IPL 2026: ಐಪಿಎಲ್ ಹಬ್ಬ ಆರಂಭಕ್ಕೂ ಮುನ್ನ 10 ಫ್ರಾಂಚೈಸಿಗಳಿಗೂ ಬಿಸಿಸಿಐ ಕಟ್ಟುನಿಟ್ಟಿನ ಮಾರ್ಗಸೂಚಿಗಳು
IPL 2026: ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹಾಗಾದ್ರೆ, ಅವುಗಳಲ್ಲಿ ಏನೆಲ್ಲಾ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಸಿಸಿಐ ಹೊರಡಿಸಿದ ಮಾರ್ಗಸೂಚಿಗಳು
ಐಪಿಎಲ್ 2026ರ ಸಿದ್ಧತೆಗಳ ಭಾಗವಾಗಿ ಹೊರಡಿಸಲಾಗಿರುವ ಈ ಹೊಸ ಮಾರ್ಗಸೂಚಿಗಳ ಅನ್ವಯ, ಯಾವುದೇ ಐಪಿಎಲ್ ತಂಡವು ಎದುರಾಳಿ ತಂಡ ಅಭ್ಯಾಸ ನಡೆಸಿದ ಅದೇ ಪಿಚ್ ಅಥವಾ ನೆಟ್ಸ್ ಅನ್ನು ಬಳಸುವಂತಿಲ್ಲ. ಪ್ರತಿಯೊಂದು ತಂಡದ ಅಭ್ಯಾಸದ ಅವಧಿಗೂ ಹೊಸ ನೆಟ್ಸ್ಗಳನ್ನು ಒದಗಿಸಬೇಕು ಎಂದು ಬಿಸಿಸಿಐ ತಿಳಿಸಿದೆ ಅಂತಾ ವರದಿಯಾಗಿದೆ.

* ಅಭ್ಯಾಸ ಮಾಡುವ ಸಂದರ್ಭಗಳಲ್ಲಿ, ಮೊದಲ ತಂಡವು ಬಳಸಿದ ನೆಟ್ಸ್ ಅನ್ನು ಮತ್ತೊಂದು ತಂಡ ಬಳಸಲು ಅವಕಾಶವಿಲ್ಲ. ಒಂದು ತಂಡವು ನಿಗದಿತ ಸಮಯಕ್ಕಿಂತ ಮೊದಲೇ ಅಭ್ಯಾಸ ಮುಗಿಸಿದರೆ, ಆ ಪಿಚ್ ಅನ್ನು ಬಳಸಲು ಇನ್ನೊಂದು ತಂಡಕ್ಕೆ ಅನುಮತಿ ಇರುವುದಿಲ್ಲ ಎಂದು ತಿಳಿಸಿದೆ.
10 ಫ್ರಾಂಚೈಸಿಗಳಿಗೆ ಕಟ್ಟಿನಿಟ್ಟಿನ ಸೂಚನೆಗಳು
* ಒಂದು ತಂಡವು ಫ್ಲಡ್ಲೈಟ್ಸ್ನಲ್ಲಿ ಅಭ್ಯಾಸ ಪಂದ್ಯವನ್ನು ಆಡಲು ಬಯಸಿದರೆ, ಆ ಪಂದ್ಯದ ಅವಧಿಯು ಮೂರೂವರೆ ಗಂಟೆಗಳಿಗಿಂತ ಹೆಚ್ಚಿರಬಾರದು ಎಂದು ಬಿಸಿಸಿಐ ತನ್ನ ನಿರ್ದೇಶನದಲ್ಲಿ ತಿಳಿಸಿದೆ.
* ತಂಡಗಳು ಗರಿಷ್ಠ ಎರಡು ಅಭ್ಯಾಸ ಪಂದ್ಯಗಳನ್ನು ಆಡಬಹುದು, ಆದರೆ ಅದಕ್ಕೂ ಮುನ್ನ ಅವರು ಬಿಸಿಸಿಐಗೆ ಮಾಹಿತಿ ನೀಡಬೇಕು. ಅಲ್ಲದೆ, ಈ ಪಂದ್ಯಗಳನ್ನು ಮುಖ್ಯ ಪಂದ್ಯಕ್ಕಾಗಿ ಬಳಸಲಾಗುವ ಪಿಚ್ ಮೇಲೆ ನಡೆಸುವಂತಿಲ್ಲ.
