Rishabh Pant: ಒಬ್ಬನೇ ಪ್ಲೇಯರ್ ಮೂರು ಸ್ಲಾಟ್ ಫುಲ್: RCB ಮಾಸ್ಟರ್ ಪ್ಲ್ಯಾನ್ ರೆಡಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಆರ್‌ಸಿಬಿ.. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿರುವ ತಂಡ. ಈ ತಂಡ 17 ಆವೃತ್ತಿಯ ಐಪಿಎಲ್‌ನಲ್ಲಿ ಒಂದೇ ಒಂದು ಬಾರಿ ಕಪ್ ಗೆಲ್ಲದೇ ಇರುವ ಬೇಸರ ಇದ್ದೇ ಇದೆ. ಆದರೆ, ಅಭಿಮಾನಿಗಳು ಮಾತ್ರ ಈ ತಂಡವನ್ನು ತಲೆಯ ಮೇಲೆ ಎತ್ತಿಕೊಂಡು ಮೆರವಣಿಗೆ ಮಾಡುತ್ತಾರೆ.
ಅಭಿಮಾನಿಗಳ ಅಭಿಮಾನದ ಭಾರವನ್ನು ಕಡಿಮೆ ಮಾಡಲು ಆರ್‌ಸಿಬಿ 18ನೇ ಆವೃತ್ತಿಯ ಐಪಿಎಲ್‌ಗೆ ಭರದ ಸಿದ್ಧತೆ ನಡೆಸಿದೆ. ಈ ನಡುವೆ ಆರ್‌ಸಿಬಿ ಶತಾಯ ಗತಾಯ ಮುಂದಿನ ಬಾರಿ ಕಪ್ ಗೆಲುವಿನ ರೂಪು ರೇಷೆಗಳನ್ನು ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ.

ಪ್ರತಿಭೆಯನ್ನು ಗುರುತಿಸುವ ಕೆಲಸ ನಡೆಯಲಿ
ಟೀಮ್ ಇಂಡಿಯಾದ ಬ್ಯಾಟರ್ ಆರ್‌ಸಿಬಿ ಪಾಲಿನ ಆಪತ್ಬಾಂಧವ ದಿನೇಶ್ ಕಾರ್ತಿಕ್, ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೆ, ಅವರಿಗೆ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಂಡಿದೆ. ಈಗ ಆರ್‌ಸಿಬಿ ತಲೆ ತಿನ್ನುತ್ತಿರುವ ಪ್ರಶ್ನೆ ಒಂದೆ.. ಅದಕ್ಕೆ ಒಂದೊಂದಾಗಿ ಉತ್ತರ ಹುಡುಕು ಪ್ರಯತ್ನವನ್ನು ಮಾಡುತ್ತಿದೆ. ಮುಂದಿನ ಬಾರಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ ಈ ವೇಳೆ ಸೂಕ್ತ ಆಟಗಾರರಿಗೆ ಮಣೆ ಹಾಕುವ ಜವಾಬ್ದಾರಿ ದಿನೇಶ್ ಕಾರ್ತಿಕ್‌ಗೆ ಮ್ಯಾನೇಜ್ಮೆಂಟ್ ನೀಡಬೇಕಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕ್ಕಿ ಪಾಂಟಿಂಗ್ ತಂಡವನ್ನು ಬಿಟ್ಟು ಹೊರ ನಡೆಯುತ್ತಿದ್ದಂತೆ, ರಿಷಭ್ ಪಂತ್ ಸಹ ಡೆಲ್ಲಿ ಬಿಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿವೆ. ಒಂದು ವೇಳೆ ಈ ಸುದ್ದಿ ನಿಜವೇ ಆದಲ್ಲಿ ಆರ್‌ಸಿಬಿ ಮೇಗಾ ಪ್ಲ್ಯಾನ್ ಮಾಡಿಕೊಂಡಿದೆ. ಅಲ್ಲದೆ ಭವಿಷ್ಯದ ತಂಡವನ್ನು ರಚಿಸಲು ಹಣದ ಹೊಳೆಯನ್ನೇ ಹರಿಸಬಹುದು.
ರಿಷಭ್‌ಗೆ ಗಾಳ
ಆರ್‌ಸಿಬಿ ಸ್ಟಾರ್ ಆಟಗಾರರನ್ನು ತನ್ನ ಒಡಲಿನಲ್ಲಿ ಇಟ್ಟು ಪೋಷಿಸಿದೆ. ಈಗ ಟೀಮ್ ಮ್ಯಾನೇಜ್ಮೆಂಟ್ ಸ್ಪೋಟಕ ಬ್ಯಾಟರ್ ರಿಷಭ್ ಪಂತ್ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಇದರಿಂದ ಒಬ್ಬನೇ ವ್ಯಕ್ತಿಯ ಆಗಮನದಿಂದ ಮೂರು ಸ್ಲಾಟ್‌ಗಳು ಫುೀಗಿಲ್ ಆಗುತ್ತವೆ.

