ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗೆಲುವಿಗಾಗಿ ಸಿಎಸ್‌ಕೆ ಪ್ರಾರ್ಥನೆ
CSK IPL 2026: ಐಪಿಎಲ್ 2026ರ ಪ್ಲೇ-ಆಫ್ ರೇಸ್ ಈಗ ಕುತೂಹಲಕಾರಿಯಾಗಿದ್ದು, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭವಿಷ್ಯ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಮೇಲೆ ಡಿಫೆಂಡ್ ಆಗಿದೆ. ಹಾಗಾದ್ರೆ ಇದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇನ್ನು ಕೇವಲ ಎರಡು ಲೀಗ್ ಪಂದ್ಯಗಳು ಬಾಕಿ ಇವೆ. ತಂಡವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಆಡಬೇಕಿದೆ. ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿರಲು ಸಿಎಸ್‌ಕೆ ಈ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು. ಆಗ ತಂಡದ ಒಟ್ಟು ಅಂಕ 16ಕ್ಕೆ ಏರುತ್ತದೆ. ವಿಚಿತ್ರವೆಂದರೆ ಸಿಎಸ್‌ಕೆ ಪ್ಲೇಆಫ್ ತಲುಪಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಮೇಲೆ ಅವಲಂಬಿತವಾಗಬೇಕಿದೆ.

ಆರ್‌ಸಿಬಿ ಗೆಲುವಿಗಾಗಿ ಕಾದು ಕುಳಿದ ಸಿಎಸ್‌ಕೆ
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಮ್ಮ ಮುಂದಿನ ಪಂದ್ಯಗಳನ್ನು ಆರ್‌ಸಿಬಿ ವಿರುದ್ಧ ಆಡಲಿವೆ. ಈ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದರೆ ಅದು ಸಿಎಸ್‌ಕೆ ತಂಡಕ್ಕೆ ವರದಾನವಾಗಲಿದೆ. ಏಕೆಂದರೆ ಇದರಿಂದ ಎಸ್‌ಆರ್‌ಹೆಚ್ ಮತ್ತು ಪಂಜಾಬ್ ತಂಡಗಳ ಪಾಯಿಂಟ್ಸ್ ಹೆಚ್ಚಾಗದಂತೆ ತಡೆಯಬಹುದು.
ಸಿಎಸ್‌ಕೆ ಪ್ಲಾನ್ ಏನು?
ಪಂಜಾಬ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತರೆ ಅವರು ಕೊನೆಯ ಪಂದ್ಯ ಗೆದ್ದರೂ ಕೇವಲ 15 ಅಂಕಗಳನ್ನಷ್ಟೇ ಪಡೆಯಲು ಸಾಧ್ಯ. ಆಗ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎಸ್‌ಆರ್‌ಎಚ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳನ್ನು ಸೋಲಿಸಿದರೆ 16 ಅಂಕಗಳೊಂದಿಗೆ ಸುಲಭವಾಗಿ ಟಾಪ್-4 ಹಂತಕ್ಕೆ ಲಗ್ಗೆ ಇಡಬಹುದು.
ಸಿಎಸ್‌ಕೆ ಪ್ಲೇ-ಆಫ್ ಅದೃಷ್ಟ ಆರ್‌ಸಿಬಿ ಕೈಯಲ್ಲಿ
ಸಿಎಸ್‌ಕೆ ಪಾಲಿಗೆ ಕೇವಲ ತನ್ನ ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೆ, ಎಸ್‌ಆರ್‌ಹೆಚ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯಗಳ ಫಲಿತಾಂಶವೂ ಮುಖ್ಯವಾಗಿದೆ. ಆದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ-ಆಫ್ ಅದೃಷ್ಟ ಈಗ ಬೆಂಗಳೂರು ತಂಡದ ಕೈಯಲ್ಲಿದೆ ಎನ್ನಬಹುದು. ಸಿಎಸ್‌ಕೆ ಅಭಿಮಾನಿಗಳು ಈಗ ತಮ್ಮ ತಂಡದ ಗೆಲುವಿನ ಜೊತೆಗೆ ಆರ್ಸಿಬಿಯ ಯಶಸ್ಸಿಗೂ ಪ್ರಾರ್ಥಿಸಬೇಕಾದ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿದೆ.