* ಸೀಸನ್ಗಾಗಿ ಪಿಚ್ ಅನ್ನು ಸಿದ್ಧಪಡಿಸುವ ಉದ್ದೇಶದಿಂದ, ಸಂಬಂಧಿತ ಫ್ರಾಂಚೈಸಿಯ ಮೊದಲ ತವರು ಪಂದ್ಯಕ್ಕೆ ಮುನ್ನ ನಾಲ್ಕು ದಿನಗಳ ಅವಧಿಯಲ್ಲಿ ಮುಖ್ಯ ಮೈದಾನದ ಪಿಚ್ ಮೇಲೆ ಯಾವುದೇ ಅಭ್ಯಾಸ ಪಂದ್ಯಗಳನ್ನು ನಡೆಸಲು ಅನುಮತಿ ಇರುವುದಿಲ್ಲ. ಈ ಅವಧಿಯಲ್ಲಿ, ತವರು ಫ್ರಾಂಚೈಸಿ ಮನವಿ ಮಾಡಿದಲ್ಲಿ, ರಾಜ್ಯ ಕ್ರಿಕೆಟ್ ಸಂಸ್ಥೆಯು ಅವರಿಗೆ ಯಾವುದೇ ಶುಲ್ಕವಿಲ್ಲದೆ ಪರ್ಯಾಯ ಅಭ್ಯಾಸ ಮೈದಾನವನ್ನು ಒದಗಿಸಬೇಕು.
* ಎರಡು ತಂಡಗಳಿಗೆ ಅಭ್ಯಾಸಕ್ಕಾಗಿ ತಲಾ ಎರಡು ನೆಟ್ಸ್ಗಳನ್ನು ನೀಡಲಾಗುತ್ತದೆ. ಜೊತೆಗೆ ರೇಂಜ್ ಹಿಟ್ಟಿಂಗ್ಗಾಗಿ ಮುಖ್ಯ ಮೈದಾನದಲ್ಲಿ ಒಂದು ನೆಟ್ ಅನ್ನು ಮೀಸಲಿಡಲಾಗುವುದು. ಅಭ್ಯಾಸದ ವೇಳಾಪಟ್ಟಿಯ ಕುರಿತು ಯಾವುದೇ ವಿವಾದ ಉಂಟಾದಲ್ಲಿ, ಅತಿಥಿ ತಂಡಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
* ತವರು ತಂಡವು ತಮಗೆ ಅನುಕೂಲಕರವಾದ ಅಭ್ಯಾಸದ ಸಮಯವನ್ನು ಮೊದಲೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದರೂ, ಅತಿಥಿ ತಂಡದ ಮನವಿಗಳನ್ನು ಪರಿಗಣಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ, ಅತಿಥಿ ತಂಡವು ಹಿಂದಿನ ದಿನವೇ ಪಂದ್ಯ ಆಡಿದ್ದರೆ ಮತ್ತು ಅವರ ಪ್ರಯಾಣದ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
-
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಮೈದಾನಕ್ಕೆ ಬರ್ತಾರಾ ಆರ್ಸಿಬಿ ಅಭಿಮಾನಿಗಳ ಹೊಸ ಕ್ರಶ್ ಬಿರ್ಲಾ ಕುಡಿ ಅನನ್ಯಾ?; ಕಾವ್ಯಾ ಮಾರನ್ ಬಗ್ಗೆ ಹೊಸ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
IPL 2026 Full Schedule: ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿ ಪ್ರಕಟ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಕ್ರಿಕೆಟ್ ಆಟ, ಬೆಟ್ಟಿಂಗ್ ದಂಧೆ, ಜೂಜಿನ ಮಜಾ ಇದೇ ಮಾರ್ಚ್ 28ರಿಂದ ಪ್ರಾರಂಭ: ವಿವೇಕಾನಂದ ಎಚ್.ಕೆ. ಮಹತ್ವದ ಸಂದೇಶ -
IPL Free VIP Tickets: ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ










Click it and Unblock the Notifications