಕಾರ ಎಲ್ಲಾ ಲೀಗ್ ಪಂದ್ಯಗಳಲ್ಲಿ ಆಡುವ ಆಟಾಗರರು ಪಂದ್ಯದ ಶುಲ್ಕದ ರೂಪದಲ್ಲಿಯೇ 1.05 ಕೋಟಿ ರೂಪಾಯಿ ಪಡೆಯಲಿದ್ದಾರೆ.

ಇದಕ್ಕಾಗಿ ಐಪಿಎಲ್ ಫ್ರಾಂಚೈಸಿಗಳು ಒಟ್ಟಾರೆ ₹12.6 ಕೋಟಿಯನ್ನು ಪಂದ್ಯದ ಶುಲ್ಕ ನೀಡಲು ಖರ್ಚು ಮಾಡಲಿವೆ. ಆಟಗಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ಐಪಿಎಲ್ ಸಂಬಳವನ್ನು ಹೊರತು ಪಡಿಸಿ ₹1 ಕೋಟಿ ದುಡಿಯಲು ಆಟಗಾರರಿಗೆ ಅವಕಾಶ ಸಿಕ್ಕಂತಾಗಿದೆ.

IPL Players to Receive Increased Match Fees of Rs 7 5 Lakhs Each

ಮಾಹಿತಿ ಕೊಟ್ಟ ಜಯ್ ಶಾ

ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಪಂದ್ಯದ ಶುಲ್ಕದ ಹೆಚ್ಚಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಐತಿಹಾಸಿಕ ನಿರ್ಣಯ ಎಂದು ಕರೆದಿರುವ ಅವರು, ನಮ್ಮ ಕ್ರಿಕೆಟಿಗರಿಗೆ ಪ್ರತಿ ಪಂದ್ಯದಲ್ಲಿ ₹7.5 ಲಕ್ಷ ಶುಲ್ಕ ನೀಡಲು ನಾವು ಉತ್ಸುಕರಾಗಿದ್ದೇವೆ. ಒಂದು ಆವೃತ್ತಿಯಲ್ಲಿ ಎಲ್ಲಾ ಲೀಗ್ ಪಂದ್ಯಗಳನ್ನು ಆಡುವ ಆಟಗಾರ ಹರಾಜು ಮೊತ್ತಕ್ಕೆ ಹೆಚ್ಚುವರಿಯಾಗಿ 1.05 ಕೋಟಿ ರೂಪಾಯಿ ಪಡೆಯುತ್ತಾರೆ. ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ಇದು ಹೊಸ ಯುಗವಾಗಿದೆ ಎಂದು ಹೇಳಿದ್ದಾರೆ.

ಪಂದ್ಯ ಶುಲ್ಕ ನಿಗದಿ ಮಾಡಿರುವ ಕಾರಣ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಲು ಮತ್ತು ಪ್ರತಿ ಪಂದ್ಯಕ್ಕೆ ತಾವು ಲಭ್ಯವಿರುವಂತೆ ಮಾಡಲು ಫಿಟ್‌ನೆಸ್ ಬಗ್ಗೆ ಹೆಚ್ಚಿನ ಗಮನ ಕೊಡಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.

ರಿಟೈನ್ ಬಗ್ಗೆ ಹೇಳಿದ್ದೇನು?

ಮೆಗಾ ಹರಾಜಿಗೆ ಮುನ್ನ ತಂಡದಲ್ಲಿ ಎಷ್ಟು ಜನ ಆಟಗಾರರನ್ನು ಉಳಿಸಿಕೊಳ್ಳಬೇಕು, ಆರ್ ಟಿಎಮ್ ಮತ್ತೆ ಪರಿಚಯಿಸುತ್ತಾ ಎನ್ನುವ ಬಗ್ಗೆ ಪ್ರಶ್ನೆಗಳಿವೆ. ಇದರ ಬಗ್ಗೆ ಕೂಡ ಶೀಘ್ರದಲ್ಲೇ ಸ್ಪಷ್ಟನೆ ಸಿಗುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳಿನಲ್ಲಿ ಮೆಗಾ ಹರಾಜು ನಡೆಯಲಿದ್ದು ಎಲ್ಲಾ ಫ್ರಾಂಚೈಸಿಗಳು ಇದೀಗ ಬಿಸಿಸಿಐ ಘೋಷಣೆಗಾಗಿ ಕಾಯುತ್ತಿವೆ. ಮೂಲಗಳ ಪ್ರಕಾರ 5 ಆಟಗಾರರನ್ನು ಪ್ರತಿ ಫ್ರಾಂಚೈಸಿಗಳು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಐಪಿಎಲ್ ಮೆಗಾ ಹರಾಜಿನ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+