IPL 2026: ಐಪಿಎಲ್ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ
IPL 2026 Player Auction List: ಐಪಿಎಲ್ 2025 ಫೈನಲ್‌ನಲ್ಲಿ ಆರ್‌ಸಿಬಿಯು ಪಂಜಾಬ್ ಕಿಂಗ್ಸ್ ಮಣಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಚಿತ್ತ 2026ರ ಆವೃತ್ತಿಯತ್ತ ನೆಟ್ಟಿದೆ. ಒಟ್ಟು 1,355 ಆಟಗಾರರು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದರು. ಇದೀಗ ಇದರಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಹಾಗಾದ್ರೆ, ಎಷ್ಟು ಮಂದಿಯನ್ನು ಕೈಬಿಡಲಾಗಿದೆ ಹಾಗೂ ಉಳಿದುಕೊಂಡಿರುವವರ ಸಂಖ್ಯೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಇದೀಗ ಆಟಗಾರರ ಹರಾಜು ಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ಹಾಗಾದ್ರೆ ಎಷ್ಟು ಮಂದಿ ಭಾರತೀಯರಿದ್ದಾರೆ ಹಾಗೂ ಎಷ್ಟು ಜನ ವಿದೇಶಿಗರು ಇದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಇಂದು (ಡಿಸೆಂಬರ್ 9, 2025) ಟಾಟಾ ಐಪಿಎಲ್ 2026 ಆಟಗಾರರ ಹರಾಜು ಪಟ್ಟಿ ಪ್ರಕಟ ಮಾಡಲಾಗಿದೆ. ನೋಂದಾಣಿ ಮಾಡಿಕೊಂಡ ಒಟ್ಟು 1,390ರಲ್ಲಿ 350 ಆಟಗಾರರನ್ನು ಮಾತ್ರ ಹರಾಜಿಗೆ ಉಳಿಸಿಕೊಳ್ಳಲಾಗಿದೆ. ಇದರಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರಿದ್ದಾರೆ.

ಇದು ಮಿನಿ ಹರಾಜು ಪ್ರಕ್ರಿಯೆ ಕಾರಣ 10 ತಂಡಗಳಿಗೆ 77 ಆಟಗಾರರರನ್ನು ಮಾತ್ರ ಖರೀದಿ ಮಾಡಲಾಗುತ್ತದೆ. ಡಿಸೆಂಬರ್ 16ರ ಮಂಗಳವಾರ ಯುಎಇ ಕಾಲಮಾನ ಮಧ್ಯಾಹ್ನ 1 ಗಂಟೆ (ಭಾರತೀಯ ಕಾಲಮಾನ ಮಧ್ಯಾಹ್ನ 2:30)ಗೆ ಹರಾಜು ಆರಂಭವಾಗಲಿದೆ.
ಮಿನಿ ಹರಾಜು ಸ್ಥಳ, ಸಮಯ, ದಿನಾಂಕದ ವಿವರ
* ಸ್ಥಳ: ಅಬುಧಾಬಿ
* ದಿನಾಂಕ: ಡಿಸೆಂಬರ್ 16ರ ಮಂಗಳವಾರ
* ಸಮಯ: ಯುಎಇ ಕಾಲಮಾನ ಮಧ್ಯಾಹ್ನ 1 ಗಂಟೆ (ಭಾರತೀಯ ಕಾಲಮಾನ ಮಧ್ಯಾಹ್ನ 2:30)
ಮೂಲಗಳ ಪ್ರಕಾರ, 2026ರ ಆಟಗಾರರ ಅಂತಿಮ ಹರಾಜಿನ ಪಟ್ಟಿಯನ್ನು 350ಕ್ಕೆ ಇಳಿಸಲಾಗಿದೆ. ಹಾಗೂ ಆರಂಭಿಕ ಪಟ್ಟಿಯಲಿಲ್ಲದ 35 ಹೊಸ ಆಟಗಾರರ ಹೆಸರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಕ್ವಿಂಟನ್ ಡಿಕಾಕ್ ಮತ್ತು ಕ್ಯಾಮರೂನ್ ಗ್ರೀನ್ ಅವರ ಹೆಸರುಗಳಿವೆ. ಡಿಕಾಕ್ ಅನ್ನು ಕಳೆದ ಆವೃತ್ತಿಯಲ್ಲಿ ಕೆಕೆಆರ್ 2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ, ಉತ್ತಮ ಪ್ರದರ್ಶನ ಕಂಡುಬರದ ಹಿನ್ನೆಲೆ ಅವರನ್ನು ಕೈ ಬಿಡಲಾಗಿತ್ತು.