ನಾಯಕ, ವಿಕೆಟ್ ಕೀಪರ್, ಮಿಡ್ಲ್ ಆರ್ಡರ್ ಬ್ಯಾಟರ್
ಆರ್‌ಸಿಬಿ ಮುಂದೆ ಹಾರಜಿನಲ್ಲಿ ಅನುಭವಿ ವಿಕೆಟ್ ಕೀಪರ್ ಪ್ಲಸ್ ಮಿಡ್ಲ್ ಆರ್ಡರ್ ಬ್ಯಾಟರ್‌ನ ಹುಡುಕಾಟ ನಡೆಸಲಿದೆ. ಹೀಗಾಗಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಬಿಡುವುದೇ ನಿಜವಾದರೇ, ಆರ್‌ಸಿಬಿ ಮ್ಯಾನೇಜ್ಮೆಂಟ್ ಅವರೊಂದಿಗೆ ಮಾತುಕತೆಗೆ ಇಳಿಯಬಹುದು. ಇದರಿಂದ ಆರ್‌ಸಿಬಿ ತಂಡ ಮಾಡಿಕೊಂಡ ಪ್ಲ್ಯಾನ್ ವರ್ಕ್ ಆಗುತ್ತದೆ.
ರಿಷಭ್ ಒಬ್ಬ ಒಳ್ಳೆಯ ನಾಯಕ.. ಆರ್‌ಸಿಬಿ ನಿಶ್ಚಿತವಾಗಿ ಭವಿಷ್ಯದ ತಂಡವನ್ನು ಕಟ್ಟುವ ದೃಷ್ಟಿಯಿಂದ ಯುವ ನಾಯಕನ ಹುಡುಕಾಟದಲ್ಲಿದೆ. ಹೀಗಿರುವಾಗ ನುರಿತ ಆಟಗಾರನೇ ಸಿಗುವಂತಾದರೆ ಆರ್‌ಸಿಬಿ ಹಣದ ಹೊಳೆಯನ್ನೇ ಹರಿಸಬಹುದು. ಅಲ್ಲದೆ ಇವರು ವಿಕೆಟ್ ಕೀಪಿಂಗ್ ಸಹ ಮಾಡಿ ಮಿಡ್ಲ್ ಆರ್ಡರ್‌ಗೆ ನ್ಯಾಯ ಒದಗಿಸಬಲ್ಲ ಪ್ಲೇಯರ್. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ರಿಷಭ್ ಪಂತ್ ತಮ್ಮ ನಾಯಕತ್ವದ ಸ್ಕಿಲ್ಸ್ ತೋರಿಸಿದ್ದಾರೆ. ಇವರನ್ನು ತಮ್ಮ ತಂಡಕ್ಕೆ ಬರ ಮಾಡಿಕೊಳ್ಳಲು ಸಿಎಸ್‌ಕೆ ಸಹ ರಣ ತಂತ್ರ ಹೆಣೆದುಕೊಂಡಿದೆ.
ಹೀಗಾಗಿ ಆರ್‌ಸಿಬಿ ಒಂದೇ ಕಲ್ಲಿಗೆ ಮೂರು ಸ್ಲಾಟ್‌ಗಳನ್ನು ಫಿಲ್ ಮಾಡಿಕೊಳ್ಳು ಪ್ಲ್ಯಾನ್ ಮಾಡಿಕೊಂಡಿದೆ. ಒಂದು ವೇಳೆ ಈ ಪ್ಲ್ಯಾನ್ ಸಕ್ಸಸ್ ಆದಲ್ಲಿ ನಿಜಕ್ಕೂ ಅಭಿಮಾನಿಗಳಿಗೆ ಡಬಲ್ ಧಮಾಕಾ ಆಗಿರಲಿದೆ.
ಐಪಿಎಲ್‌ನಲ್ಲಿ ರಿಷಭ್ ಸಾಧನೆ
ರಿಷಭ್ ಪಂತ್ 2016ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇಲ್ಲಿವರೆಗೆ ಪಂತ್ 111 ಐಪಿಎಲ್ ಪಂದ್ಯಗಳನ್ನು ಆಡಿದ್ದು, 3284 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 18 ಅರ್ಧಶತಕಗಳು ಸೇರಿವೆ. ಇದರಲ್ಲಿ 296 ಬೌಂಡರಿ ಹಾಗೂ 154 ಸಿಕ್ಸರ್‌ಗಳು ಸೇರಿವೆ. ಇದರಲ್ಲಿ 75 ಕ್ಯಾಚ್ ಹಾಗೂ 23 ಸ್ಟಂಪ್ಸ್‌ಗಳನ್ನು ಮಾಡಿದ್ದಾರೆ.












Click it and Unblock the Notifications