Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್‌ಸಿಬಿ.. ಆರ್‌ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್
Jacob Bethell: ಆರ್‌ಸಿಬಿಯ ಸ್ಟಾರ್ ಬ್ಯಾಟರ್ ಆಗಿರುವ ಜೇಕಬ್ ಬೆಥೆಲ್ ಅವರು, ಟಿ20 ವಿಶ್ವಕಪ್ 2026 ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದಾಗ ನಡೆದ ಒಂದು ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಖತ್ ಸೌಂಡ್ ಮಾಡುತ್ತಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದರೂ, ಅಲ್ಲಿ ಆರ್‌ಸಿಬಿ ತಂಡದ ಪರ ಘೋಷಣೆಗಳು ಕೇಳಿಬರುತ್ತಿದ್ದವು ಎಂದು ಬೆಥೆಲ್ ತಿಳಿಸಿದ್ದಾರೆ. "ಪಂದ್ಯದ ಆ ಒತ್ತಡದ ಕ್ಷಣಗಳಲ್ಲೂ ನನಗೆ ಆರ್‌ಸಿಬಿ.. ಆರ್‌ಸಿಬಿ ಎನ್ನುವ ಘೋಷಣೆಗಳು ಕೇಳಿಬಂದವು. ಅವರು ನನಗೆ ತೋರಿಸಿದ ಪ್ರೀತಿಗೆ ಮನಸೋತುಬಿಟ್ಟೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇವಲ ಐಪಿಎಲ್ ಸಮಯದಲ್ಲಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಆರ್‌ಸಿಬಿ ಘೋಷಣೆಗಳು ಮೊಳಗುತ್ತಿರುವುದು ಭಾರತದಲ್ಲಿ ಈ ಫ್ರಾಂಚೈಸಿಯ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ. ಇದರಿಂದ ಆರ್‌ಸಿಬಿ ಎಂದರೆ ಬರಿ ತಂಡವಲ್ಲ, ಅದೊಂದು ಎಮೋಷನ್ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ.
ಬೆಥೆಲ್ ಹಂಚಿಕೊಂಡ ಅನುಭವ ಹೀಗಿದೆ
"ಟಿ20 ವಿಶ್ವಕಪ್ 2026 ಸೆಮಿಫೈನಲ್ ವೇಳೆ ಇಡೀ ವಾಂಖೆಡೆ ಕ್ರೀಡಾಂಗಣವೇ ಮೌನವಾಗಿದ್ದ ಸಂದರ್ಭದಲ್ಲಿ ನನಗೆ 'ಆರ್‌ಸಿಬಿ... ಆರ್‌ಸಿಬಿ... ' ಎಂಬ ಘೋಷಣೆಗಳು ಕೇಳಿಸಿದವು. ಇದು ನಿಜಕ್ಕೂ ಗಮನಾರ್ಹ ಮತ್ತು ಅದ್ಭುತವಾಗಿತ್ತು. ಆ ಒಂದು ಕ್ಷಣವು ಆರ್‌ಸಿಬಿ ತಂಡಕ್ಕೆ ಭಾರತದಲ್ಲಿ ಎಂತಹ ಅಚಲವಾದ ಅಭಿಮಾನಿ ಬಳಗವಿದೆ ಎಂಬುದನ್ನು ಸಾಬೀತುಪಡಿಸಿತು," ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆಯುತ್ತಿದ್ದರೂ, ಅಲ್ಲಿ ಐಪಿಎಲ್ ತಂಡವೊಂದರ ಘೋಷಣೆ ಮೊಳಗಿದ್ದು ಎಲ್ಲರ ಗಮನ ಸೆಳೆದಿದೆ. ಇದು ಆರ್‌ಸಿಬಿ ಬ್ರ್ಯಾಂಡ್ ಮತ್ತು ಅದರ ಅಭಿಮಾನಿಗಳ ಪ್ರೀತಿ ಎಷ್ಟು ವ್ಯಾಪಕವಾಗಿದೆ ಎಂಬುದಕ್ಕೆ ಪ್ರಮುಖ ಸಾಕ್ಷಿ. ಬೆಥೆಲ್ ಅವರು ಈ ಬಾರಿ ಆರ್‌ಸಿಬಿ ಪರವಾಗಿ ಕಣಕ್ಕಿಳಿಯುತ್ತಿರುವುದು ಈ ಅಭಿಮಾನಿಗಳ ಘೋಷಣೆಗೆ ಮತ್ತಷ್ಟು ಬಲ ತಂದಿದೆ.
48 ಎಸೆತಗಳಲ್ಲಿ 105 ರನ್ ಸಿಡಿಸಿದ ಬೆಥೆಲ್
22 ವರ್ಷದ ಯುವ ಪ್ರತಿಭೆ ಜೇಕಬ್ ಬೆಥೆಲ್ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಕೇವಲ 48 ಎಸೆತಗಳಲ್ಲಿ 105 ರನ್ ಸಿಡಿಸುವ ಮೂಲಕ ಅವರು ಇಂಗ್ಲೆಂಡ್ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿದರು. ಇದು ಟಿ20 ವಿಶ್ವಕಪ್ ಇತಿಹಾಸದ ಅತ್ಯಂತ ರೋಚಕ ಶತಕಗಳಲ್ಲಿ ಒಂದಾಗಿ ದಾಖಲಾಯಿತು.
ಬೆಥೆಲ್ ಅವರ ಈ ಭರ್ಜರಿ ಹೋರಾಟದ ಹೊರತಾಗಿಯೂ, ಅಂತಿಮವಾಗಿ ಇಂಗ್ಲೆಂಡ್ ತಂಡವು ಕೇವಲ 7 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಆದರೆ, ಪಂದ್ಯದ ಕೊನೆಯ ಹಂತದವರೆಗೂ ಗೆಲುವಿನ ಆಸೆ ಜೀವಂತವಾಗಿರಿಸಿದ್ದ ಬೆಥೆಲ್ ಅವರ ಈ ಆಟವು ಭಾರತೀಯ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಯಿತು.
ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಬೆಥೆಲ್ ಫಿದಾ
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಟದ ಬಗ್ಗೆ ಹರಿದಾಡುತ್ತಿರುವ ವಿಡಿಯೋಗಳ ಬಗ್ಗೆ ಮಾತನಾಡುತ್ತಾ, "ನನ್ನ ಬ್ಯಾಟಿಂಗ್‌ಗೆ ಸಂಬಂಧಿಸಿದ ಕೆಲವು ಎಡಿಟ್ ಮಾಡಿದ ವಿಡಿಯೋಗಳನ್ನು ನಾನು ನೋಡಿದೆ. ಇಲ್ಲಿನ ಅಭಿಮಾನಿಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ತುಂಬಾ ಸೃಜನಶೀಲರಾಗಿದ್ದಾರೆ," ಎಂದು ಬೆಥೆಲ್ ಮೆಚ್ಚುಗೆ ಸೂಚಿಸಿದ್ದಾರೆ.
"ಆ ಇನ್ನಿಂಗ್ಸ್ ನಿಜಕ್ಕೂ ಅದ್ಭುತವಾಗಿತ್ತು ಮತ್ತು ನಾನು ಪ್ರತಿ ಕ್ಷಣವನ್ನೂ ಆನಂದಿಸಿದೆ. ಆದರೆ ಅಂತಿಮವಾಗಿ ಗೆಲುವಿನ ಗೆರೆಯನ್ನು ದಾಟಲು ಸಾಧ್ಯವಾಗದಿದ್ದಕ್ಕೆ ಸ್ವಲ್ಪ ಬೇಜಾರಾಯಿತು. ಗೆಲುವಿನ ಹತ್ತಿರ ಬಂದು ಸೋತಿದ್ದಕ್ಕೆ ಭಾರತೀಯ ಅಭಿಮಾನಿಗಳು ಖಂಡಿತವಾಗಿಯೂ ಖುಷಿಯಾಗಿರುತ್ತೀರಿ ಎಂದು ನನಗೆ ಗೊತ್ತು," ಎಂದು ತಮಾಷೆಯಾಗಿ ಹೇಳಿ ಗಮನ ಸೆಳದರು.
WC Semis 🆚 India. Wankhede. Big total to chase. Starboy steals the show. ⭐️🥶
— Royal Challengers Bengaluru (@RCBTweets) March 26, 2026
Jacob Bethell talks about his famous knock in the WC semis at the Wankhede, hearing RCB chants during the game, and what the knock meant to him. (ft. a small cameo by Salty) ♥️
Watch it all on… pic.twitter.com/6a1HZuHWN3
ಬೆಥೆಲ್ ಬಗ್ಗೆ ಫಿಲ್ ಸಾಲ್ಟ್ ಹೇಳಿದ್ದೇನು?
ಸಹ ಆಟಗಾರ ಫಿಲ್ ಸಾಲ್ಟ್ ಬೆಥೆಲ್ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ನಾವು ಆ ಪಂದ್ಯದಲ್ಲಿ ಸೋತಿದ್ದರೂ ಸಹ, ಬೆಥೆಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮೈದಾನದಲ್ಲಿ ತಮ್ಮನ್ನು ತಾವು ಸಾಭೀತುಪಡಿಸಿಕೊಂಡ ರೀತಿ ಕಂಡು ನನಗೆ ತುಂಬಾ ಹೆಮ್ಮೆ ಅನಿಸಿತು. ಆರ್‌ಸಿಬಿ ಅಭಿಮಾನಿಗಳು ಅವರನ್ನು ಸುಮ್ಮನೆ 'ಸ್ಟೈಲ್ ಬಾಯ್' ಎಂದು ಕರೆಯುತ್ತಿಲ್ಲ. ಅದಕ್ಕೊಂದು ಬಲವಾದ ಕಾರಣವಿದೆ ಎಂಬುದು ಅಂದು ಸಾಬೀತಾಯಿತು," ಎಂದು ಸಾಲ್ಟ್ ಹೇಳಿದ್ದಾರೆ. ಇನ್ನೂ ಮಾರ್ಚ್ 28ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಆರ್‌ಸಿಬಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅಭಿಮಾನಿಗಳು ಬೆಥೆಲ್ ಆಟ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
-
ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಕ್ರಿಕೆಟ್ ಆಟ, ಬೆಟ್ಟಿಂಗ್ ದಂಧೆ, ಜೂಜಿನ ಮಜಾ ಇದೇ ಮಾರ್ಚ್ 28ರಿಂದ ಪ್ರಾರಂಭ: ವಿವೇಕಾನಂದ ಎಚ್.ಕೆ. ಮಹತ್ವದ ಸಂದೇಶ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
IPL 2026: ಆರ್‌ಸಿಬಿ-ಎಸ್ಆರ್ಎಚ್ ಪಂದ್ಯದ ಟಿಕೆಟ್ ಮಾರಾಟ ಶುರು; ಇಲ್ಲಿವೆ ಬುಕಿಂಗ್ ಮಾಡುವ ವಿಧಾನಗಳು -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್‌ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
IPL 2026: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB Yash Dayal: ಐಪಿಎಲ್ 2026ರ ಸೀಸನ್ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್‌ಸಿಬಿ ಅಧಿಕೃತ ಮಾಹಿತಿ -
IPL 2026: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
IPL 2026: ಆರ್‌ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
Nandini: ಆರ್‌ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು










Click it and Unblock the Notifications