IPL 2026 Final: ಪ್ರಕೃತಿ ಒಲಿದರೆ ಕ್ವಾಲಿಫೈಯರ್ 1 ಪಂದ್ಯ ಆಡದಿದ್ದರೂ ಆರ್‌ಸಿಬಿ ಫೈನಲ್‌ ಎಂಟ್ರಿ ಗ್ಯಾರಂಟಿ

RCB IPL 2026 Final: ಐಪಿಎಲ್‌ 2026ರ ಸೀಸನ್‌ನ ಮೊದಲ ಕ್ವಾಲಿಫೈಯರ್ ಪಂದ್ಯ ಮಂಗಳವಾರ (ಮೇ 26) ನಡೆಯಲಿದೆ. ಈ ರೋಚಕ ಸಮರದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಆಡದೇ ಆರ್‌ಸಿಬಿಗೆ ಫೈನಲ್‌ ಟಿಕೆಟ್ ಪಡೆಯುವ ಅವಕಾಶ ಇದೆ. ಹಾಗಾದ್ರೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಧರ್ಮಶಾಲಾದ ನಡೆಯಲಿರುವ ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಫೈನಲ್ ಪ್ರವೇಶಕ್ಕಾಗಿ ಹೋರಾಟ ನಡೆಸಲಿವೆ. ಎರಡೂ ತಂಡಗಳು ಲೀಗ್ ಹಂತದ 14 ಪಂದ್ಯಗಳಲ್ಲಿ 9ರಲ್ಲಿ ಗೆದ್ದು ತಲಾ 18 ಅಂಕಗಳೊಂದಿಗೆ ಪ್ಲೇ-ಆಫ್ ಪ್ರವೇಶಿಸಿವೆ. ಆದರೂ ಉತ್ತಮ ನೆಟ್ ರನ್-ರೇಟ್ ಹೊಂದಿರುವ ಕಾರಣ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಜಿಟಿ ತಂಡವನ್ನು ಹಿಂದಿಕ್ಕಿದೆ.

IPL 2026 How RCB Can Reach Final Without Playing Qualifier 1 Against Gujarat Titans on May 26

ಶೇಕಡಾ 80ರಷ್ಟು ಮಳೆ ಸಾಧ್ಯತೆ

ಆದರೆ ಎಸ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ರೋಚಕ ಹಣಾಹಣಿಗೆ ಮಳೆ ಅಡ್ಡಿಪಡಿಸುವ ಆತಂಕ ಎದುರಾಗಿದೆ. ಟಾಸ್‌ಗಿಂತ ಮುಂಚಿತವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಕ್ಯುವೆದರ್ ಮುನ್ಸೂಚನೆಯ ಪ್ರಕಾರ ಧರ್ಮಶಾಲಾದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಶೇಕಡಾ 80 ರಷ್ಟು ಇದೆ.

ಮಳೆ ಅಡ್ಡಿಯಾದ್ರೆ ಮುಂದಿನ ನಿರ್ಧಾರವೇನು?

ಐಪಿಎಲ್ ನಿಯಮಗಳ ಪ್ರಕಾರ, ಮಳೆಯ ಕಾರಣದಿಂದ ಪೂರ್ಣ ಪ್ರಮಾಣದ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಿದ್ದರೆ. ವಿಜೇತರನ್ನು ನಿರ್ಧರಿಸಲು ಅಂಪೈರ್‌ಗಳು ಪಂದ್ಯದ ಓವರ್‌ಗಳನ್ನು ಕಡಿತಗೊಳಿಸಬಹುದು. ಒಂದು ವೇಳೆ ಕನಿಷ್ಠ ಓವರ್‌ಗಳ ಆಟವೂ ಸಾಧ್ಯವಾಗದಿದ್ದಲ್ಲಿ, ಸೂಪರ್ ಓವರ್ ನಡೆಸುವ ಮೂಲಕ ಫಲಿತಾಂಶವನ್ನು ಘೋಷಿಸುವ ಸಾಧ್ಯತೆ ಕೂಡ ಇರುತ್ತದೆ.

