ಐಪಿಎಲ್ 2025 ಪುನರಾರಂಭಕ್ಕೆ ಮುಹೂರ್ತ ಫಿಕ್ಸ್: ದಿನಾಂಕಗಳ ಮಾಹಿತಿ ಇಲ್ಲಿದೆ

IPL 2025: ಭಾರತ-ಪಾಕ್‌ ನಡುವೆ ಉದ್ವಿಗ್ನಗೊಂಡ ಹಿನ್ನೆಲೆ ಬಿಸಿಸಿಐ ಐಪಿಎಲ್‌ 2025ರ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಿ ಒಂದು ವಾರಕ್ಕೆ ಮುಂದೂಡಿಕೆ ಮಾಡಿತ್ತು. ಆದರೆ, ಇದೀಗ ಉಳಿದ ಪಂದ್ಯಗಳ ಪುನರಾರಂಭಕ್ಕೆ ದಿನಾಂಕ ನಗದಿ ಮಾಡಲಾಗಿದೆ. ಹಾಗಾದ್ರೆ ಯಾವಾಗಿನಿಂದ ಆರಂಭ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಪ್ರಾಚೈಸಿಗಳ ಮನವಿ ಮೇರೆಗೆ ಐಪಿಎಲ್‌ 2025ರ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು ಎಂದು ಬಿಸಿಸಿಐ ತಿಳಿಸಿತ್ತು. ಒಂದು ವಾರ ಆದ ಮೇಲೆ ಪರಿಸ್ಥಿತಿ ನೋಡಿಕೊಂಡು ಹೊಸ ವೇಳಾಪಟ್ಟಿ ಪ್ರಕಟ ಮಾಡುವುದಾಗಿಯೂ ತಿಳಿಸಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆ ಮತ್ತೆ ಆಡಿಸಲು ದಿನಾಂಕವನ್ನು ನಗದಿ ಮಾಡಲಾಗಿದೆ.

IPL 2025 When will the remaining matches restart Know details

ಐಪಿಎಲ್‌ನಲ್ಲಿ ಬರೀ ದೇಶದ ಆಟಗಾರರು ಅಷ್ಟೇ ಅಲ್ಲದೆ, ವಿದೇಶ ಆಟಗಾರರು ಆಡುತ್ತಿದ್ದರಿಂದ ಅವರ ಭದ್ರತೆ ಕೂಡ ನಮ್ಮ ಮೇಲಿತ್ತು. ಆದರಿಂದ ಮುಂದೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೆ ಆಡಿಸಲು ನಿರ್ಧರಿಸಲಾಗಿದೆ. ಶನಿವಾರ ಸಂಜೆ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದು, ಈ ವಾರದಲ್ಲೇ ಟೂರ್ನಿ ಮತ್ತೆ ಆರಂಭವಾಗುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.

ಅದರಲ್ಲೂ, ಪಂದ್ಯಗಳು ಆರಂಭವಾಗುದು ತಡವಾದ್ರೆ, ಕೆಲ ವಿದೇಶಿ ಆಟಗಾರರು ಐಪಿಎಲ್‌ ತೊರೆದು ಅವರ ದೇಶದಲ್ಲಿ ನಡೆಯುವ ಟೂರ್ನಿಗೆ ಹೋಗುವ ಸಾಧ್ಯತೆಯಿದೆ. ಕೆಲವೇ ದಿನಗಳಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ಇಂಗ್ಲೆಂಡ್‌ ನಡುವೆ ಸರಣಿಗಳು ಇದ್ದು, ಈ ದೇಶದ ಆಟಗಾರರು ತೊರೆಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ಇನ್ನು ಭಾರತ-ಪಾಕಿಸ್ತಾನದ ನಡುವೆ ಪರಿಸ್ಥಿತಿ ಗಮನಿಸಿದ ಇಂಗ್ಲೆಂಡ್‌ ತಮ್ಮ ದೇಶದಲ್ಲಿ ಉಳಿದ ಐಪಿಎಲ್‌ ಪಂದ್ಯಗಳನ್ನು ನಡೆಸುವಂತೆ ಆಹ್ವಾನ ನೀಡಿತ್ತು. ಆದರೆ, ಇದೀಗ ಎರಡು ದೇಶಗಳ ನಡುವೆ ಕದನ ವಿರಾಮ ಹಿನ್ನೆಲೆ ಟೂರ್ನಿಯನ್ನು ಭಾರತದಲ್ಲೇ ಆಯೋಜನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಆದರೆ ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯವನ್ನು ಮಾತ್ರ ಬೇರೆ ಕಡೆಗೆ ಸ್ಥಳಾಂತರ ಮಾಡಲಿ ತೀರ್ಮಾನ ಮಾಡಲಾಗಿದೆ. ಈಗಾಗಲೇ ಮೇ 9ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಯುದ್ಧ ಭೀತಿ ಹಿನ್ನೆಲೆ ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ನಂತರ ಮಾರನೇ ದಿನ ಈ ಬಾರಿಯ ಈ ಇಡೀ ಐಪಿಎಲ್‌ ಟೂರ್ನಿಯನ್ನೇ ಅರ್ಧಕ್ಕೆ ರದ್ದುಪಡಿಸಿ ಮುಂದೂಡಿಕೆ ಮಾಡಲಾಗಿತ್ತು.

