DC Vs MI: ಐಪಿಎಲ್ ಪ್ಲೇ ಆಫ್ ನಾಲ್ಕನೇ ಸ್ಥಾನ ಅಲಂಕರಿಸಲಿರುವ ತಂಡ ಇದೇ ನೋಡಿ
IPL DC Vs MI: ಐಪಿಎಲ್ 2025ರ 63ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಈ ಹೈ ವೋಲ್ಟೇಜ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಲಿದ್ದು, ಯಾವ ತಂಡ ಪ್ಲೇ ಆಫ್ ನಾಲ್ಕನೇ ಸ್ಥಾನ ಖಚಿತಪಡಿಸಿಕೊಳ್ಳಲಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮೂರು ತಂಡಗಳು ಪ್ಲೇ ಆಫ್ ಅರ್ಹತೆ ಪಡೆದುಕೊಂಡಿವೆ. ಇನ್ನುಳಿದಂತೆ ನಾಲ್ಕನೇ ಸ್ಥಾನಕ್ಕಾಗಿ ಇಂದು ಡೆಲ್ಲಿ ಹಾಗೂ ಮುಂಬೈ ನಡುವೆ ಡು ಆರ್ ಡೈ ಪಂದ್ಯ ನಡೆಲಿದ್ದು, ಯಾವ ತಂಡ ಪ್ಲೇ ಆಫ್ ಚಾನ್ಸ್ ಗಿಟ್ಟಿಕೊಳ್ಳಬಹುದು ಎನ್ನುವ ಪ್ರಶ್ನೆ ತುಂಬಾ ಜನರಲ್ಲಿ ಮೂಡಿರುತ್ತದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ ತಿಳಿಯಿರಿ.

ಮುಂಬೈ ಪ್ಲೇ ಆಫ್ ಭವಿಷ್ಯ: ಮುಂಬೈ ಇಂಡಿಯನ್ಸ್ ಇಂಡಿಯನ್ಸ್ ತಂಡವಿ ಇದುವರೆಗೂ ಆಡಿದ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 5ರಲ್ಲಿ ಸೋಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 14 ಅಂಕಗಳೊಂದಿಗೆ ನಾಲ್ಕನೆ ಸ್ಥಾನದಲ್ಲಿದೆ. ಆದರೂ ಇದಕ್ಕೆ ಬಿಗ್ ಫೈಟ್ ನೀಡಲು ಕೆಳಗಿರುವ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಸಿದ್ಧತೆ ನಡೆಸಿದೆ. ಆದ್ದರಿಂದ ಮುಂಬೈ ಇಂದಿನ ಪಂದ್ಯದಲ್ಲಿ ಗೆಲ್ಲಲ್ಲೇಬೇಕಿದೆ. ಒಂದು ವೇಳೆ ಸೋತರೂ ಮತ್ತೊಂದು ಅವಕಾಶ ಇರುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಭವಿಷ್ಯ: ಡೆಲ್ಲಿ ಇದುವರೆಗೂ ಆಡಿದ 12 ಪಂದ್ಯಗಳಲ್ಲಿ6ರಲ್ಲಿ ಗೆದ್ದು, 5ರಲ್ಲಿ ಸೋಲು, ಒಂದು ಪಂದ್ಯ ರದ್ದಿನೊಂಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 13 ಅಂಕಗಳೊಂದಿದೆ 5ನೇ ಸ್ಥಾನದಲ್ಲಿದೆ. ಆದರೂ ಪ್ಲೇ ಆಫ್ ನಾಲ್ಕನೇ ಸ್ಥಾನಕ್ಕಾಗಿ ಉಳಿದ ಎರಡು ಪಂದ್ಯಗಳಲ್ಲೂ ಉತ್ತಮ ರನ್ ರೇಟ್‌ನೊಂದಿಗೆ ಗೆಲ್ಲಲ್ಲೇಬೇಕಿದೆ. ಇಲ್ಲದಿದ್ದರೆ ಐಪಿಎಲ್ ಟೂರ್ನಿಯಿಂದ ಹೊರಬೀಳುವುದಂತೂ ಖಚಿತ ಎನ್ನಲಾಗುತ್ತಿದೆ.
