IPL 2025: ಐಪಿಎಲ್ 2025ರ ವೇಳಾಪಟ್ಟಿ ಬಿಡುಗಡೆ; ಮೊದಲ ಪಂದ್ಯದಲ್ಲೇ ಆರ್‌ಸಿಬಿಗೆ ಕೆಕೆಆರ್ ಸವಾಲು
ಬಹುನಿರೀಕ್ಷಿತ 2025ರ ಐಪಿಎಲ್ ಪಂದ್ಯಾವಳಿಗೆ ವೇಳಾಪಟ್ಟಿ ಬಿಡುಗಡೆಯಾಗಿದೆ. ಬಿಸಿಸಿಐ ಭಾನುವಾರ ಸಂಜೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾರ್ಚ್ 22 ರಂದು ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವನ್ನು ಎದುರಿಸಲಿದೆ.
ಐಪಿಎಲ್ 2025ರ ಆವೃತ್ತಿಯ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳಿಗೂ ಕೂಡ ಈಡನ್ ಗಾರ್ಡನ್ಸ್ ಆತಿಥ್ಯ ವಹಿಸಲಿದೆ. ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ. ಐಪಿಎಲ್ 2025ರ ಆವೃತ್ತಿಗೆ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು, ಬಹುತೇಕ ತಂಡಗಳಲ್ಲಿ ಭಾರಿ ಬದಲಾವಣೆಗಳಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಟಿದಾರ್ ನಾಯಕತ್ವ ವಹಿಸಿಕೊಂಡಿದ್ದು, ಚೊಚ್ಚಲ ಟ್ರೋಫಿಯ ಹುಡುಕಾಟದಲ್ಲಿದೆ. ಬಹುತೇಕ ಆಲ್‌ರೌಂಡರ್ ಗಳೇ ತಂಡದಲ್ಲಿದ್ದು ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚೆನ್ನೈನ ಎಂಎ ಚಿದಂಬಂರಂ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಲಿದೆ. ಪ್ರತಿ ತಂಡಗಳು ತವರಿನಲ್ಲಿ 7 ಪಂದ್ಯಗಳನ್ನು ಆಡಲಿದ್ದು, ಹೊರಗಿನ ಅಂಗಳದಲ್ಲಿ 7 ಪಂದ್ಯಗಳನ್ನು ಆಡಲಿವೆ.
ಆರ್ ಸಿಬಿ, ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ತಂಡಗಳು ಎ ಗುಂಪಿನಲ್ಲಿ ಆಡಲಿದ್ದು. ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಬಿ ಗುಂಪಿನಲ್ಲಿ ಆಡಲಿವೆ. ಒಟ್ಟು 74 ಪಂದ್ಯಗಳು ನಡೆಯಲಿವೆ.
Mark your calendars, folks! 🥳🗓#TATAIPL 2025 kicks off on March 2️⃣2️⃣ with a clash between @KKRiders and @RCBTweets 🤜🤛
— IndianPremierLeague (@IPL) February 16, 2025
When is your favourite team's first match? 🤔 pic.twitter.com/f2tf3YcSyY
ಮೇ 20 ರಂದು ಬುಧವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಮೇ 21 ರಂದು ಎಲಿಮಿನೇಟರ್ ಪಂದ್ಯ ಕೂಡ ಇಲ್ಲೇ ನಡೆಯಲಿದೆ. ಮೇ 23 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಮೇ 25ರಂದು ಭಾನುವಾರ ರಾತ್ರಿ 7.30ಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
-
Virat Kohli: ಘನತೆಗೆ ತಕ್ಕ ಆಟ ಇಲ್ಲ; ವಿರಾಟ್ ಕೊಹ್ಲಿ ಬದಲಿಗೆ ಬೆಥೆಲ್ ಆಡಿಸುವ ಸೂಚನೆ ನೀಡಿದ್ರಾ ಭಾರತದ ಮಾಜಿ ಕ್ರಿಕೆಟಿಗ? -
ಸುಮ್ನೆ ಬಾಲ್ ಕೊಡೋ ಮಾರಾಯ.. ನಾ ಕೊಡಕಿಲ್ಲ ಏನ್ ಮಾಡ್ತೀರಾ? ಟಿಮ್ ಡೇವಿಡ್-ಅಂಪೈರ್ ಫನ್ನಿ ವಿಡಿಯೋ ಭಾರೀ ವೈರಲ್ -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಅನುಷ್ಕಾ-ಅನನ್ಯಾ ಬಿರ್ಲಾ: ನೆಟ್ಟಿಗರ ಮನಗೆದ್ದ ಆ ಹ್ಯಾಂಡ್ಶೇಕ್ ವಿಡಿಯೋ -
ಬೆಂಗಳೂರಲ್ಲಿ RCB ಪಂದ್ಯ: ಏ.15ರಂದು ಸ್ಟೇಡಿಯಂ ಸುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು











Click it and Unblock the Notifications