ಬಿಸಿಸಿಐ ಪ್ರಕಾರ, ಹರಾಜು ಪ್ರಕ್ರಿಯೆ ಆರಂಭ ಆಗುವ ಮೊದಲು ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಪಟ್ಟಿ ಸಿದ್ಧಪಡಿಸುವ ನಿಯಮದಂತೆ ಕ್ರಮವಾಗಿ ಬ್ಯಾಟ್ಸ್‌ಮನ್‌ಗಳು, ಆಲ್‌ರೌಂಡರ್‌ಗಳು, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗಳು, ವೇಗದ ಬೌಲರ್‌ಗಳು ಮತ್ತು ಸ್ಪಿನ್ ಬೌಲರ್‌ಗಳನ್ನ ಪಟ್ಟಿ ಮಾಡಲಾಗುತ್ತದೆ. ನಂತರ ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಲಾಗುತ್ತದೆ. ಹರಾಜಿನಲ್ಲಿ 350 ಆಟಗಾರರು ಭಾಗವಹಿಸಲಿದ್ದಾರೆ.
ರಿಟೈನ್ ಪ್ರಕ್ರಿಯೆ ಮಗಿದ ಬಳಿಕ ಕೆಕೆಆರ್ ಅತೀ ಹೆಚ್ಚು ಹಣವನ್ನು ಉಳಿಸಿಕೊಂಡಿದೆ. ಈ ಮೂಲಕ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರು ಕೊಂಡುಕೊಳ್ಳಲಿದ್ದು, ಬಲಿಷ್ಠ ತಂಡ ಕಟ್ಟುವತ್ತು ಗಮನ ಹರಿಸಿದೆ ಎನ್ನಲಾಗುತ್ತಿದೆ. ಬಳಿಕ ಸಿಎಸ್‌ಕೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗಾದ್ರೆ ಯಾವ ಫ್ರಾಂಚೈಸಿ ಎಷ್ಟು ಹಣ ಉಳಿಸಿಕೊಂಡಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಾವ ಫ್ರಾಂಚೈಸಿ ಎಷ್ಟು ಹಣ ಉಳಿಸಿಕೊಂಡಿದೆ?
* ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): 64.30 ಕೋಟಿ ರೂಪಾಯಿ
* ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ): 43.40 ಕೋಟಿ ರೂಪಾಯಿ
* ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್): 25.50 ಕೋಟಿ ರೂಪಾಯಿ
* ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ): 22.95 ಕೋಟಿ ರೂಪಾಯಿ
* ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ): 21.8 ಕೋಟಿ ರೂಪಾಯಿ
* ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ): 16.40 ಕೋಟಿ ರೂಪಾಯಿ
* ರಾಜಸ್ಥಾನ್ ರಾಯಲ್ಸ್ (ಆರ್‌ಆರ್): 16.05 ಕೋಟಿ ರೂಪಾಯಿ
* ಗುಜರಾತ್ ಟೈಟಾನ್ಸ್ (ಜಿಟಿ): 12.9 ಕೋಟಿ ರೂಪಾಯಿ
* ಪಂಜಾಬ್ ಕಿಂಗ್ಸ್ (ಪಿಬಿಕೆಎಸ್): 11.5 ಕೋಟಿ ರೂಪಾಯಿ
* ಮುಂಬೈ ಇಂಡಿಯನ್ಸ್ (ಎಂಐ): 2.75 ಕೋಟಿ ರೂಪಾಯಿ
ಎಲ್ಲಾ ತಂಡಗಳಿಗೂ ಹೋಲಿಕೆ ಮಾಡಿದರೆ ಹಾಲಿ ಚಾಂಪಿಯನ್ ತಂಡ ಆರ್‌ಸಿಬಿ ಬಹುತೇಕ ಕಳೆದ ಬಾರಿಯ ಆಟಗಾರರನ್ನೇ ಉಳಿಸಿಕೊಂಡಿದೆ. ದೊಡ್ಡ ಬದಲಾವಣೆಗಳೇನು ಆಗಿಲ್ಲ. ಇನ್ನೂ ಇದೀಗ ಈ ಫ್ರಾಂಚೈಸಿಯ ಗುರಿ ಇಬ್ಬರು ಆಲ್‌ರೌಂಡರ್‌ಗಳನ್ನು ಕೊಂಡುಕೊಳ್ಳುವುದಾಗಿದೆ. ಹಾಗಾದ್ರೆ ಯಾರನ್ನು ಬರಮಾಡಿಕೊಳ್ಳಲಿದೆಯೋ ಎಂದು ಕಾದುನೋಡಬೇಕಿದೆ.












Click it and Unblock the Notifications