IPL 2025 RCB Vs GT: ಗುಜರಾತ್ ಟೈಟಾನ್ಸ್‌ಗೆ ಆರ್‌ಸಿಬಿಯ ಈ ರಣಬೇಟೆಗಾರನದ್ದೆ ಭಯವಂತೆ

RCB Vs GT: ಐಪಿಎಲ್‌ 2025ನೇ ಸೀಸನ್‌ನಲ್ಲಿ ಈಗಾಗಲೇ ಎರಡು ಪಂದ್ಯಗಳಲ್ಲಿಯೂ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಇಂದು ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟನ್ಸ್ ವಿರುದ್ಧ ಕಾದಾಡಲಿದ್ದು, ಈ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಅತ್ತ ಜಿಟಿಗೆ ಆರ್‌ಸಿಬಿಯ ಈ ಸ್ಫೋಟಕ ಆಟಗಾರನದ್ದೇ ಭಯವಂತೆ. ಹಾಗಾದ್ರೆ ಆ ರಣಬೇಟೆಗಾರ ಯಾರೆಂದು ಇಲ್ಲಿ ತಿಳಿಯಿರಿ.

ಐಪಿಎಲ್‌ 2025ನೇ ಸೀಸನ್‌ನ ಉದ್ಘಟನಾ ಪಂದ್ಯದಲ್ಲಿ ಆರ್‌ಸಿಬಿಯು ಕೆಕೆಆರ್‌ ವಿರುದ್ಧ ಮೊದಲ ಗೆಲುವು ಸಾಧಿಸಿ ಬಳಿಕ ಚೆನ್ನೈ ವಿರುದ್ಧ ಅವರದ್ದೇ ಹೋಮ್‌ ಗ್ರೌಂಡ್‌ನಲ್ಲಿ ಭರ್ಜರಿಯಾಗಿ ಗೆದ್ದು ಬೀಗುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದೆ. ಇನ್ನು ಇಂದು (ಏಪ್ರಿಲ್‌ 2) ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಕಾದಾಡಲು ಸಜ್ಜಾಗಿದ್ದು, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ.

IPL 2025 This RCB Player s fear for Gujarat Titans Know details

ಹೋಮ್‌ ಗ್ರೌಂಡ್‌ಬಲ್ಲು ಆರ್‌ಸಿಬಿ ಗೆದ್ದಿರುವುದು ಕಡಿಮೆ. ಆದರೆ ಇಂದಿನ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಕಾತರದಲ್ಲಿದೆ. ಯಾಕಂದ್ರೆ ಈಗಾಗಲೇ 17 ವರ್ಷಗಳ ಬಳಿಕ ಮೊದಲ ಬಾರಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದು ದಾಖಲೆ ನಿರ್ಮಾಣ ಮಾಡಿದೆ. ಇದೀಗ ತಮ್ಮ ಹೋಂ ಗ್ರೌಂಡ್‌ನಲ್ಲೇ ಗೆಲುವು ಸಾಧಿಸುವ ಭರವಸೆಯಲ್ಲಿದೆ. ಹರಾಜಿನ ಬಳಿಕ ಆರ್‌ಸಿಬಿ ಅತ್ಯಂತ ದುರ್ಬಲ ತಂಡ ಎಂದು ಕ್ರಿಕೆಟ್ ಹಲವರು ಹೇಳಿದ್ದರು. ಆದರೆ, ಆರ್‌ಸಿಬಿ ಆಡಿದ 2 ಪಂದ್ಯಗಳಲ್ಲಿ ಗೆದ್ದು ಬೀಗುವ ಮೂಲಕ ಈ ಮಾತನ್ನು ಸುಳ್ಳು ಮಾಡಿದೆ.

ಇನ್ನೂ ಕೆಲ ಕ್ರಿಕೆಟ್‌ ಪಂಡಿತರ ಆರ್‌ಸಿಬಿ ದುರ್ಬಲ ತಂಡ ಎನ್ನುವವರಿಗೆ ಅಭಿಮಾನಿಗಳು ಮುಟ್ಟಿ ನೋಡಿ ಕೊಳ್ಳುವ ಹಾಗೆ ತಿರುಗೇಟು ನೀಡಿದ್ದಾರೆ. ನೋಡೋರು, ಸುಮ್ನೆ ಮಾತಾಡುವವರು ಮಾತಾಡಿಕೊಳ್ಳಲಿ, ಈ ಸಲ ಪಕ್ಕಾ ಕಪ್‌ ನಮ್ಮದೇ ಎನ್ನುವ ರೀತಿಯಲ್ಲೇ ಆರ್‌ಸಿಬಿ ಕಳೆದೆರೆಡು ಪಂದ್ಯದಲ್ಲಿ ಆಡಿದೆ. ಇಂದು ನಡೆಯಲಿರುವ ಮೂರನೇ ಪಂದ್ಯದಲ್ಲೂ ಆರ್‌‌ಸಿಬಿ ಗೆಲ್ಲುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆಮ ಈ ಬಾರು ಕಪ್‌ ನಮ್ದೆ ಅಂತಲೂ ಹೇಳುತ್ತಿದ್ದಾರೆ.

