IPL 2025 RCB: ಆರ್‌ಸಿಬಿಗೆ ಜೇಕಬ್‌ ಬೆಥಲ್‌ ಬದಲಿಗೆ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಎಂಟ್ರಿ

IPL 2025 RCB: ಐಪಿಎಲ್‌ 2025 ಟೂರ್ನಿ ಮುಗಿಯುವ ಹಂತಕ್ಕೆ ಬಂದು ತಲುಪಿದೆ. ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆರಂಭದಿಂದಲೂ ಈವರೆಗೂ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು, ಪ್ಲೇ ಆಫ್‌ ಕೂಡ ಪ್ರವೇಶಿಸಿದೆ. ಈ ನಡುವೆಯೇ ಸ್ಟಾರ್ ಆಟಗಾರ ಜೋಕಬ್ ಬೆಥೆಲ್‌ ಆರ್‌ಸಿಬಿಯಿಂದ ಹೊರಹೋಗಲಿದ್ದು, ಇವರ ಬದಲಿಗೆ ಮತ್ತೊಬ್ಬ ಸ್ಫೋಟಕ ಬ್ಯಾಟರ್ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ. ಹಾಗಾದ್ರೆ ಯಾರು ಅವರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ..

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಆಡಿದ 12 ಪದ್ಯಗಳಲ್ಲಿ 8ರಲ್ಲಿ ಗೆದ್ದು, ಮೂರು ಸೋಲು ಒಂದು ರದ್ದಿನೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆದು ಎರಡನೇ ಸ್ಥಾನವನ್ನು ಅಲಂಕರಿಸಿದೆ. ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೆ, ಕ್ವಾಲಿಫೈಯರ್ ಪಂದ್ಯ ಆಡಲಿದೆ. ಮುಂದಿನ ಪಂದ್ಯ ನಾಳೆ ಅಂದರೆ, ಶುಕ್ರವಾರ ಎಸ್‌ಆರ್‌ಎಚ್ ಹಾಗೂ ಮೇ 27ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಾದಾಡಲಿದೆ.

IPL 2025 RCB New Star Batter replaces Jacob Bethell

ಎಸ್‌ಆರ್‌ಎಚ್‌ ಪಂದ್ಯದ ಬಳಿಕ ಸ್ಪೋಟಕ ಬ್ಯಾಟರ್ ಇಂಗ್ಲೆಂಡ್‌ ಪ್ಲೆಯರ್ ಜೇಕಬ್‌ ಬೆಥೆಲ್‌ ಆರ್‌ಸಿಬಿ ತೊರೆಯಲಿದ್ದಾರೆ. ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ನಡುವೆ ಪಂದ್ಯ ಇರುವ ಹಿನ್ನೆಲೆ ಇವರು ಆರ್‌ಸಿಬಿ ತೊರೆಯಲಿದ್ದು, ಇವರ ಬದಲಿಗೆ ಮತ್ತೊಬ್ಬ ಸ್ಫೋಟಕ ಬ್ಯಾಟರ್ ನ್ಯೂಜಿಲೆಂಡ್​​ನ ಟಿಮ್ ಸೈಫೆರ್ಟ್​ ಮೇ 24ರಂದು ಎಂಟ್ರಿ ಕೊಡಲಿದ್ದಾರೆ. ಇವರು ವಿಕೆಟ್ ಬ್ಯಾಟಿಂಗ್‌ ಜೊತೆ ವಿಕೆಟ್‌ ಕೀಪರ್ ಸಾಮರ್ಥ್ಯವನ್ನು ಕೂಡ ನಿಭಾಯಿಸಬಲ್ಲವರಾಗಿದ್ದು, ಆರ್‌ಸಿಬಿ 2 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದೆ.

ಇಂಗ್ಲೆಂಡ್‌ನ ಆಲ್‌ರೌಂಡರ್ ಜೇಕಬ್‌ ಬೆಥೆಲ್‌ ರಾಷ್ಟ್ರೀಯ ಕರ್ತವ್ಯಗಳಿಗೆ ಸೇರಬೇಕಿರುವ ಹಿನ್ನೆಲೆ ಮೇ 23ರಂದು ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದ ನಂತರ ಆರ್‌ಸಿಬಿ ತೊರೆಯಲಿದ್ದಾರೆ. ಈಗಾಗಲೇ ಆರ್‌ಸಿಬಿಯು ಐಪಿಎಲ್‌ 2025 ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದು, ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳಲ್ಲಿ ಗೆದ್ದರೆ ಕ್ವಾಲಿಫೈಯರ್ ಪಂದ್ಯ ಆಡಲಿದೆ.

ಬೆಥೆಲ್‌ ಬದಲಿಗೆ 30 ವರ್ಷದ ಸೀಫರ್ಟ್ ಅವರನ್ನು ಸೇರ್ಪಡೆ ಮಾಡಿಕೊಂಡಿರುವುದಾಗಿ ಆರ್‌ಸಿಬಿ ಇನ್ಸ್ಟಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಸೀಫರ್ಟ್ ಈವರೆಗೆ ಆಡಿದ 66 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 142.85 ಸ್ಟ್ರೈಕ್ ರೇಟ್‌ನಲ್ಲಿ 1,540 ರನ್ ಗಳಿಸಿದ್ದಾರೆ. ಇದರಲ್ಲಿ 10 ಅರ್ಧಶತಕಳಿವೆ. 97 ಇವರ ಗರಿಷ್ಠ ಸ್ಕೋರ್ ಆಗಿದೆ. 2019ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ 43 ಎಸೆತಗಳಲ್ಲಿ 84 ರನ್ ಕಲೆ ಹಾಕಿದ್ದರು.

ಇದೇ ಮೇ 27ರಂದು ಎಲ್‌ಎಸ್‌ಜಿ ವಿರುದ್ಧ ನಡೆಯಲಿರುವ ಆರ್‌ಸಿಬಿಯ ಲೀಗ್ ಹಂತದ ಕೊನೆಯ ಪಂದ್ಯ ಹಾಗೂ ಪ್ಲೇ ಆಫ್‌ಗೆ ಲಭ್ಯ ಇರಲಿದ್ದಾರೆ. ಸೀಫರ್ಟ್ ಅವರನ್ನು 2 ಕೋಟಿ ರೂಪಾಯಿಗೆ ತಾತ್ಕಾಲಿಕ ಬದಲಿ ಆಟಗಾರನಾಗಿ ಖರೀದಿ ಮಾಡಲಾಗಿದೆ.

ಆರ್‌ಸಿಬಿ ತಂಡ: ಟಿಮ್ ಸೀಫರ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್, ರಜತ್ ಪಾಟಿದಾರ್(ನಾಯಕ), ಜಿತೇಶ್ ಶರ್ಮಾ(ವಿಕೆಟ್‌ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಲ್, ಸುಯಶ್ ಶರ್ಮಾ, ರಸಿಖ್ ದಾರ್ ಸಲಾಂ, ಮನೋಜ್ ಭಾಂಡಗೆ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ವಸ್ತಿಕ್ ಚಿಕಾರ, ಅಭಿನಂದನ್ ಸಿಂಗ್, ನುವಾನ್ ತುಷಾರ, ಜೋಶ್ ಹ್ಯಾಜಲ್‌ವುಡ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+