Get Updates
Get notified of breaking news, exclusive insights, and must-see stories!

IPL 2024: ಎಂಎಸ್‌ ಧೋನಿ, ದಿನೇಶ್ ಕಾರ್ತಿಕ್‌ ಸೇರಿ ಈ ದಿಗ್ಗಜ ಆಟಗಾರರಿಗೆ ಇದೇ ಕೊನೆ ಐಪಿಎಲ್!

ಐಪಿಎಲ್ 2024 ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರು ಇಬ್ಬರೂ ಕೂಡ ಅಬ್ಬರಿಸುತ್ತಿದ್ದಾರೆ. ಒಂದು ಕಡೆ ಅಭಿಷೇಕ್ ಶರ್ಮಾ, ಮಯಾಂಕ್ ಯಾದವ್, ಶಶಾಂಕ್ ಸಿಂಗ್, ನಿತೀಶ್ ರೆಡ್ಡಿ, ಅಶುತೋಷ್ ಶರ್ಮಾ ಅವರಂತಹ ಯುವ ಆಟಗಾರರು ಮೋಡಿ ಮಾಡುತ್ತಿದ್ದರೆ, ಮತ್ತೊಂದೆಡೆ ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಅವರಂತಹ ಆಟಗಾರರು ಕೂಡ ಅಬ್ಬರಿಸುತ್ತಿದ್ದಾರೆ.

ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಹಲವು ಆಟಗಾರರಿಗೆ ಇದು ಕೊನೆಯ ಐಪಿಎಲ್ ಆಗುವ ಸಾಧ್ಯತೆ ಇದೆ. 2025ರ ಐಪಿಎಲ್‌ನಲ್ಲಿ ಈ ದಿಗ್ಗಜ ಆಟಗಾರರು ಕಣಕ್ಕಿಳಿಯುವುದು ಬಹುತೇಕ ಅನುಮಾನವಾಗಿದೆ. ಅಂತಹ ಐವರು ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ.

IPL 2025 to Miss Dhoni and Du Plessis and These Legends

ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ

42 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಆಟಕ್ಕೆ ಮನಸೋಲದವರೇ ಇಲ್ಲ. ಐಪಿಎಲ್‌ನಲ್ಲಿ ಐದು ಟ್ರೋಫಿಗಳನ್ನು ಗೆದ್ದಿರುವ ಸಿಎಸ್‌ಕೆ ತಂಡದ ನಾಯಕ. ಐಪಿಎಲ್ 2024ರ ಆವೃತ್ತಿಗೆ ಮುನ್ನ ನಾಯಕತ್ವ ತ್ಯಜಿಸಿದ್ದ ಅವರು, ರುತುರಾಜ್ ಅವರಿಗೆ ನಾಯಕತ್ವದ ಹೊಣೆ ನೀಡಿದ್ದಾರೆ. ನಿವೃತ್ತಿಯ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲವಾದರೂ, ಇದು ಅವರ ಕೊನೆಯ ಐಪಿಎಲ್ ಆಗುವ ಸಾಧ್ಯತೆ ಹೆಚ್ಚಾಗಿದೆ.

ದಿನೇಶ್ ಕಾರ್ತಿಕ್

ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರಿಗೂ ಇದು ಕೊನೆಯ ಐಪಿಎಲ್ ಆಗಿದೆ. ಸ್ವತಃ ಅವರೇ ಇದನ್ನು ಅಧಿಕೃತವಾಗಿ ಈಗಾಗಲೇ ಘೋಷಿಸಿದ್ದಾರೆ. ಈ ವರ್ಷ ಆರ್ ಸಿಬಿ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದು, ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಅವಕಾಶ ಇದೆ. ಇದು ಅವರ ಕೊನೆಯ ಐಪಿಎಲ್ ಆಗಿದ್ದು, ಟಿ20 ವಿಶ್ವಕಪ್ ಆಡಲು ಅವಕಾಶ ಸಿಗದೇ ಇದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ವಿದಾಯ ಘೋಷಿಸುವ ಸಾಧ್ಯತೆ ಇದೆ. ಈಗಾಗಲೇ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುತ್ತಿದ್ದು, ಅದನ್ನೇ ಮುಂದುವರೆಸುವ ಸಾಧ್ಯತೆ ಇದೆ.

ಫಾಫ್ ಡು ಪ್ಲೆಸಿಸ್ ಕೂಡ ವಿದಾಯ

ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೂ ಕೂಡ ಇದು ಕೊನೆಯ ಐಪಿಎಲ್ ಆವೃತ್ತಿ ಆಗುವ ಸಾಧ್ಯತೆ ಇದೆ. 2023ರ ಆವೃತ್ತಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಅವರು 36 ಸಿಕ್ಸರ್ ಸಿಡಿಸಿದ್ದರು. 39 ವರ್ಷದ ಅವರು ಈ ಬಾರಿ ಐಪಿಎಲ್ ಬಳಿಕ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಆರ್ ಸಿಬಿ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡದೇ ಇರುವುದು ಕೂಡ ಇದಕ್ಕೆ ಮತ್ತೊಂದು ಕಾರಣವಾಗಬಹುದು.

ಶಿಖರ್ ಧವನ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶಿಖರ್ ಧವನ್ ಮತ್ತೊಬ್ಬ ಶ್ರೇಷ್ಠ ಆಟಗಾರ. ವಿರಾಟ್ ಕೊಹ್ಲಿ ಬಳಿಕ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾಗಿದ್ದಾರೆ. ಎಡಗೈ ಅನುಭವಿ ಕಳೆದ ಆವೃತ್ತಿಯಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ, ಆದರೆ ಇದು ಬಹುಶಃ ಪಂಜಾಬ್ ಕಿಂಗ್ಸ್ ಮತ್ತು ಐಪಿಎಲ್ ಎರಡಕ್ಕೂ ಕೊನೆಯದಾಗಿರಬಹುದು.

ಸ್ಪಿನ್ನರ್ ಪಿಯೂಷ್ ಚಾವ್ಲಾ

ಮಾಜಿ ಐಪಿಎಲ್ ಚಾಂಪಿಯನ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಲೆಗ್ ಸ್ಪಿನ್ನರ್, ಪಿಯೂಷ್ ಚಾವ್ಲಾ ಅವರಿಗೆ ಕೂಡ ಇದು ಕೊನೆಯ ಐಪಿಎಲ್ ಆವೃತ್ತಿಯಾಗಿದೆ. 2008 ಮೊದಲ ಐಪಿಎಲ್ ಆವೃತ್ತಿಯಲ್ಲಿ ಪಿಯೂಷ್ ಚಾವ್ಲಾ ಆಡುತ್ತಿದ್ದಾರೆ. 17 ವರ್ಷಗಳಲ್ಲಿ ಹಲವಾರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ ಮತ್ತು 184 ಪಂದ್ಯಗಳಲ್ಲಿ 181 ವಿಕೆಟ್ ಪಡೆದಿದ್ದಾರೆ. ಈ ಬಾರಿ ಅವರಿಗೆ ತಂಡದಲ್ಲಿ ಅವಕಾಶ ಸಿಗದೇ ಇರುವುದು ಅವರ ಫ್ರಾಂಚೈಸ್ ಕ್ರಿಕೆಟ್ ಬದುಕನ್ನು ಇದೇ ವರ್ಷ ಕೊನೆಗಾಣಿಸುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+