ಈ ಆವೃತ್ತಿಯಲ್ಲು ಹೋಮ್‌ ಗ್ರೌಂಡ್‌ನಲ್ಲಿ ಮೊದಲ ಪಂದ್ಯವನ್ನು ಆರ್‌ಸಿಬಿ ಇಂದು ಬಿಗ್ ಸ್ಕೋರ್ ಕಲೆಹಾಕಲಿದೆ. ಈಗಾಗಲೇ ಕಳೆದೆರಡು ಪಂದ್ಯಗಳಲ್ಲೂ ಬ್ಯಾಟಿಂಗ್‌ ವಿರಾಟ್‌ ಕೊಹ್ಲಿ, ಪಟಿದಾರ್, ಫಿಲಿಪ್ ಸಾಲ್ಟ್‌, ಲಿವಿಂಗ್‌ಸ್ಟನ್‌ ಅಬ್ಬರದ ಬ್ಯಾಟಿಂಗ್‌ ಮಾಡಿ ಉಳಿದ ತಂಡಗಳಿಗೆ ನಡುಕ ಹುಟ್ಟಿಸಿದ್ದಾರೆ. ಇದೀ ಇದೇ ಭಯ ಗುಜರಾತ್‌ ಟೈಟಾನ್ಸ್‌ಗೆ ಇದೆಯಂತೆ. ಅದರಲ್ಲೂ ಬೆಂಗಳೂರಿನಲ್ಲಿ ವಿರಾಟ್‌ ಕೊಹ್ಲಿ ಎದುರಾಳಿ ಬೌಲರ್ಸ್‌ಗಳನ್ನು ಬಗ್ಗು ಬಡಿಯುವುದರಲ್ಲಿ ಎತ್ತಿದ ಕೈ ಅಂತಾ ಹಲವಾರು ಬಾರಿ ತೋರಿಸಿದ್ದಾರೆ. ಹಾಗೆಯೇ ಇಂದು ಕೂಡ ಅಬ್ಬರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಿದ್ದಾರೆ ಅಭಿಮಾನಿಗಳು.

ಇಂದು ವಿರಾಟ್‌ ಕೊಹ್ಲಿ, ಫಿಲಿಪ್ ಸಾಲ್ಟ್‌ ಆರ್‌ಸಿಬಿ ಪರ ಅಬ್ಬರದ ಬ್ಯಾಟಿಂಗ್‌ ಮಾಡಲಿದ್ದಾರೆ. ಅವರಿಗಿಂತ ಹೆಚ್ಚು ಉತ್ತಮವಾಗಿ ಈ ಆರ್‌ಸಿಬಿ ಹುಲಿ ಆಡುತ್ತದೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಆರ್‌ಸಿಬಿಯ ನಾಯಕ ರಜತ್ ಪಟಿದಾರ್ ಕಳೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರು. ಇಂದು ಸಹ ತವರು ಅಂಗಳದಲ್ಲಿ ಆರ್ಭಟಿಸಲಿದ್ದಾರೆ ಎನ್ನುವ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ.

ಆರ್‌ಸಿಬಿ ಇದುವರೆಗೂ ಆಡಿರುವ 2 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಇದೀಗ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ವಿರಾಟ್‌ ಕೊಹ್ಲಿ ಐಪಿಎಲ್ 2025 ರಲ್ಲಿ ಉತ್ತಮ ಆರಂಭವನ್ನು ನೀಡಿದ್ದಾರೆ. ಆರ್‌ಸಿಬಿ ಹಾಲಿ ಚಾಂಪಿಯನ್ ತಂಡ ಕೆಕೆಆರ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಿದರು. ಇದರಲ್ಲಿ ಕೊಹ್ಲಿ ಅಜೇಯ 59 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 30 ಎಸೆತಗಳಲ್ಲಿ 31 ರನ್ ಚಚ್ಚಿದರು. ಆದರೆ, ದಿನದ ಅಂತ್ಯದಲ್ಲಿ ಇದು ಉತ್ತಮ ಬ್ಯಾಟಿಂಗ್ ಆಗಿತ್ತು. ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು 50 ರನ್‌ಗಳಿಂದ ಸೋಲಿಸಿ ಇತಿಹಾಸವನ್ನೇ ನಿರ್ಮಾಣ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+