ಪಂದ್ಯ ಆಡದೆಯೂ ಆರ್‌ಸಿಬಿ ಫೈನಲ್‌ ಪ್ರವೇಶ ಹೇಗೆ?

ಆದರೆ ಮಳೆಯಿಂದಾಗಿ ಪಂದ್ಯವು ಸಂಪೂರ್ಣವಾಗಿ ರದ್ದಾದರೆ ಆರ್‌ಸಿಬಿ ತಂಡವು ನೇರವಾಗಿ ಫೈನಲ್‌ ಟಿಕೆಟ್‌ ಪಡೆಯಲಿದೆ. ಏಕೆಂದರೆ ಲೀಗ್ ಹಂತದ ಅಂಕಪಟ್ಟಿಯಲ್ಲಿ ಉತ್ತಮ ನೆಟ್ ರನ್-ರೇಟ್ ಹೊಂದಿರುವ ಕಾರಣ ಆರ್‌ಸಿಬಿ ಗುಜರಾತ್ ಟೈಟಾನ್ಸ್‌ಗಿಂತ ಮೇಲಿನ ಸ್ಥಾನದಲ್ಲಿದೆ. ಐಪಿಎಲ್ ನಿಯಮದಂತೆ ಕ್ವಾಲಿಫೈಯರ್ 1 ಎಲಿಮಿನೇಟರ್ ಅಥವಾ ಕ್ವಾಲಿಫೈಯರ್ 2 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರುವುದಿಲ್ಲ. ಆದ್ದರಿಂದ ಪಂದ್ಯ ನಡೆಯದೆ ರದ್ದಾದರೆ ಲೀಗ್ ಹಂತದ ಅಂಕಪಟ್ಟಿಯಲ್ಲಿ ಯಾವ ತಂಡವು ಅಗ್ರ ಸ್ಥಾನದಲ್ಲಿರುತ್ತದೆಯೋ ಆ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ.

ಈ ಸೀಸನ್‌ನಲ್ಲಿ ಇವೆರಡೂ ತಂಡಗಳು ಮುಖಾಮುಖಿಯಾದಾಗ ತಲಾ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಅಂತರದ ಸಮಬಲ ಸಾಧಿಸಿವೆ. ಇನ್ನು ಐಪಿಎಲ್ ಇತಿಹಾಸದ ಒಟ್ಟಾರೆ ದಾಖಲೆಯನ್ನು ಗಮನಿಸಿದರೆ, ಅಲ್ಲಿಯೂ 4-4 ಗೆಲುವುಗಳೊಂದಿಗೆ ಸಮಬಲದ ಹೋರಾಟ ನಡೆಸಿವೆ. ಈಗ ಎರಡೂ ತಂಡಗಳು ಸಹ ಎರಡನೇ ಐಪಿಎಲ್ ಟ್ರೋಫಿಯ ಹುಡುಕಾಟದಲ್ಲಿವೆ. ಹಾಲಿ ಚಾಂಪಿಯನ್ ಆರ್‌ಸಿಬಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದರೆ, ಗುಜರಾತ್ ಟೈಟಾನ್ಸ್ 2022ರ ತಮ್ಮ ಚೊಚ್ಚಲ ಸೀಸನ್‌ನಲ್ಲಿ ಸಾಧಿಸಿದ ಚಾಂಪಿಯನ್ ಪಟ್ಟವನ್ನು ಮರಳಿ ಪಡೆಯುವ ಭರವಸೆಯಲ್ಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಮಳೆಯಿಂದ ಪೂರ್ಣ ಪ್ರಮಾಣದ ಪಂದ್ಯ ರದ್ದಾದ್ರೆ ಮಾತ್ರ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶ ಪಡೆಯಲಿದೆ. ಗುಜರಾತ್ ಟೈಟಾನ್ಸ್ ತಂಡಕ್ಕೆ ಇನ್ನೊಂದು ಅವಕಾಶ ಇರಲಿದ್ದು, ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಕ್ವಾಲಿಫೈಯರ್ 2ನಲ್ಲಿ ಆಡಬಹುದು. ಎಲಿಮಿನೇಟರ್ ಪಂದ್ಯವು ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ನಡುವೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+