IPL 2023 Final: ಐಪಿಎಲ್ ವಿಜೇತ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ; ರನ್ನರ್-ಅಪ್ ತಂಡಕ್ಕೆ ಎಷ್ಟು?
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್ ಅಂತಿಮ ಘಟ ತಲುಪಿದೆ. ಭಾನುವಾರ ಮಳೆ ಬಂದ ಕಾರಣ ಮೀಸಲು ದಿನವಾದ ಇಂದು (ಸೋಮವಾರ, ಮೇ 29) ಫೈನಲ್ ಪಂದ್ಯದ ಮೂಲಕ ಎರಡು ತಿಂಗಳ ಸುದೀರ್ಘ ಕ್ರಿಕೆಟ್ ಪಂದ್ಯಾವಳಿಗೆ ತೆರೆ ಬೀಳಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿವೆ. ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ.

ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಐದನೇ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ (ಜಿಟಿ) ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲು ಸೆಣಸಾಡಲಿವೆ.
ಇನ್ನು ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮತ್ತು ರನ್ನರ್-ಅಪ್ ತಂಡಗಳು ಭಾರೀ ಮೊತ್ತದ ಬಹುಮಾನವನ್ನು ತನ್ನದಾಗಿಸಿಕೊಳ್ಳಲಿವೆ. ಉಳಿದಂತೆ ಕೆಲವು ಪ್ರಶಸ್ತಿ ಮೊತ್ತಗಳ ಪಟ್ಟಿ ಇಲ್ಲಿದೆ.
ಐಪಿಎಲ್ 2023ರ ಒಟ್ಟು ಮೊತ್ತ ಸುಮಾರು 46.5 ಕೋಟಿ ರೂಪಾಯಿಯಾಗಿದೆ. ಫೈನಲ್ ತಂಡಗಳು, ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ವಿಜೇತರ ಜೊತೆಗೆ ಅಗ್ರ ನಾಲ್ಕು ತಂಡಗಳು ಹೆಚ್ಚಿನ ನಗದು ಬಹುಮಾನಗಳನ್ನು ಸ್ವೀಕರಿಸಲಿದ್ದಾರೆ.

ಲೀಗ್ ಹಂತಗಳ ಅಂತ್ಯದ ನಂತರ ಐಪಿಎಲ್ 2023ರ ಅಂಕಪಟ್ಟಿಯ ಪ್ರಕಾರ, ಪ್ಲೇಆಫ್‌ಗಳಿಗೆ ಅರ್ಹತೆ ಪಡೆದ ನಾಲ್ಕು ತಂಡಗಳೆಂದರೆ, ಗುಜರಾತ್ ಟೈಟನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್.
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕ್ರಮವಾಗಿ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2ರಲ್ಲಿ ಸೋತು ಹೊರಬಿದ್ದಿವೆ. ಹೊರಬಿದ್ದಿದ್ದರೆ, ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಫೈನಲ್‌ಗೆ ಮುನ್ನಡೆದಿವೆ.
ಫೈನಲ್ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಗುಜರಾತ್ ಟೈಟನ್ಸ್ ಇಬ್ಬರಲ್ಲಿ ಯಾರೇ ಐಪಿಎಲ್ 2023 ಪ್ರಶಸ್ತಿ ಗೆದ್ದರೂ ಆ ತಂಡವು 20 ಕೋಟಿ ರೂಪಾಯಿಗಳನ್ನು ನಗದು ಬಹುಮಾನವಾಗಿ ಪಡೆಯಲಿದೆ. ರನ್ನರ್-ಅಪ್ ಸ್ಥಾನ ಪಡೆಯುವ ತಂಡವು 13 ಕೋಟಿ ರೂಪಾಯಿ ಗಳಿಸುತ್ತದೆ.

ಮೂರನೇ ಸ್ಥಾನ ಪಡೆದಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 7 ರೂಪಾಯಿ ಮೊತ್ತ ತನ್ನದಾಗಿಸಿಕೊಳ್ಳಲಿದ್ದರೆ, ನಾಲ್ಕನೇ ಸ್ಥಾನದಲ್ಲಿರುವ 6.5 ಕೋಟಿ ರೂಪಾಯಿ ಗಳಿಸಲಿದೆ.
ಇದೆ ವೇಳೆ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಜೇತರು ತಲಾ 15 ಲಕ್ಷ ರೂಪಾಯಿ ಪಡೆಯಲಿದ್ದಾರೆ. ಸಲ್ಲದೇ ಉದಯೋನ್ಮುಖ ಆಟಗಾರ 20 ಲಕ್ಷ ರೂ. ಗಳಿಸಲಿದ್ದಾರೆ. ಈ ಋತುವಿನ ಅತ್ಯಂತ ಮೌಲ್ಯಯುತ ಆಟಗಾರ 12 ಲಕ್ಷ ರೂ.ಗಳನ್ನು ಗೆಲ್ಲಲಿದ್ದಾರೆ.
ಮಾತ್ರವಲ್ಲದೆ ಪವರ್ ಪ್ಲೇಯರ್ ಆಫ್ ದಿ ಸೀಸನ್, ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಮತ್ತು ಗೇಮ್ ಚೇಂಜರ್ ಆಫ್ ದಿ ಸೀಸನ್ ವಿಜೇತರು 15 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ.












Click it and Unblock the Notifications