ಎಲ್‌ಎಸ್‌ಜಿ ವ ವಿರುದ್ಧ ಸಿಎಸ್‌ಕೆ ಹೀನಾಯ ಸೋಲು
ಎಲ್‌ಎಸ್‌ಜಿ ವ ವಿರುದ್ಧದ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಆದ್ದರಿಂದ ಇದೀಗ ರುತುರಾಜ್ ಗಾಯಕ್ವಾಡ್ ಪಡೆಯ ಪ್ಲೇ-ಆಫ್ ಭವಿಷ್ಯ ಈಗ ಕೇವಲ ಅವರ ಕೈಯಲ್ಲಿ ಮಾತ್ರ ಉಳಿದಿಲ್ಲ. ಬದಲಾಗಿ ರಾಯಲ್ ಚಾಲೆಂಜರ್ಸ್ ಗೆಲುವುಗಳ ಮೇಲೆ ಅವಲಂಬಿತವಾಗಿದೆ.
ಸಿಎಸ್‌ಕೆ ಪ್ಲೇ-ಆಫ್ ಲೆಕ್ಕಾಚಾರ
ಸಿಎಸ್‌ಕೆ ಕಳೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸೋಲನುಭಿಸಿದ ನಂತರ ತಂಡದ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ. ಪ್ರಸ್ತುತ ಸಿಎಸ್‌ಕೆಯು ಆಡಿದ 12 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಒಟ್ಟು 12 ಅಂಕಗಳನ್ನು ಪಡೆದು +0.027 ರನ್ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ಗೆ ಇನ್ನು ಕೇವಲ ಎರಡು ಲೀಗ್ ಹಂತದ ಪಂದ್ಯಗಳು ಮಾತ್ರ ಬಾಕಿಯಿವೆ. ಪ್ಲೇಆಫ್ ತಲುಪಲು ಈ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ಈ ಎರಡರಲ್ಲೂ ಗೆದ್ದರೆ ಮಾತ್ರ ತಂಡಕ್ಕೆ ಒಟ್ಟು 16 ಪಾಯಿಂಟ್ಸ್‌ಗಳು ಬರಲಿವೆ. ಮತ್ತೊಂದೆಡೆ ಆರ್‌ಸಿಬಿ ಮುಂದಿನ ಎರಡೂ ಪಂದ್ಯಗಳಲ್ಲಿ ಗೆದ್ದರೆ ಸಿಎಸ್‌ಕೆಗೆ ಹೆಚ್ಚು ಅನುಕೂಲ ಆದಂತಾಗಲಿದೆ.
ಒಟ್ಟಿನಲ್ಲಿ ಹೇಳುವುದಾದರೆ ಪಂಜಾಬ್ ಹಾಗೂ ಎಸ್‌ಆರ್‌ಎಚ್ ತಂಡಗಳು ಮುಂದಿನ ಪಂದ್ಯಗಳನ್ನು ಗೆದ್ದುಕೊಂಡರೆ ಕ್ರಮವಾಗಿ 18 ಮತ್ತು 17 ಅಂಕಗಳನ್ನು ಪಡೆಯಲಿವೆ. ಆದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲ್ಲುವಿಗಾಗಿ ಪ್ರಾರ್ಥಿಸುತ್ತಿದೆ. ಸಿಎಸ್‌ಕೆ ಅಭಿಮಾನಿಗಳು ಸಹ ಈ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಗೆಲುವು ಸಾಧಿಸಲು ಎಂದು ದೇವರಲ್ಲಿ ಬೇಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.












Click it and Unblock the Notifications