IPL Auction: ದಾಖಲೆ ಬರೆದ ಶ್ರೇಯಸ್‌ ಅಯ್ಯರ್; ₹26.75 ಕೋಟಿ ಕೊಟ್ಟ ಪಂಜಾಬ್‌ ಕಿಂಗ್ಸ್‌

ಟೀಂ ಇಂಡಿಯಾ ಬ್ಯಾಟರ್ ಶ್ರೇಯಸ್‌ ಅಯ್ಯರ್ ಐಪಿಎಲ್ ಮೆಗಾ ಹರಾಜಿನಲ್ಲಿ ಹೊದ ದಾಖಲೆ ಬರೆದಿದ್ದಾರೆ. ಕಳೆದ ವರ್ಷ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಯಿಗೆ ಹರಾಜಾಗಿದ್ದು ಐಪಿಎಲ್ ಇತಿಹಾಸದ ದುಬಾರಿ ಆಟಗಾರನಾಗಿದ್ದರು, ಆದರೆ ಶ್ರೇಯಸ್ ಅಯ್ಯರ್ ಈ ದಾಖಲೆಯನ್ನು ಮುರಿದಿದ್ದು ಬರೋಬ್ಬರಿ ಕೋಟಿ ರೂಪಾಯಿಗೆ ತಂಡದ ಪಾಲಾಗಿದ್ದಾರೆ.

ಶ್ರೇಯಸ್ ಅಯ್ಯರ್ ಖರೀದಿ ಮಾಡಲು ಮೊದಲು ಕೆಕೆಆರ್ ಆಸಕ್ತಿ ತೋರಿಸಿತು, ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಭಾರಿ ಪೈಪೋಟಿ ನಡೆಯಿತು.

IPL Mega Auction 2025 Shreyas Iyer sold for punjab kings 26 75 crores

ಕೊನೆಗೆ ಶ್ರೇಯಸ್ ಅಯ್ಯರ್ ಕಳೆದ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಕೆಕೆಆರ್ ಚಾಂಪಿಯನ್ ಆಗಿತ್ತು. ಆದರೆ ಕೆಕೆಆರ್ ಅವರನ್ನು ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿತ್ತು. ಶ್ರೇಯಸ್ ಅಯ್ಯರ್ ಉತ್ತಮ ಮೊತ್ತಕ್ಕೆ ಹರಾಜಾಗುತ್ತಾರೆ ಎಂದು ನಂಬಲಾಗಿತ್ತು, ಆದರೆ ಎಲ್ಲರ ನಿರೀಕ್ಷೆಗಳನ್ನು ಮೀರಿ ಅವರು ದುಬಾರಿ ಮೊತ್ತಕ್ಕೆ ಹರಾಜಾಗಿದ್ದಾರೆ.

ಅಯ್ಯರ್ ಐಪಿಎಲ್‌ ವೃತ್ತಿಜೀವನ

ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ 115 ಪಂದ್ಯಗಳನ್ನಾಡಿದ್ದು 127.48 ಸ್ಟ್ರೈಕ್‌ರೇಟ್‌ನಲ್ಲಿ 3127 ರನ್ ಗಳಿಸಿದ್ದಾರೆ. 21 ಅರ್ಧಶತಕ ಸಿಡಿಸಿದ್ದು, 96 ರನ್ ಅವರ ಅತ್ಯಧಿಕ ವೈಯಕ್ತಿ ಸ್ಕೋರ್ ಆಗಿದೆ. 2024ರ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ವೈಯಕ್ತಿಕವಾಗಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದೇ ಇದ್ದರೂ ಕೆಕೆಆರ್ ತಂಡದ ನಾಯಕನಾಗಿ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೇ ಕಾರಣಕ್ಕೆ ಪಂಜಾಬ್ ಕಿಂಗ್ಸ್ ಶ್ರೇಯಸ್‌ಗೆ ದುಬಾರಿ ಮೊತ್ತ ನೀಡಿದೆ ಎನ್ನಲಾಗಿದೆ. ಈ ಐಪಿಎಲ್‌ನಲ್ಲಿ ಅಯ್ಯರ್ ಪಂಜಾಬ್ ಕಿಂಗ್ಸ್ ನಾಯಕತ್ವ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಶುಕ್ರವಾರ, 29 ವರ್ಷದ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯದಲ್ಲಿ ಗೋವಾ ವಿರುದ್ಧ ಮುಂಬೈ ಪರ 57 ಎಸೆತಗಳಲ್ಲಿ 130 ರನ್ ಸಿಡಿಸಿದ್ದರು. ಇದು ಕೂಡ ಅವರ ಬೆಲೆ ಮತ್ತಷ್ಟು ಹೆಚ್ಚಲು ಕಾರಣವಾಯಿತು. ಈವರೆಗೂ ಒಮ್ಮೆಯೂ ಕಪ್ ಗೆಲ್ಲದ ಪಂಜಾಬ್ ಕಿಂಗ್ಸ್ ಸಂಪೂರ್ಣ ಹೊಸ ತಂಡವನ್ನು ಕಟ್ಟುತ್ತಿದೆ.

ಮೊದಲ ದಿನ ಪಂಜಾಬ್ ಖರೀದಿ ಮಾಡಿದ ಆಟಗಾರರು

ಮೊದಲ ದಿನವೇ ಪಂಜಾಬ್ ಹಲವು ಪ್ರಮುಖ ಆಟಗಾರರನ್ನು ಖರೀದಿ ಮಾಡಿದೆ. ಶ್ರೇಯಸ್ ಅಯ್ಯರ್ ₹26.75 ಕೋಟಿ, ಅರ್ಷದೀಪ್ ಸಿಂಗ್‌ ₹18 ಕೋಟಿ, ಯುಜ್ವೇಂದ್ರ ಚಹಾಲ್ ₹18 ಕೋಟಿ, ಮಾರ್ಕಸ್ ಸ್ಟೊಯಿನಿಸ್ ₹11 ಕೋಟಿ, ಗ್ಲೆನ್ ಮ್ಯಾಕ್ಸ್‌ವೆಲ್ ₹4.20 ಕೋಟಿ, ನೇಹಲ್ ವಧೇರಾ ₹4.20 ಕೋಟಿ, ವಿಜಯ್ ಕುಮಾರ್ ವೈಶಾಖ್ ₹1.80 ಕೋಟಿ, ಯಶ್ ಠಾಕೂರ್ ₹1.60 ಕೋಟಿ, ಹಪ್ರಿತ್ ಬ್ರಾರ್ ₹1.50 ಕೋಟಿ, ವಿಷ್ಣು ವಿನೋದ್ ₹95 ಲಕ್ಷ ರೂಪಾಯಿಗೆ ಪಂಜಾಬ್ ಪಾಲಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+