ಆದರೆ, ಇದೀಗ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮತ್ತೆ ನಡೆಸುವ ಮೂಲಕ ಐಪಿಎಲ್ಗೆ ಚಾಲನೆ ನೀಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆಯೇ ಮೇ 15 ಅಥವಾ 16ರಿಂದ ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ಇದೇ ತಿಂಗಳಲ್ಲೇ ಉಳಿದ ಎಲ್ಲಾ ಪಂದ್ಯಗಳನ್ನು ಆಯೋಜನೆ ಮಡಲು ಬಿಸಿಸಿಐ ನಿರ್ಧರಿಸಿದೆ. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ದಕ್ಷಿಣ ಭಾರತದಲ್ಲಿ ಆಯೋಜನೆ ಮಾಡುವ ಸಾಧ್ಯತೆಯಿದೆ. ಉಳಿದಂತೆ ಆಯಾ ತಂಡಗಳ ಹೋಮ್ ಗ್ರೌಂಡ್ನಲ್ಲೇ ಪಂದ್ಯಗಳು ನಡೆಯಲಿದೆ. ಲೀಗ್ ಹಂತದಲ್ಲಿ 13 ಮ್ಯಾಚ್ಗಳು ಹಾಗೂ ಪ್ಲೇ ಆಫ್ ರೌಂಡ್‌ನಲ್ಲಿ 4 ಪಂದ್ಯಗಳು ನಡೆಯಬೇಕಿದೆ.

ಈ ಮೂಲಕ ಐಪಿಎಲ್‌ 18ನೇ ಆವೃತ್ತಿಯನ್ನು ಪೂರ್ಣಗೊಳಿಸಲು ಬಿಸಿಸಿಐ ನಿರ್ಧರಿಸಿದ್ದು, ಮೇ 15 ಅಥವಾ 16ರಿಂದ ಮತ್ತೆ ಐಪಿಎಲ್ಗೆ ಪುನರಾರಂಭ ಮಾಡಲು ಬಹುತೇಕ ಖಚಿತವಾಗಿದೆ. ಇನ್ನು ಭಾರತದಿಂದ ತವರಿಗೆ ಮರಳಿರುವ ವಿದೇಶಿ ಆಟಗಾರರಿಗೆ ಒಂದು ವಾರದೊಳಗೆ ಮತ್ತೆ ಪಂದ್ಯಗಳಿಗೆ ಹಾಜರಾಗುವಂತೆ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ಸೂಚನೆ ನೀಡಿವೆ. ಅಲ್ಲದೆ, ವಿದೇಶಿ ಆಟಗಾರರನ್ನು ಕಳುಹಿಸಿಕೊಡುವಂತೆ ಬಿಸಿಸಿಐ ಸಹ ಆಯಾ ಕ್ರಿಕೆಟ್ ಮಂಡಳಿ ಜೊತೆ ಚರ್ಚೆ ಮಾಡಲಿದೆ ಎಂದು ತಿಳಿದುಬಂದಿದೆ.

ಬಿಸಿಸಿಐ ಐಪಿಎಲ್ ಪುನರಾರಂಭಕ್ಕೆ ದಿನಾಂಕ ನಿಗದಿಯಾಗಿದೆ. ಆದರೂ, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಸದ್ಯ ಭಾರತ-ಪಾಕಿಸ್ತಾನ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದ್ದರಿಂದ ಧರ್ಮಶಾಲಾ ಹೊರತುಪಡಿಸಿ ಉಳಿದ ಕಡೆ ಪಂದ್ಯವನ್ನು ಆಯೋಜನೆ ಮಾಡಲು ಬಿಸಿಸಿಐ ಕೇಂದ್ರದ ಒಪ್ಪಿಗೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಈ ಬಾರಿ ಪ್ಲೇ ಆಫ್‌ ತಲುಪಲು ಐದು ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಪೈಪೋಟಿ ಏರ್ಪಟ್ಟಿದ್ದು, ಉಳಿದ ತಂಡಗಳು ಬಹುತೇಕ ಈ ರೇಸ್‌ನಿಂದ ಹೊರಬಿದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+