RCB Vs LSG: ಇಂದು ನಡೆಯಬೇಕಿದ್ದ ಆರ್‌ಸಿಬಿ-ಎಲ್‌ಎಸ್‌ಜಿ ಐಪಿಎಲ್‌ ಪಂದ್ಯ ರದ್ದು

IPL 2025 RCB: ಇಂದು (ಮೇ 9) ಆರ್‌ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್‌ ನಡುವೆ ನಡೆಯಬೇಕಿದ್ದ ಐಪಿಎಲ್‌ 2025ರ 59ನೇ ಪಂದ್ಯ ರದ್ದಾಗಿದೆ. ಅಷ್ಟೇ ಅಲ್ಲದೆ, ಈ ಬಾರಿ ಆರ್‌ಸಿಬಿ ಕಪ್‌ ಗೆಲ್ಲುವ ಆಸೆಯನ್ನು ಬದಿಗಿಡಬೇಕಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಐಪಿಎಲ್‌ ಪ್ಲೇ ಆಫ್‌ ಅಂತ್ಯಕ್ಕೆ ಬಂದು ನಿಂತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಟೂರ್ನಿಯೂ ಮುಕ್ತಾಯವಾಗುವ ಹಂತದಲ್ಲಿತ್ತು. ಈ ನಡುವೆಯೇ ಭಾರತ-ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರವ ಹಿನ್ನೆಲೆ ಬೇರೆ ಯಾವುದೇ ದಾರಿಯಿಲ್ಲದೆ, ಆಟಗಾರರ ಸುರಕ್ಷತೆ ದೃಷ್ಟಿಯಿಂದ ಬಿಸಿಸಿಐ ಈ ಬಾರಿಯ ಇಡೀ ಟೂರ್ನಿಯನ್ನೇ ರದ್ದುಪಡಿಸಿದೆ.

IPL 2025 RCB Vs LSG IPL match suspended

ಐಪಿಎಲ್‌ ವಿಶ್ವದ ಅತ್ಯಂತ ಶ್ರೀಮಂತ ಲೀಗ್‌ ಆಗಿದೆ. ಬರೀ ಭಾರತದ ಆಟಗರರು ಅಷ್ಟೇ ಅಲ್ಲದೆ, ವಿದೇಶಿ ಆಟಗಾರರು ಸಹ ಆಡುವ ಪಂದ್ಯ ಇದಾಗಿದೆ. ಆದ್ದರಿಂದ ಅವರ ಸುರಕ್ಷತೆ ಕೂಡ ಮುಖ್ಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಲಕ್ನೋ ಮತ್ತು ಆರ್‌ಸಿಬಿ ನಡುವಿನ ಈ ಪಂದ್ಯವು ಅಟಲ್‌ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿಗದಿಯಾಗಿತ್ತು. ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ರದ್ದುಪಡಿಸಲಾಗಿದೆ. ಇದೀಗ ಇಂಡಿಯಾ-ಪಾಕ್ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ಇಡೀ ಟೂರ್ನಿಯನ್ನೇ ರದ್ದುಪಡಿಸಲಾಗಿದೆ. ಹಾಗೆಯೇ ಇಂದು ನಡೆಯಬೇಕಿದ್ದ ಲಕ್ನೋ ಮತ್ತು ಆರ್‌ಸಿಬಿ ಪಂದ್ಯ ರದ್ದಾಗಿದೆ.

ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಇಂದು ಸಭೆ ನಡೆಸಿ ಈ ನಿರ್ಧಾರ ತೆಗದುಕೊಂಡಿದೆ. ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ, ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿತ್ತು.

ಪಂದ್ಯವು ಮೇ 11ರಂದು ನಿಗದಿಯಾಗಿಯಾಗಿತ್ತು. ಅದೇ ದಿನ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಇತ್ತು. ಆದರೆ, ಇದೀಗ ಬಿಸಿಸಿಐ ಈ ಬಾರಿ ಇಡೀ ಐಪಿಎಲ್‌ ಟೂರ್ನಿಯನ್ನೇ ರದ್ದು ಮಾಡಿ ಆದೇಶ ಹೊರಡಿಸಿದೆ. ಇನ್ನೂ 16 ಪಂದ್ಯ ಉಳಿದಿರುವಾಗಲೇ ಎಲ್ಲರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದೆ.

ಇದುವರೆಗೂ ಆಡಿರುವ 17 ಸೀಸನ್‌ಗಳಿಂದ ಆರ್‌ಸಿಬಿ ಒಂದೇ ಒಂದು ಟ್ರೋಫಿ ಕೂಡ ಗೆದ್ದಿಲ್ಲ. ಆದರೆ, ಈ ಬಾರಿ ಅಂದರೆ 2025ರಲ್ಲಿ ಗೆಲ್ಲುವ ಎಲ್ಲಾ ಲಕ್ಷಣಗಳನ್ನು ಹೊಂದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಆಡಿದ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದು ಮೂರು ಸೋಲು ಕಂಡಿತ್ತು. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಅಲ್ಲದೆ, ಪ್ಲೇ ಆಫ್ ಪ್ರವೇಶಕ್ಕೆ ಕಾತರದಲ್ಲಿತ್ತು. ಈ ನಡುವೆಯೇ ಆರ್‌ಸಿಬಿ ಅಭಿಮಾನಿಗಳಿಗೆ ಆಘಾತ ಎದುರಾಗಿದೆ.

Take a Poll

ಭಾರತ-ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ಆಟಗಾರರ ಹಿತದೃಷ್ಟಿಯಿಂದ ಐಪಿಎಲ್‌ ಟೂರ್ನಿಯನ್ನು ರದ್ದುಪಡಿಸಿದೆ. ಮುಂದಿನ ಆದೇಶ ನೀಡುವವರೆಗೆ ಯಾವುದೇ ಐಪಿಎಲ್‌ ಪಂದ್ಯಗಳು ನಡೆಯುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಇಂದು ಲಕ್ನೋದಲ್ಲಿ ಆರ್‌ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯ ನಿಗಧಿಯಾಗಿತ್ತು. ಆದರೆ ಭಾರತ-ಪಾಕ್ ಸಂಘರ್ಷದ ಮಧ್ಯೆ ಟೂರ್ನಿಯನ್ನು ಬಿಸಿಸಿಐ ರದ್ದುಪಡಿಸಿದೆ. ಉಳಿದ ಐಪಿಎಲ್‌ ಪಂದ್ಯಗಳ ದಿನಾಂಕವನ್ನು ಮುಂದಿನ ದಿನಗಳಲ್ಲಿ ಮತ್ತೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ, ಸದ್ಯ ದೇಶದ ಭದ್ರತೆ ಹಾಗೂ ಸೇನೆಗೆ ಗೌರವ ನೀಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಐಪಿಎಲ್ ರದ್ದಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+