ಡೆಲ್ಲಿ ಒಂದು ಸೋತ್ರೂ ಔಟ್: ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ತಲಾ ಎರಡೆರಡು ಪಂದ್ಯಗಳಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಒಂದು ಪಂದ್ಯದಲ್ಲಿ ಸೋತು ಮತ್ತೊಂದರಲ್ಲಿ ಗೆದ್ದರೂ ಅವಕಾಶ ಇರುತ್ತದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಲೆಕ್ಕಾಚಾರ ಅಷ್ಟು ಸುಲಭವಾಗಿಲ್ಲ, ಎರಡು ಪಂದ್ಯಗಳಲ್ಲೂ ಉತ್ತಮ ರನ್ ರೇಟ್‌ನ ಮೂಲಕ ಗೆಲ್ಲಲ್ಲೇಬೇಕಿದೆ.
ಆರಂಭದಲ್ಲಿ ಎಡವಿದ ಮುಂಬೈ ಇಂಡಿಯನ್ಸ್ ಬಳಿಕ ಸತತ ಗೆಲುವುಗಳ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯಿಂದ ನಾಲ್ಕನೇ ಸ್ಥಾನದವರೆಗೂ ಬಂದು ತಲುಪಿದೆ. ಹಾಗಂತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡಮ್ಮಿ ಆಗಿದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಯಾಕೆಂದ್ರೆ ಆರಂಭದಿಂದಲೂ ಉತ್ತಮವಾಗಿ ಪ್ರದರ್ಶನ ತೋರುತ್ತಾ ಬಂದಿರುವ ತಂಡ ಇದಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲೂ ಕೂಡ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಉತ್ತಮವಾಗಿದ್ದು, ಒಂದು ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿ ಗೆಲುವು ಸಾಧಿಸಿದರೂ ಅಚ್ಚರಿಯಿಲ್ಲ ಅಂತಲೇ ಹೇಳಬಹುದು. ಯಾಕೆಂದ್ರೆ ಸತತ ಸೋಲಿನ ಸುಳಿಯಲ್ಲಿರುವುದರಿಂದ ಇಂದಿನ ಪಂದ್ಯದಲ್ಲಿ ಗೆದ್ದೇ ಗೆಲ್ಲಬೇಕೆನ್ನುವ ಹಠದಲ್ಲಿದೆ. ಮತ್ತೊಂದೆಡೆ ವಾಂಖೆಡೆಯಲ್ಲಿ ಕನ್ನಡಿಗ ಕೆಆರ್ ರಾಹುಲ್ ಚೆನ್ನಾಗಿ ಪಳಗಿದವರಾಗಿದ್ದು, ಅವರು ಸ್ಫೋಟಕ ಬ್ಯಾಟ್ ಬೀಸುವ ಸಾಧ್ಯತೆಯಿದ್ದು, ಈ ಮೂಲಕ ಮುಂಬೈ ಇಂಡಿಯನ್ಸ್ ಮಳುವಾದರೂ ಆಗಬಹುದು ಎಂದು ಹೇಳಲಾಗುತ್ತದೆ.
ಪ್ಲೇ ಆಫ್‌ಗೆ ಅರ್ಹತೆ ಪಡೆದ ತಂಡಗಳು
* ಗುಜರಾತ್ ಟೈಟಾನ್ಸ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಪಂಜಾಬ್ ಕಿಂಗ್ಸ್
ಮುಂಬೈ ಇಂಡಿಯನ್ಸ್ ತಂಡ: ರಿಯಾನ್ ರಿಕೆಲ್ಟನ್(ವಿ.ಕೀ.), ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಕಾರ್ಬಿನ್ ಬಾಷ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಸಮೀರ್ ರಿಝ್ವಿ, ಕೆಎಲ್ ರಾಹುಲ್ (ವಿ.ಕೀ), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಕುಲದೀಪ್ ಯಾದವ್, ಟಿ ನಟರಾಜನ್, ಮುಸ್ತಫಿಜುರ್ ರೆಹಮಾನ್.












Click it and Unblock the Notifications