ಐಪಿಎಲ್ 2026: ಆರ್‌ಸಿಬಿ-ಎಸ್‌ಆರ್‌ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ
RCB Vs SRH Match: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ 2026 ಹಬ್ಬ ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಹಾಗಾದ್ರೆ, ಪಂದ್ಯದ ಸಮಯ, ನೇರಪ್ರಸಾರ, ಸ್ಥಳ, ಆಟಗಾರರ ಬಲಾಬಲವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2025ರಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿರುವ ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ, ಈ ಬಾರಿ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಹಾಲಿ ಚಾಂಪಿಯನ್ ತಂಡವು ಬಲಿಷ್ಠ ಬ್ಯಾಟಿಂಗ್ ಲೈನಪ್ ಅನ್ನು ಹೊಂದಿದೆ. ಇದರಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಮತ್ತು ಜೇಕಬ್ ಬೆಥೆಲ್ ಅವರಂತಹ ಪ್ರಮುಖ ಆಟಗಾರರು ತಂಡದ ಶಕ್ತಿಯಾಗಿದ್ದಾರೆ.

ಬೌಲಿಂಗ್ ವಿಭಾಗಕ್ಕೆ ಹೊಡೆತ
ಆದರೆ, ತಂಡದ ಪ್ರಮುಖ ಬೌಲರ್ ಯಶ್ ದಯಾಳ್ ಪಂದ್ಯದಿಂದ ಹೊರಗುಳಿದಿರುವುದು ಮತ್ತು ಜೋಶ್ ಹ್ಯಾಜಲ್‌ವುಡ್ ಇನ್ನೂ ಸಂಪೂರ್ಣ ಫಿಟ್ನೆಸ್ ಆಗದಿರುವುದು ಆರ್‌ಸಿಬಿ ಬೌಲಿಂಗ್ ವಿಭಾಗಕ್ಕೆ ಹೊಡೆತ ಬಿದ್ದಂತಾಗಿದೆ. ರನ್ ಮಳೆ ಹರಿಯುವ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಇಬ್ಬರು ಮಾರಕ ಬೌಲರ್‌ಗಳ ಅನುಪಸ್ಥಿತಿಯು ಆರ್‌ಸಿಬಿಯ ವೇಗದ ಬೌಲಿಂಗ್ ವಿಭಾಗದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಲಿದೆ ಎಂದರೆ ತಪ್ಪಾಗಲಾರದು.
ಮತ್ತೊಂದೆಡೆ, ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲೂ ಕೂಡ ಸಮಸ್ಯೆಗಳಿವೆ. ತಂಡವು ಮತ್ತೊಮ್ಮೆ ಬಲಿಷ್ಠ ಬ್ಯಾಟಿಂಗ್ ಲೈನಪ್ ಅನ್ನು ಹೊಂದಿದ್ದರೂ, ನಾಯಕ ಪ್ಯಾಟ್ ಕಮ್ಮಿನ್ಸ್ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿರುವುದು ಅವರ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಇಶಾನ್ ಕಿಶನ್ ಮುಂದಿದೆ ದೊಡ್ಡ ಸವಾಲು
2025ರಲ್ಲಿ ಜಾರ್ಖಂಡ್ ತಂಡವನ್ನು ಚೊಚ್ಚಲ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಇಶಾನ್ ಕಿಶನ್ ಅವರಿಗೆ, ತಂಡದ ಮ್ಯಾನೇಜ್‌ಮೆಂಟ್ ತಾತ್ಕಾಲಿಕ ನಾಯಕನ ಜವಾಬ್ದಾರಿಯನ್ನು ನೀಡಿದೆ. ಆದರೆ, ನಾಯಕನಾಗಿ ಅವರ ಮುಂದಿರುವ ದೊಡ್ಡ ಸವಾಲೆಂದರೆ, ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್ ಪಡೆಯ ವಿರುದ್ಧ ತಮ್ಮಲ್ಲಿರುವ ಬೌಲಿಂಗ್ ಆಯ್ಕೆಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ ಎಂಬುದು.
