Sanju Samson: ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸಿಎಸ್‌ಕೆಗೆ ಸೇರ್ಪಡೆ?
IPL 2026 CSK: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು 17 ವರ್ಷಗಳ ಬಳಿಕ ಮೊದಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದೀಗ ಇದರ ಬೆನ್ನಲ್ಲೇ ಚೈನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೊಸ ನಾಯಕನ ಆಯ್ಕೆ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಾದ್ರೆ ಅವರು ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2010, 2011, 2018, 2021 ಮತ್ತು 2023 ಒಟ್ಟು 5 ಬಾರಿ ಐಪಿಎಲ್ ಟ್ರೋಫಿಗಳನ್ನು ಗೆದ್ದಕೊಂಡಿದೆ. ಬಳಿಕ 2024 ಹಾಗೂ 2025ನೇ ಆವೃತ್ತಿಗೆ ರುತುರಾಜ್ ಗಾಯಕ್ವಾಡ್ ಅವರನ್ನೇ ನಾಯಕನಾಗಿ ಆಯ್ಕೆ ಮಾಡಲಾಯಿತು. 2025ರ ಕೊನೆಯಲ್ಲಿ ಮತ್ತೆ ಧೋನಿ ಅವರನ್ನೇ ಈ ಸ್ಥಾನಕ್ಕೆ ಮರಳಿ ತರಲಾಯಿತು. ಆದರೆ, 2026ರ ಆವೃತ್ತಿಯಿಂದ ಮತ್ತೆ ಹೊಸ ನಾಯಕ ಆಯ್ಕೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಇದೀಗ ಹರಿದಾಡುತ್ತಿರುವ ವೈರಲ್ ಮಾಹಿತಿ ಪ್ರಕಾರ, ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಆಟಗಾರನನ್ನು 2026ಕ್ಕೆ ಸಿಎಸ್‌ಕೆ ತಂಡದ ನಾಯಕನಾಗಿ ಮಾಡಲಾಗುತ್ತದೆ. ಅವರು ಬೇರೆ ಯಾರು ಅವರು ಅಲ್ಲ, ಆರ್‌ಆರ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್. ಹಾಗಾದ್ರೆ ಅವರು ರಾಜಸ್ಥಾನ್ ತಂಡವನ್ನು ತೊರೆದ್ರಾ ಎನ್ನುವ ಪ್ರಶ್ನೆ ಬಹುತೇಕರಲ್ಲಿ ಮೂಡಿರುತ್ತದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ಧಾರೆ. ಅವರು 2021ರಿಂದ ಆರ್‌ಆರ್ ತಂಡಕ್ಕೆ ನಾಯಕರಾಗಿದ್ದಾರೆ. ಆದರೆ, ಮುಂದಿನ ಸೀಸನ್‌ನಿಂದ ಎಂಎಸ್ ಧೋನಿ ಅವರನ್ನು ಕೆಳಗಿಳಿಸಿ ಸಿಎಸ್‌ಕೆ ತಂಡದ ನಾಯಕನಾಗಿ ಆಯ್ಕೆ ಮಾಡಬಹುದು ಎನ್ನುವ ವದಂತಿಗಳು ಹರಿದಾಡುತ್ತಿವೆ.
ಸಂಜು ಸ್ಯಾಮ್ಸನ್ ಐಪಿಎಲ್‌ನ 10ರಲ್ಲಿ 8 ಸೀಸನ್‌ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ. 2021ರಿಂದ ತಂಡಕ್ಕೆ ನಾಯಕರಾಗಿದ್ದಾರೆ. ಆದರೆ, ಮುಂದಿನ ಬಾರಿ 2026ರಿಂದ ಸಿಎಸ್‌ಕೆ ಸೇರ್ಪಡೆಯಾಗಲಿದ್ದು, ಅಲ್ಲಿ ನಾಯಕತ್ವ ಸ್ಥಾನ ಅಲಂಕರಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಅಲ್ಲದೆ, ಈ ವಿಚಾರ ಅಭಿಮಾನಿಗಳಲ್ಲಿ ಗೊಂದಲವನ್ನು ಸೃಷ್ಟಿದೆ.
2025ರ ಋತುವಿನಲ್ಲಿ ರಾಹುಲ್ ದ್ರಾವಿಡ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಬಿರುಕು ಉಂಟಾಗಿದ್ದು, ಆಗಿನಿಂದ ಸಂಜು ತಂಡ ತೊರೆಯುವ ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿದ್ದವು. ಇನ್ನು ಇದೀಗ ತಂಡದಲ್ಲಿ ಆರಂಭಿಕ ಬ್ಯಾಟರ್ ಸ್ಥಾನಕ್ಕೆ ವೈಭವ್ ಸೂರ್ಯವಂಶಿ ಹೊಂದಿಕೊಂಡಿದ್ದು, ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಅಥವಾ ಪರಾಗ್ ನಾಯಕತ್ವದ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ.
ಇವೆಲ್ಲದರ ಬೆಳವಣಿಗೆ ನಡುವೆ 30 ವರ್ಷದ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರ್ಪಡೆಯಾಗುವ ಬಗ್ಗೆ ಸುಳಿವಿನ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದರಿಂದಲೇ ಗೊತ್ತಾಗುತ್ತದೆ 2026ರ ಐಪಿಎಲ್‌ನಿಂದ ಅವರು ಆರ್‌ಆರ್ ತೊರೆಯಲಿದ್ದಾರೆ ಎಂದು.
ಒಂದು ವೇಳೆ ಸ್ಯಾಮ್ಸನ್ ಸಿಎಸ್‌ಕೆ ತಂಡ ಸೇರಿಕೊಂಡರೆ, ರುತುರಾಜ್ ಗಾಯಕ್ವಾಡ್ ಮತ್ತು ಆಯುಷ್ ಮ್ಹಾತ್ರೆ ಬಳಿಕ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಅಷ್ಟೇ ಅಲ್ಲದೆ, ಸಂಜು ವಿಕೆಟ್ ಕೀಪಿಂಗ್ ಸಹ ಮಾಡುತ್ತಾರೆ. ಈ ಹಿನ್ನೆಲೆ ಎಂಎಸ್ ಧೋನಿ ನಿವೃತ್ತರಾಗುವ ಸಾಧ್ಯತೆಯಿದೆಯೂ ಇರುತ್ತದೆ ಎಂದು ಹೇಳಲಾಗುತ್ತದೆ.












Click it and Unblock the Notifications