IPL RCB 2025: ಆರ್‌ಸಿಬಿಗೆ ಮರಳಿರುವ ಸ್ಟಾರ್‌ ಬೌಲರ್

IPL RCB 2025: ಅರ್ಧಕ್ಕೆ ರದ್ದಾಗಿದ್ದ ಐಪಿಎಲ್‌ 2025 ಟೂರ್ನಿ ಮೇ 17ರಿಂದ ಮತ್ತೆ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್‌ ಹಾಗೂ ಬೆಂಗಳೂರು ಮುಖಾಮುಖಿಯಾಗಲಿವೆ. ಇನ್ನು ಈಗಾಗಲೇ ತವರು ದೇಶ ಆಸ್ಟ್ರೇಯಾಗೆ ಹೋಗಿದ್ದ ಸ್ಟಾರ್‌ ಬೌಲರ್‌ವೊಬ್ಬರು ಮತ್ತೆ ಬೆಂಗಳೂರು ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಪ್ರಾಂಚೈಸಿಗಳ ಮನವಿ ಮೇರೆಗೆ ಬಿಸಿಸಿಐಯು ಐಪಿಎಲ್‌ 2025 ಟೂರ್ನಿಯನ್ನು ಅರ್ಧಕ್ಕೆ ರದ್ದಪಡಿಸಿ ಒಂದು ವಾರಕ್ಕೆ ಮುಂದೂಡಿಕೆ ಮಾಡಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಮತ್ತೆ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆಯೆ ಮೇ 17ರಿಂದ ಟೂರ್ನಿ ಆರಂಭವಾಗಲಿದ್ದು, ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯಲಿದೆ.

IPL 2025 RCB Star Bowler Return to return for remainder Matches

ಐಪಿಎಲ್‌ನಲ್ಲಿ ಬರೀ ದೇಶಿಯ ಆಟಗಾರರು ಅಷ್ಟೇ ಅಲ್ಲದೆ, ವಿದೇಶಿ ಆಟಗಾರರು ಸಹ ಪಾಲ್ಗೊಂಡಿರುತ್ತಾರೆ. ಅವರ ಭದ್ರತೆ ನಮ್ಮ ದೇಶದ ಮೇಲಿದ್ದದ್ದು, ಮತ್ತೆ ಅವರನ್ನು ಅವರ ದೇಶಗಳಿಗೆ ಪಾಪಾಸ್‌ ಕಳುಹಿಸಲಾಗಿತ್ತು. ಇದೀಗ ಮತ್ತೆ ಟೂರ್ನಿ ಆರಂಭವಾಗಲಿದ್ದು, ವಿದೇಶಿ ಆಟಗಾರರನ್ನು ಮತ್ತೆ ಕರೆಸಿಕೊಳ್ಳಲಾಗುತ್ತಿದೆ. ಈ ನಡುವೆಯೇ ಕೆಲವರು ಗಾಯದಿಂದ ಬಳಲುತ್ತಿರುವ ಹಿನ್ನೆಲೆ ಟೂರ್ನಿಯಿಂದ ಹೊರಗುಳಿದಿದ್ದರು. ಈ ಪೈಕಿ ಆರ್‌ಸಿಬಿಯ ಕೆಲ ಸ್ಫೋಟಕ ಆಟಗಾರರು ಕೂಡ ಹೊರಗುಳಿದಿದ್ದರು.

ಅದರಲ್ಲೂ ಆರ್‌ಸಿಬಿಗೆ ವರದಾನವಾಗಿದ್ದ ಮಾರಕ ಬೌಲರ್ ಜೋಶ್‌ ಹ್ಯಾಜಲ್‌ವುಡ್‌ ಸಹ ಗಾಯದಿಂದ ಬಳಲುತ್ತಿದ್ದು, ಕಳೆದ ಪಂದ್ಯದಿಂದಲೇ ಅವರು ಹೊರಗುಳಿದಿದ್ದರು. ಆದ್ದರಿಂದ ಅವರು ಮುಂದಿನ ಪಂದ್ಯಗಳಲ್ಲಿ ಆಡೋದೇ ಡೌಟ್‌ ಎನ್ನಲಾಗಿತ್ತು. ಈ ನಡುವೆಯೇ ಅವರು ಮತ್ತೆ ಫಿಟ್‌ ಆಗಿ ತಂಡಕ್ಕೆ ಮರಳಲಿದ್ದಾರೆ ಎನ್ನುವ ಶುಭ ಸುದ್ದಿಯೊಂದು ಲಭ್ಯವಾಗಿದೆ.

ಆಸ್ಟ್ರೇಲಿಯಾ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರು ಆರ್‌ಸಿಬಿಗೆ ಮರಳಲು ಸಜ್ಜಾಗಿದ್ದು, ಒಂದು ವೇಳೆ ಅವರು ಬಂದರೆ ಆರ್‌ಸಿಬಿ ಬೌಲಿಂಗ್‌ ವಿಭಾಗಕ್ಕೆ ಬಲ ಮತ್ತಷ್ಟು ಹೆಚ್ಚಾದಂತಾಗುತ್ತದೆ. ಅವರು ಈ ಸೀಸನ್‌ನಲ್ಲಿ ಆಡಿದ ಹತ್ತು ಪಂದಗಳಲ್ಲೂ ಮಾರಕ ಬೌಲಿಂಗ್‌ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿದವರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಭುಜದ ನೋವು ಹಿನ್ನೆಲೆ ಹೊರಗುಳಿದಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ದೊಡ್ಡ ಸಮಾಧಾನಕರ ಸಂಗತಿಯೆಂದರೆ, ಮಾರಕ ಬೌಲರ್ ಜೋಶ್ ಹ್ಯಾಜಲ್‌ವುಡ್ ಭಾರತಕ್ಕೆ ಮರಳುವುದು. ಇದುವರೆಗೂ ಡೆತ್ ಓವರ್‌ಗಳಲ್ಲಿ ಬೌಲಿಂಗ್‌ ಮಾಡಿ ಎದುರಾಳಿಗಳಿಗೆ ನಡುಕ ಹುಟ್ಟಿಸುವ ಮೂಲಕ ಹ್ಯಾಜಲ್‌ವುಡ್ ಆರ್‌ಸಿಬಿಯಲ್ಲಿ ಉತ್ತಮ ಬೌಲರ್ ಎನಿಸಿಕೊಂಡಿದ್ದಾರೆ.

ಆದರೆ, ಹೇಜಲ್‌ವುಡ್ ಅವರು ಭಾರತಕ್ಕೆ ಆಗಮನದ ನಿಖರವಾದ ದಿನಾಂಕ ಇನ್ನೂ ತಿಳಿದುಬಂದಿಲ್ಲ. ಈಗಾಗಲೇ ಆಡಿದ 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿಯಿಂದ ಐಪಿಎಲ್ 2025ಅನ್ನು 7 ದಿನಗಳವರೆಗೆ ರದ್ದುಗೊಳಿಸಲಾಗಿತ್ತು. ನಂತರ, ವಿದೇಶಿ ಆಟಗಾರರನ್ನು ಅವರವರ ದೇಶಗಳಿಗೆ ವಾಪಾಸ್‌ ಕಳುಹಿಸಲಾಯಿತು. ಈ ವೇಳೆ ಹೇಜಲ್‌ವುಡ್ ಸಹ ಆಸ್ಟ್ರೇಲಿಯಾಗೆ ತೆರಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+