ಆರ್‌ಸಿಬಿ vs ಎಸ್‌ಆರ್‌ಹೆಚ್ ಮುಖಾಮುಖಿ ದಾಖಲೆಗಳು
* ಒಟ್ಟು ಆಡಿದ ಪಂದ್ಯಗಳು: 25
* ಆರ್‌ಸಿಬಿ ಗೆಲುವು: 11
* ಎಸ್‌ಆರ್‌ಹೆಚ್ ಗೆಲುವು: 13
* ಫಲಿತಾಂಶವಿಲ್ಲದ ಪಂದ್ಯ: 1
ಈ ಅಂಕಿಅಂಶಗಳ ಪ್ರಕಾರ, ಸನ್ ರೈಸರ್ಸ್ ಹೈದರಾಬಾದ್ ತಂಡವು ಸ್ವಲ್ಪ ಮೇಲುಗೈ ಸಾಧಿಸಿದ್ದರೂ, ಕಳೆದ ಸೀಸನ್‌ನ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ತವರು ಮೈದಾನದಲ್ಲಿ ದಾಖಲೆಯನ್ನು ಸರಿಗಟ್ಟುವ ಗುರಿ ಹೊಂದಿದೆ. ಆದ್ದರಿಂದ ಎಸ್‌ಆರ್‌ಎಚ್‌ನಲ್ಲಿ ಇಶಾನ್ ಕಿಶನ್ ಅವರು ನಾಯಕನಾಗಿ ಜವಾಬ್ದಾರಿಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂದು ಕಾದುನೋಡಬೇಕಿದೆ.
ಪಂದ್ಯದ ಸಮಯ, ಸ್ಥಳ, ನೇರ ಪ್ರಸಾರದ ವಿವರಗಳು
* ಟಾಸ್ ಸಮಯ: ಸಂಜೆ 7:00 ಗಂಟೆಗೆ
* ಪಂದ್ಯ ಆರಂಭ: ಸಂಜೆ 7:30 ಗಂಟೆಗೆ
* ನೇರ ಪ್ರಸಾರ (TV): ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (Star Sports Network) ಮೂಲಕ ಪಂದ್ಯವನ್ನು ವೀಕ್ಷಿಸಬಹುದು.
* ಲೈವ್ ಸ್ಟ್ರೀಮಿಂಗ್ (Digital): ಜಿಯೋ ಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ನೇರ ಪ್ರಸಾರ ಲಭ್ಯವಿರುತ್ತದೆ.
* ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಆರ್‌ಸಿಬಿ ಸಂಪೂರ್ಣ ತಂಡ
ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಸ್ವಪ್ನಿಲ್ ಸಿಂಗ್, ಸಾತ್ವಿಕ್ ದೇಸ್ವಾಲ್, ಸುಯೇಶ್ ಶರ್ಮಾ, ವಿಕ್ಕಿ ಓಸ್ತ್ವಾಲ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ನುವಾನ್ ತುಷಾರ, ರಸಿಖ್ ದಾರ್, ಜೇಕಬ್ ಡಫಿ, ಮಂಗೇಶ್ ಯಾದವ್, ಅಭಿನಂದನ್ ಸಿಂಗ್.
ಎಸ್‌ಆರ್‌ಎಚ್ ಸಂಪೂರ್ಣ ತಂಡ
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರವೀಚಂದ್ರನ್ ಸ್ಮರಣ್, ಅನಿಕೇತ್ ವರ್ಮಾ, ಅಮಿತ್ ಕುಮಾರ್, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸನ್, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕ್ ಎಡ್ವರ್ಡ್ಸ್, ಕ್ರೇನ್ಸ್ ಫುಲೆತ್ರಾ, ಪ್ಯಾಟ್ ಕಮ್ಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನಾದ್ಕಟ್, ಬ್ರೈಡನ್ ಕಾರ್ಸ್, ಶಿವಂ ಮಾವಿ, ಈಶಾನ್ ಮಾಲಿಂಗ, ಜೀಶನ್ ಅನ್ಸಾರಿ, ಪ್ರಫುಲ್ ಹಿಂಗೆ, ಸಾಕಿಬ್ ಹುಸೈನ್.












Click it and Unblock the Notifications