IPL 2026 RCB: ಆರ್‌ಸಿಬಿಗೆ ಇಬ್ಬರು ಸ್ಟಾರ್ ಆಲ್‌ರೌಂಡರ್‌ಗಳ ಎಂಟ್ರಿ..
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಗ್ ಕಿಂಗ್ಸ್ ಮಣಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಗಮನ 19ನೇ ಸೀಸನ್‌ನತ್ತ ನೆಟ್ಟಿದ್ದು, ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಬ್ಬರು ಸ್ಟಾರ್ ಆಲ್‌ರೌಡರ್‌ಗಳನ್ನು ಕೊಂಡುಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದೆ. ಹಾಗಾದ್ರೆ, ಅವರು ಯಾರು ಹಾಗೂ ಈ ಹಿಂದೆ ಯಾವ ತಂಡದ ಪರ ಆಡಿದ್ದರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆರ್‌ಸಿಬಿ ಐಪಿಎಲ್ ಟ್ರೋಫಿ ಇಲ್ಲ ಎಂಬ ಕೊರಗನ್ನು 2025ರಲ್ಲಿ ನೀಗಿಸಿದೆ. ಈ ಬಾರಿ ಕಪ್ ಗೆಲ್ಲಲು ಪ್ರಮುಖ ಕಾರಣವೇ ತಂಡ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದು ಹಾಗೂ ದಿನೇಶ್ ಕಾರ್ತಿಕ್ ಅವರ ಉತ್ತಮ ಮಾರ್ಗದರ್ಶನ ಅಂದ್ರೆ ತಪ್ಪಾಗಲಾರದು.

ಪ್ರತಿ ಬಾರಿಯೂ ಕೊನೆವರೆಗೂ ಬಂದು ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ಎಡವಿ ಸೋಲನುಭವಿಸುತ್ತಲೇ ಬಂದಿತ್ತು. ಆದರೆ, ಈ ಬಾರಿ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು, ಎಲ್ಲಾ ತಂಡಗಳನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಯಿತು. ಅಷ್ಟರ ಮಟ್ಟಿಗೆ ಬಲಿಷ್ಠ ತಂಡವನ್ನು ಫ್ರಾಂಚೈಸಿ ಕಟ್ಟಿತ್ತು. ಮುಂದಿನ ಬಾರಿಗೂ ಬಹುತೇಕ ಕಳೆದ ಬಾರಿಯ ಆಟಗಾರರನ್ನೇ ಉಳಿಸಿಕೊಂಡಿದೆ.
ಉಳಿದಂತೆ ಉತ್ತಮ ಪ್ರದರ್ಶನ ತೋರದ ಹಾಗೂ ಬದಲಿಯಾಗಿ ತೆಗೆದುಕೊಂಡ ಆಟಗಾರರನ್ನು ಕೈಬಿಟ್ಟಿದೆ. ಇದೀಗ ಆರ್‌ಸಿಬಿ ಬಲಿಷ್ಠ ತಂಡವನ್ನು ಹೊಂದಿದೆ. ಮತ್ತಷ್ಟು ಬಲಿಷ್ಠಗೊಳಿಸಲು ಉಳಿದ ಹಣದಲ್ಲಿ ಇಬ್ಬರು ಆಲ್‌ರೌಂಡರ್‌ಗಳನ್ನು ಕೊಂಡುಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದೆ. ಹಾಗಾದ್ರೆ, ಯಾರನ್ನ ಕೊಂಡುಕೊಳ್ಳಬಹುದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಒಬ್ಬರು ಹೊರಗುಳಿದರೆ ಮತ್ತೊಬ್ಬರು ಆ ಸ್ಥಾನ ತುಂಬಬಲ್ಲ ಆಟಗಾರರನ್ನು ಆರ್‌ಸಿಬಿ ಹೊಂದಿದೆ. ಆದರೂ ಇಬ್ಬರು ಆಲ್‌ರೌಂಡರ್‌ಗಳು ಇರಲಿ ಎನ್ನುವ ಉದ್ದೇಶದಿಂದ ಕೆಕೆಆರ್ ಕೈಬಿಟ್ಟಿರುವ ವೆಂಕಟೇಶ್ ಅಯ್ಯರ್ ಹಾಗೂ ಸಿಎಸ್‌ಕೆಯಿಂದ ಹೊರಬಿದ್ದ ರಚಿನ್ ರವೀಂದ್ರ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಆರ್‌ಸಿಬಿ ಬಳಿ ಉಳಿದ ಹಣ 16.40 ಕೋಟಿ ರೂಪಾಯಿ. ಇದರಲ್ಲಿ ಇಬ್ಬರು ಆಲ್‌ರೌಂಡರ್‌ಗಳಿಗೆ ಗಾಳ ಹಾಕಲು ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.
ಪ್ರಸ್ತುತ ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ಜಾಕೋಬ್ ಬೆಥೆಲ್, ಅಭಿನಂದನ್ ಸಿಂಗ್, ಸ್ವಪ್ನಿಲ್ ಸಿಂಗ್, ರಸಿಖ್ ದಾರ್, ನುವಾನ್ ತುಷಾರ.
ರಚಿನ್ ರವೀಂದ್ರ: ಅದರಲ್ಲೂ ಈಗಾಗಲೇ ಕಳೆದ ಬಾರಿಯೇ ನಾನು ಆರ್‌ಸಿಬಿಗೆ ಹೋಗಲು ಸಿದ್ಧ ಎಂದು ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ ಅವರೇ ಸ್ವತಃ ಹೇಳಿಕೆ ಕೊಟ್ಟಿದ್ದರು. ಇನ್ನೂ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಬಿಡುಗಡೆಗೊಳಿಸಿದ್ದು, ಆರ್‌ಸಿಬಿ ಇದೇ ಚಾನ್ಸ್ ಎನ್ನುವಂತೆ ಮಿನಿ ಹರಾಜಿನಲ್ಲಿ ಅವರನ್ನು ಪಿಕ್ ಮಾಡುವ ಪ್ಲ್ಯಾನ್‌ನಲ್ಲಿದೆ.
ವೆಂಕಟೇಶ್ ಅಯ್ಯರ್: ಕಳೆದ ಬಾರಿ ನಡೆದ ಮೆಗಾ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ವೆಂಕಟೇಶ್ ಅಯ್ಯರ್ ಅವರನ್ನು 23.75 ರೂಪಾಯಿಗಳಿಗೆ ಖರೀದಿಸಿತ್ತು. ಈ ಮೂಲಕ ಐಪಿಎಲ್‌ನಲ್ಲಿ ಅತ್ಯಂತ ದುಬಾರಿ ಆಲ್‌ರೌಂಡರ್ ಆಗಿದ್ದರು. ಆದರೆ, ಕಳೆದ ಆವೃತ್ತಿಯಲ್ಲಿ ವೇಳೆ ವೆಂಕಟೇಶ್ ಅವರು ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಕೈಬಿಟ್ಟಿತು. ಇದೀಗ ಅವರ ಮೇಲೆ ಆರ್‌ಸಿಬಿ ಕಣ್ಣಟ್ಟಿದೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ತಂಡಕ್ಕೆ ಬಂದರೆ, ಮತ್ತಷ್ಟು ಬಲ ಹೆಚ್ಚಿದಂತಾಗಲಿದೆ.












Click it and Unblock the Notifications